Assam Earthquake: ಬಂಗಾಳಕೊಲ್ಲಿ ಬೆನ್ನಲ್ಲೇ ಅಸ್ಸಾಂನಲ್ಲಿಯೂ ಕಂಪಿಸಿದ ಭೂಮಿ; 5 ರಷ್ಟು ತೀವ್ರತೆ ದಾಖಲು
ಗುರುವಾರ ಮುಂಜಾನೆ ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ, ಬೆಳಗಿನ ಜಾವ 2:25 ಕ್ಕೆ 16 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5 ರ ತೀವ್ರತೆ ದಾಖಲಾಗಿದ್ದು, ಭೂಮಿ ಕಂಪಿಸಿದ್ದರಿಂದ ಮನೆಯ ಒಳಾಂಗಣ ವಸ್ತುಗಳು ಅಲುಗಾಡಿರುವುದು ಕಂಡು ಬಂದಿದೆ.

ಸಾಂದರ್ಭಿಕ ಚಿತ್ರ

ದಿಸ್ಪುರ್: ಗುರುವಾರ ಮುಂಜಾನೆ ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ 5.0 ತೀವ್ರತೆಯ ಭೂಕಂಪ (Assam Earthquake) ಸಂಭವಿಸಿದ್ದು, ಗುವಾಹಟಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ಪ್ರಕಾರ, ಬೆಳಗಿನ ಜಾವ 2:25 ಕ್ಕೆ 16 ಕಿಲೋಮೀಟರ್ ಆಳದಲ್ಲಿ ಭೂಕಂಪನ ಸಂಭವಿಸಿದೆ. ಅಸ್ಸಾಂ ರಾಜ್ಯವು ಭಾರತದ ಅತ್ಯಂತ ಭೂಕಂಪ ಪೀಡಿತ ವಲಯಗಳಲ್ಲಿ ಒಂದಾಗಿರುವುದರಿಂದ ಅಲ್ಲಿ ಭೂಕಂಪಗಳು ಸಾಮಾನ್ಯ . ಅಸ್ಸಾಂ ಭೂಕಂಪನ ವಲಯ V ರ ಅಡಿಯಲ್ಲಿ ಬರುತ್ತದೆ.
ಭೂಕಂಪವು ಭೂಮಿಯ 16 ಕಿಲೋಮೀಟರ್ ಆಳದಲ್ಲಿ ಆಗಿದ್ದು, ತಡರಾತ್ರಿ ಸುಮಾರು 2:25 ಗಂಟೆಗೆ ಈ ಕಂಪನ ಸಂಭವಿಸಿದೆ ಎಂದು ಭೂಕಂಪ ಮಾನಿಟರಿಂಗ್ ಏಜೆನ್ಸಿ ಮೂಲಗಳು ತಿಳಿಸಿವೆ. ಭೂಕಂಪನ ಚಟುವಟಿಕೆಯ ಕೇಂದ್ರಬಿಂದು ಮತ್ತು ಪ್ರಭಾವದ ಬಗ್ಗೆ ವಿವರಗಳು ಇನ್ನೂ ತಿಳಿದು ಬಂದಿಲ್ಲ. ರಿಕ್ಟರ್ ಮಾಪಕದಲ್ಲಿ 5 ರ ತೀವ್ರತೆ ದಾಖಲಾಗಿದ್ದು, ಭೂಮಿ ಕಂಪಿಸಿದ್ದರಿಂದ ಮನೆಯ ಒಳಾಂಗಣ ವಸ್ತುಗಳು ಅಲುಗಾಡಿರುವುದು ಕಂಡು ಬಂದಿದೆ.
An earthquake with a magnitude of 5.0 on the Richter Scale hit Morigaon, Assam at 2.25 am today
— ANI (@ANI) February 26, 2025
(Source - National Center for Seismology) pic.twitter.com/iowhZjOJHk
ಮಂಗಳವಾರ ಬೆಳಿಗ್ಗೆ ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕೊಲ್ಕತ್ತ (Kolkata earthquake) ಮತ್ತು ಪಶ್ಚಿಮ ಬಂಗಾಳದ ಹಲವಾರು ಭಾಗಗಳಲ್ಲಿ ಕಂಪನದ ಅನುಭವವಾಗಿತ್ತು. ಬೆಳಿಗ್ಗೆ 6:10 ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ. ಭೂಕಂಪನವಾಗುತ್ತಿದ್ದಂತೆ ಕೊಲ್ಕತ್ತಾ ನಿವಾಸಿಗಳು ಭಯಭೀತರಾಗಿದ್ದರು. ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಯಾರಿಗಾದರೂ ಭೂಕಂಪನದ ಅನುಭವಾಗಿದೆಯೇ, ಎಚ್ಚರವಾಗಿರಿ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೂ ಮೊದಲು, ಬಿಹಾರದ ಸಿವಾನ್‌ನಲ್ಲಿ ಭೂಕಂಪನವಾಗಿತ್ತು. ಫೆ. 17 ರ ಬೆಳಗ್ಗೆ 08.13 ಕ್ಕೆ ಸಿಕ್ಕಿಂನ ಲಾಚುಂಗ್‌ನಲ್ಲಿ 5 ಕಿ.ಮೀ ಆಳದಲ್ಲಿ 2.3 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿತ್ತು.
ಈ ಸುದ್ದಿಯನ್ನೂ ಓದಿ: Kolkata earthquake : ಬಂಗಾಳಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ; ಕೋಲ್ಕತ್ತಾ ಸೇರಿದಂತೆ ಹಲವು ಸ್ಥಳಗಳಲ್ಲಿ ಕಂಪನದ ಅನುಭವ
ಜ. 24 ರಂದು ಮ್ಯಾನ್ಮರ್ ಮತ್ತು ಮಣಿಪುರ ಗಡಿಪ್ರದೇಶದಲ್ಲಿ ಪ್ರಬಲ ಭೂಕಂಪ(Earthquake) ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ದಾಖಲಾಗಿತ್ತು. ಭೂಕಂಪವು ಬೆಳಗಿನ ಜಾವ 12:53 ರ ಸುಮಾರಿಗೆ (ಅಕ್ಷಾಂಶ: 24.621 ಉತ್ತರ ಮತ್ತು ಉದ್ದ: 95.116 E, ಆಳ: 130 ಕಿ.ಮೀ) ಸಂಭವಿಸಿದೆ ಮತ್ತು ರಿಕ್ಟರ್ ಮಾಪಕದಲ್ಲಿ 5.1 ರಷ್ಟು ದಾಖಲಾಗಿದೆ ಎಂದು ವರದಿ ತಿಳಿಸಿವೆ. ಇನ್ನು ಭೂಕಂಪದ ಕೇಂದ್ರಬಿಂದು ಮ್ಯಾನ್ಮಾರ್‌ನ ಉತ್ತರ ಸಾಗಿಂಗ್ ವಿಭಾಗದ ಹಕಾಮ್ಟಿ ಜಿಲ್ಲೆಯ ಹೋಮಾಲಿನ್ ಪಟ್ಟಣದಲ್ಲಿದೆ ಎಂದು ಹೇಳಲಾಗಿದೆ.