ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದ ಮುಸ್ಲಿಂ ಶಾಸಕಿ; ಭುಗಿಲೆದ್ದ ಭಾರೀ ವಿವಾದ!

Traditional lamp lighting: ಭಾರತೀಯ ಯೂನಿಯನ್ ಮುಸ್ಲಿಂ ಲೀಗ್‌ನ ಮೊದಲ ಮಹಿಳಾ ಶಾಸಕಿ ಫಾತಿಮಾ ತಹ್ಲಿಯಾ ಸಾಂಪ್ರದಾಯಿಕ ನೀಲವಿಳಕ್ಕು (ದೀಪ) ಬೆಳಗಿಸಿದ ನಂತರ ದೊಡ್ಡ ವಿವಾದ ಭುಗಿಲೆದ್ದಿದೆ. ಆದರೆ, ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಆಚರಣೆಯನ್ನು ಮಾಡುವುದು ಇಸ್ಲಾಂ ವಿರುದ್ಧವಲ್ಲ ಎಂದು ಹೇಳಿದರು.

ದೀಪ ಬೆಳಗಿಸಿದ ಮುಸ್ಲಿಂ ಶಾಸಕಿ; ಕೇರಳಂನಲ್ಲಿ ದೊಡ್ಡ ವಿವಾದ

ದೀಪ ಬೆಳಗಿಸಿದ ಮುಸ್ಲಿಂ ಶಾಸಕಿ -

Priyanka P
Priyanka P Jun 9, 2026 12:50 PM

ತಿರುವನಂತಪುರಂ, ಜೂ.9: ಕೇರಳಂ (Keralam) ಮುಸ್ಲಿಂ ಲೀಗ್ ಶಾಸಕಿ ಕಾರ್ಯಕ್ರಮವೊಂದರಲ್ಲಿ ದೀಪ ಬೆಳಗಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಕೋಝಿಕ್ಕೋಡ್ ಜಿಲ್ಲೆಯ ತಮ್ಮ ಕ್ಷೇತ್ರದಲ್ಲಿ ರೆಸ್ಟೋರೆಂಟ್ ಉದ್ಘಾಟನೆಯ ಸಂದರ್ಭದಲ್ಲಿ ಭಾರತೀಯ ಯೂನಿಯನ್ ಮುಸ್ಲಿಂ ಲೀಗ್‌ನ (Indian Union Muslim League) ಮೊದಲ ಮಹಿಳಾ ಶಾಸಕಿ ಫಾತಿಮಾ ತಹ್ಲಿಯಾ ಸಾಂಪ್ರದಾಯಿಕ ನೀಲವಿಳಕ್ಕು (ದೀಪ) ಬೆಳಗಿಸಿದ ನಂತರ ದೊಡ್ಡ ವಿವಾದ ಭುಗಿಲೆದ್ದಿದೆ.

ಈ ಘಟನೆಯು ಕೇರಳಂನ ಮುಸ್ಲಿಂ ಸಾಮಾಜಿಕ-ರಾಜಕೀಯ ವಲಯಗಳಲ್ಲಿ, ವಿಶೇಷವಾಗಿ ಸಾರ್ವಜನಿಕ ಪ್ರತಿನಿಧಿಗಳು ಇತರ ಧರ್ಮಗಳಿಗೆ ಸಂಬಂಧಿಸಿದ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಬೇಕೇ ಎಂಬ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಕ್ರಮವು ರಾಜ್ಯದ ಪ್ರಮುಖ ಸುನ್ನಿ-ಶಾಫಿ ಇಸ್ಲಾಮಿಕ್ ವಿದ್ವಾಂಸರ ಸಂಘಟನೆಯಾದ ಸಮಸ್ತ ಕೇರಳಂ ಜಮಿಯ್ಯತುಲ್ ಉಲಮಾದಿಂದ ಟೀಕೆಗೆ ಗುರಿಯಾಯಿತು.

ಈ ವಿಷಯದ ಕುರಿತು ನಡೆದ ಚರ್ಚೆಯ ಬಳಿಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸಮಸ್ತ ಕೇಂದ್ರ ಮುಶಾವರವು ಮುಸ್ಲಿಮರು ಇಸ್ಲಾಮಿಕ್ ಬೋಧನೆಗಳಲ್ಲಿ ಬೇರುಬಿಟ್ಟಿರದ ಹಾಗೂ ಇತರ ಧರ್ಮಗಳ ಅನುಯಾಯಿಗಳು ತಮ್ಮ ಧಾರ್ಮಿಕ ಸಂಪ್ರದಾಯದ ಭಾಗವಾಗಿ ಆಚರಿಸುವ ಕಾರ್ಯಕ್ರಮಗಳು ಮತ್ತು ಆಚರಣೆಗಳಲ್ಲಿ ಭಾಗವಹಿಸಬಾರದು ಎಂದು ತಿಳಿಸಿದೆ.

ಕೇರಳಂ ವಿಧಾನಸಭೆಯಲ್ಲೂ ಮೊಳಗಿದ ಕನ್ನಡ; ಬಸವಣ್ಣನ ವಚನ ವಾಚಿಸಿ ಸೌಹಾರ್ದತೆ, ಒಗ್ಗಟ್ಟಿನ ಮಂತ್ರ ಜಪಿಸಿದ ಮುಸ್ಲಿಂ ಲೀಗ್ ಶಾಸಕ ಎ.ಕೆ.ಎಂ. ಅಶ್ರಫ್

ಸಂಘಟನೆಯು, ನೀಲವಿಳಕ್ಕು (ಸಾಂಪ್ರದಾಯಿಕ ದೀಪ) ಬೆಳಗಿಸುವುದು ಐತಿಹಾಸಿಕವಾಗಿ ಮುಸ್ಲಿಮೇತರರು ವಿಶಿಷ್ಟ ಧಾರ್ಮಿಕ ಆಚರಣೆಯಾಗಿ ಪಾಲಿಸಿಕೊಂಡು ಬಂದ ಪದ್ಧತಿಯಾಗಿದೆ ಎಂದು ಉಲ್ಲೇಖಿಸಿದೆ. ಜೊತೆಗೆ, ಸಾಮುದಾಯಿಕ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಜೊತೆಗೆ ಮುಸ್ಲಿಮರು ಇಂತಹ ವಿಷಯಗಳಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದೆ.

ಇಸ್ಲಾಂ, ಇತರ ಧರ್ಮಗಳ ಜನರೊಂದಿಗೆ ಸೌಹಾರ್ದಯುತ ಸಂಬಂಧ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುತ್ತದೆ. ಆದರೆ ಇತರ ಧರ್ಮಗಳ ಧಾರ್ಮಿಕ ಆಚರಣೆಗಳನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ಸ್ಪಷ್ಟವಾದ ಗಡಿಯನ್ನು ವಿಧಿಸುತ್ತದೆ ಎಂದು ಅಬ್ದುಲ್ ಹಮೀದ್ ಫೈಝಿ ಅಂಬಲಕ್ಕಡವು, ಫೇಸ್‌ಬುಕ್ ಪೋಸ್ಟ್ ಮೂಲಕ ಸಂಸ್ಥೆಯ ನಿಲುವನ್ನು ಪುನರುಚ್ಚರಿಸಿದರು.

ಇಸ್ಲಾಮಿಕ್ ಕಾನೂನುಗಳು ಸ್ಪಷ್ಟ ಮತ್ತು ನಿರ್ದಿಷ್ಟವಾಗಿವೆ. ಪ್ರವಾದಿ ಮೊಹಮ್ಮದ್ ಅವರ ಸಹಚರರು, ಮನೆಯಲ್ಲಿ ಮೇಕೆಯನ್ನು ಕೊಂದು ಅಡುಗೆ ಮಾಡಿದಾಗ ಅದರ ಮೊದಲ ಪಾಲನ್ನು ಯಹೂದಿ ನೆರೆಹೊರೆಯವರಿಗೆ ನೀಡುವಂತೆ ತಮ್ಮ ಕುಟುಂಬದವರಿಗೆ ಸೂಚಿಸುತ್ತಿದ್ದರು. ಆದರೆ, ಇಸ್ಲಾಂ ಇತರ ಧರ್ಮಗಳ ಆಚರಣೆಗಳನ್ನು ಅನುಸರಿಸುವುದರ ಮೇಲೆ ಮತ್ತು ಆಚರಿಸುವುದರ ಮೇಲೆ ಬಲವಾದ ನಿಷೇಧವನ್ನು ವಿಧಿಸಿದೆ ಎಂದು ಫೈಝಿ ಹೇಳಿದರು.

ಒಬ್ಬ ಮುಸ್ಲಿಂ ವ್ಯಕ್ತಿ ಇಂತಹ ಆಚರಣೆಯಲ್ಲಿ ತೊಡಗಿಸಿಕೊಂಡರೆ, ಅದನ್ನು ಆಚರಣೆ ಮಾಡುವವರು ಇಸ್ಲಾಂಗೆ ವಿರುದ್ಧವಾದ ಧಾರ್ಮಿಕ ನಂಬಿಕೆಗಳನ್ನು ಸ್ವೀಕರಿಸಿ ಅದರ ಆಧಾರದ ಮೇಲೆ ನಡೆದುಕೊಂಡರೆ, ಅಂತಹ ಕೃತ್ಯವು ಇಸ್ಲಾಂ ಧರ್ಮವನ್ನು ತೊರೆದಂತೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಾಮಾಜಿಕ ಸಾಮರಸ್ಯ ಮತ್ತು ಕೋಮು ಐಕ್ಯತೆಯನ್ನು ಕಾಪಾಡಿಕೊಂಡು ಇಂತಹ ಸಮಸ್ಯೆಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವಂತೆ ಅದು ಸಾರ್ವಜನಿಕರಿಗೆ ಮನವಿ ಮಾಡಿದೆ.

ಆದರೆ, ಈ ಪೋಸ್ಟ್‌ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಆಚರಣೆಯನ್ನು ಮಾಡುವುದು ಇಸ್ಲಾಂ ವಿರುದ್ಧವಲ್ಲ ಎಂದು ಹೇಳಿದರು. ಮಸೀದಿಗಳು ಮತ್ತು ದರ್ಗಾಗಳಲ್ಲಿ ದೀಪಗಳನ್ನು ಬೆಳಗಿಸುವುದರಿಂದ ಈ ನಿರ್ದಿಷ್ಟ ಆಚರಣೆಯನ್ನು ಯಾರಿಗೂ ನಿಷಿದ್ಧವೆಂದು ಪರಿಗಣಿಸಬಾರದು ಎಂದು ಅನೇಕ ಬಳಕೆದಾರರು ವಾದಿಸಿದ್ದಾರೆ.