ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Hyperloop Test Track: ದೇಶದ ಪ್ರಪ್ರಥಮ ಹೈಪರ್ ಲೂಪ್ ಟೆಸ್ಟ್ ಟ್ರ್ಯಾಕ್- ಡೆಲ್ಲಿಯಿಂದ ಜೈಪುರಕ್ಕೆ ಕೇವಲ ಅರ್ಧ ಗಂಟೆ ಜರ್ನಿ.... ವಿಮಾನಕ್ಕಿಂತ ಎರಡು ಪಟ್ಟು ಹೆಚ್ಚಿನ ವೇಗ!

ಭಾರತ ಇದೀಗ ಅಭಿವೃದ್ಧಿಶೀಲ ರಾಷ್ಟ್ರಗಳ ಸಾಲಿನಲ್ಲಿ ವೇಗವಾಗಿ ದಾಪುಗಾಲು ಹಾಕುತ್ತಿದೆ. ಈ ಅಭಿವೃದ್ಧಿಯ ವೇಗಕ್ಕೆ ಪೂರಕವಾಗಿ ನಮ್ಮ ಸಂಚಾರ ವ್ಯವಸ್ಥೆಗಳೂ ವೇಗವನ್ನು ಪಡೆದುಕೊಳ್ಳಬೇಕಾದ ಅನಿವಾರ್ಯತೆಯಿದೆ. ಅದಕ್ಕೆ ಪೂರಕವೆಂಬಂತೆ ದೂರದ ಪ್ರಮುಖ ನಗರಗಳನ್ನು ಬೆಸೆಯಲು ಹೈಪರ್ ಲೂಪ್ ಸಂಚಾರ ವ್ಯವಸ್ಥೆಯ ಪ್ರಾಯೋಗಿಕ ಪರೀಕ್ಷೆಗೆ ಇದೀಗ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

ದೇಶದ ಪ್ರಪ್ರಥಮ ಹೈಪರ್ ಲೂಪ್ ಟೆಸ್ಟ್ ಟ್ರ್ಯಾಕ್ ಬಗ್ಗೆ ನಿಮಗೆಷ್ಟು ಗೊತ್ತು?

ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿದ 422 ಮೀಟರ್ ಗಳ ಹೈಪರ್ ಲೂಪ್ ಟ್ರ್ಯಾಕ್.

Profile Sushmitha Jain Feb 27, 2025 1:17 PM

ನವದೆಹಲಿ: ರೈಲ್ವೇ ಇಲಾಖೆಯ (Railway Department) ಸಹಕಾರದೊಂದಿಗೆ ಐಐಟಿ ಮದ್ರಾಸ್ (IIT Madras) 422 ಮೀಟರ್ ಉದ್ದದ ದೇಶದ ಪ್ರಪ್ರಥಮ ಹೈಪರ್ ಲೂಪ್ (Hyper Loop) ಪ್ರಾಯೋಗಿಕ ಟ್ರ್ಯಾಕನ್ನು (Test Track) ಸಿದ್ಧಪಡಿಸಿದೆ. ಇದರೊಂದಿಗೆ 350 ಕಿ.ಮೀ. ದೂರವನ್ನು ಕೇವಲ 30 ನಿಮಿಷಗಳಲ್ಲಿ ಕ್ರಮಿಸಬಹುದಾಗಿದೆ. ಅಂದರೆ ಇದು ಕಾರ್ಯರೂಪಕ್ಕೆ ಬಂದಲ್ಲಿ ದೆಹಲಿಯಿಂದ (Delhi) ಸರಿಸುಮಾರು 300 ಕಿ.ಮೀ. ದೂರವಿರುವ ಜೈಪುರಕ್ಕೆ (Jaipur) ನೀವು ಕೇವಲ ಒಂದೂವರೆ ಗಂಟೆಗಳಲ್ಲಿ ಪ್ರಯಾಣಿಸಬಹುದಾಗಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ (Ahwini Vaishnav) ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದು, ಹಿಗೆ ಬರೆದುಕೊಂಡಿದ್ದಾರೆ. ‘ಸರಕಾರ-ಶೈಕ್ಷಣಿಕ ಭಾಗೀದಾರಿಕೆಯು ಭವಿಷ್ಯದ ಸಾರಿಗೆ ವ್ಯವಸ್ಥೆಯ ಆವಿಷ್ಕಾರಕ್ಕೆ ಮುನ್ನಡಿ ಬರೆಯುತ್ತಿದೆ’ ಎಂದು ಸಂತಸ ಹಂಚಿಕೊಂಡಿದ್ದಾರೆ.

ಈ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಗೆ ಭಾರತೀಯ ರೈಲ್ವೇ ಸಚಿವಾಲಯ ಹೂಡಿಕೆಯನ್ನು ಮಾಡಿದೆ. ಈ ಯೋಜನೆಯ ರೂಪುರೇಷೆಯನ್ನು ಮದ್ರಾಸ್ ಐಐಟಿಯಲ್ಲಿ ಕಾರ್ಯಗತಗೊಳಿಸಲಾಗಿದೆ. ‘422 ಮೀಟರ್ ಗಳ ಮೊದಲ ಹಂತ ಅಭಿವೃದ್ಧಿ ಹೊಂದಿದ ತಂತ್ರಜ್ಞಾನದ ಮೂಲಕ ನಡೆಸಲಾಗುತ್ತಿದೆ. ತಲಾ ಒಂದು ಮಿಲಿಯನ್ ಡಾಲರ್ ಗಳ ಮೊದಲೆರಡು ಅನುದಾನಗಳ ಬಳಿಕ, ಇದೀಗ ಈ ಯೋಜನೆಯ ಸಾಕಾರಕ್ಕೆ ಸಮಯ ಕೂಡಿಬಂದಿದೆ ಎಂದು ನನಗನ್ನಿಸುತ್ತಿದೆ. ಈ ಹೈಪರ್ ಲೂಪ್ ಪ್ರಾಜೆಕ್ಟನ್ನು ಇನ್ನಷ್ಟು ಅಭಿವೃದ್ದಿಪಡಿಸುವುದಕ್ಕಾಗಿ ಐಐಟಿ ಮದ್ರಾಸ್ ಗೆ ಮೂರನೇ ಹಂತದ ಒಂದು ಮಿಲಿಯನ್ ಡಾಲರ್ ಅನುದಾನವನ್ನು ಬಿಡುಗಡೆಗೊಳಿಸಲಾಗುವುದು.’ ಎಂದು ಸಚಿವ ವೈಷ್ಣವ್ ಹೇಳಿದ್ದಾರೆ. ಇದರ ಮೊದಲ ವ್ಯಾವಹಾರಿಕ ಪ್ರಾಜೆಕ್ಟನ್ನು ರೈಲ್ವೇ ಸದ್ಯದಲ್ಲೇ ಕೈಗೆತ್ತಿಕೊಳ್ಳುವ ನಿರಿಕ್ಷೆಯಿದೆ.

ಇದನ್ನೂ ಓದಿ: Viral Video: ತಾಜ್‍ಮಹಲ್ ಒಳಗೆ ಶಿವಲಿಂಗಕ್ಕೆ ಜಲಾಭಿಷೇಕ! ಸಕ್ಕತ್‌ ವೈರಲಾಗ್ತಿದೆ ಈ ವಿಡಿಯೊ



ಹೈಪರ್ ಲೂಪ್ ಟ್ರ್ಯಾಕ್ ಎಂದರೇನು?

‘ಐದನೇ ಸಂಚಾರ ವಿಧ’ ಎಂದೇ ಕರೆಯಿಸಿಕೊಳ್ಳುವ ಹೈಪರ್ ಲೂಪ್ ಎಂಬುದು ದೂರದ ಪ್ರದೇಶಗಳನ್ನು ಕನಿಷ್ಟ ಸಮಯದ ಅಂತರದಲ್ಲಿ ಸಾಗಲು ಇರುವಂತಹ ಅತೀ ವೇಗದ ಸಾರಿಗೆ ವ್ಯವಸ್ಥೆಯಾಗಿದೆ. ನಿರ್ವಾತ ಕೊಳವೆಗಳ ಮೂಲಕ ವಿಶೇಷ ಕ್ಯಾಪ್ಸೂಲ್ ಗಳಲ್ಲಿ ರೈಲುಗಳು ಅತ್ಯಂತ ವೇಗದಲ್ಲಿ ಸಾಗುವ ವ್ಯವಸ್ಥೆಯೇ ಹೈಪರ್ ಲೂಪ್ ಟ್ರ್ಯಾಕ್ ಆಗಿದೆ.

ನಿರ್ವಾತ ಕೊಳವೆಗಳೊಳಗೆ ಎಲೆಕ್ಟ್ರೋ ಮ್ಯಾಗ್ನೇಟ್ ಮೂಲಕ ಕಾರ್ಯ ನಿರ್ವಹಿಸುವ ಟ್ರ್ಯಾಕ್ ನಲ್ಲಿ ವೇಗವರ್ಧನ ತಂತ್ರಜ್ಞಾನದ ಮೂಲಕ ಇದು ಕಾರ್ಯಾಚರಿಸುತ್ತದೆ’ ಎಂದು ಅಧಿಕೃತ ಮಾಹಿತಿ ತಿಳಿಸಿದೆ. ಒಂದು ನಿರ್ಧಿಷ್ಟ ದಿನದಲ್ಲಿ ಇದರ ವೇಗ ಸಮುದ್ರ ಮಟ್ಟದಿಂದ ಗಂಟೆಗೆ 761 ಮೈಲುಗಳಿರಬೇಕು. ವಾತಾವರಣಕ್ಕೆ ಹೊಂದಿಕೊಳ್ಳುವಿಕೆ, ಅವಘಡ ಮುಕ್ತ ಸಂಚಾರ ಸಾಧ್ಯತೆ ಈ ಹೈಪರ್ ಲೂಪ್ ನ ವಿಶೇಷತೆಯಾಗಿದೆ. ಮತ್ತಿದು, ಕಡಿಮೆ ಇಂಧನ ಮತ್ತು 24 ಗಂಟೆಗಳ ಕಾಲ ಕಾರ್ಯಾಚರಿಸಲು ಸಾಧ್ಯವಾಗುವಂತೆ ಶಕ್ತಿ ಸಂಗ್ರಹದೊಂದಿಗೆ ಇದು ವಿಮಾನಕ್ಕಿಂತ ಎರಡುಪಟ್ಟು ವೇಗವಾಗಿ ಸಾಗಬಲ್ಲದು.’ ಎಂಬ ಮಾಹಿತಿಯನ್ನೂ ಸಹ ರೈಲ್ವೇ ಇಲಾಖೆ ನೀಡಿದೆ.