ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: ಗಣರಾಜ್ಯೋತ್ಸವದಂದೇ ಕೆಂಪು ಕೋಟೆ ಬಳಿ ಸ್ಫೋಟಕ್ಕೆ ಸಂಚು; ಬಂಧಿತ ಉಗ್ರ ಹೇಳಿದ್ದೇನು?

ದೆಹಲಿಯಲ್ಲಿ ಸ್ಫೋಟ ಸಂಭವಿಸುತ್ತಿದ್ದಂತೆ ದೇಶದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಕಣಿವೆ ನಾಡು ಕಾಶ್ಮೀರದಲ್ಲಿ ಉಗ್ರರರನ್ನು ಬಂಧಿಸಲಾಗಿದೆ. ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ವೈಟ್-ಕಾಲರ್ ಭಯೋತ್ಪಾದನಾ ಘಟಕಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿದೆ. ಮುಜಮ್ಮಿಲ್ ಈ ವರ್ಷದ ಜನವರಿಯಲ್ಲಿ ಕೆಂಪು ಕೋಟೆ ಪ್ರದೇಶದ ಬಳಿ ಸ್ಫೋಟ ನಡೆಸಲು ತಯಾರಿ ನಡೆಸಿದ್ದ ಎಂದು ತಿಳಿದು ಬಂದಿದೆ.

ಗಣರಾಜ್ಯೋತ್ಸವದಂದೇ ಕೆಂಪು ಕೋಟೆಯ ಬಳಿ ಸ್ಫೋಟಕ್ಕೆ ನಡೆದಿತ್ತು ಭಾರೀ ಸಂಚು!

ಸಾಂಧರ್ಬಿಕ ಚಿತ್ರ -

Vishakha Bhat
Vishakha Bhat Nov 12, 2025 2:36 PM

ನವದೆಹಲಿ ಕೆಂಪು ಕೋಟೆ ಬಳಿ ಸ್ಫೋಟ ಸಂಭವಿಸುತ್ತಿದ್ದಂತೆ ದೇಶದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಕಣಿವೆ ನಾಡು (Delhi Blast) ಕಾಶ್ಮೀರದಲ್ಲಿ ಉಗ್ರರರನ್ನು ಬಂಧಿಸಲಾಗಿದೆ. ಎನ್‌ಐಎ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ವೈಟ್-ಕಾಲರ್ ಭಯೋತ್ಪಾದನಾ ಘಟಕಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿದೆ. ಬಂಧಿಸಲ್ಪಟ್ಟ ಪ್ರಮುಖ ಶಂಕಿತರಲ್ಲಿ ಒಬ್ಬನಾದ ಡಾ. ಮುಜಮ್ಮಿಲ್ ಗನೈ , ದೆಹಲಿಯ ಕೆಂಪು ಕೋಟೆ ಪ್ರದೇಶದ ಬಳಿ ಹಲವು ಸಲ ಕಾಣಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಮುಜಮ್ಮಿಲ್ ಈ ವರ್ಷದ ಜನವರಿಯಲ್ಲಿ ಕೆಂಪು ಕೋಟೆ ಪ್ರದೇಶದ ಬಳಿ ಸ್ಫೋಟ ನಡೆಸಲು ತಯಾರಿ ನಡೆಸಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಆತನ ಮೊಬೈಲ್ ಡಂಪ್ ಡೇಟಾವನ್ನು ವಿಶ್ಲೇಷಿಸುತ್ತಿದ್ದಾರೆ. ಈ ದೀಪಾವಳಿಯಂದು ಜನದಟ್ಟಣೆ ಇರುವ ಸ್ಥಳದ ಮೇಲೆ ದಾಳಿ ಮಾಡುವ ಯೋಜನೆ ಅವರಿಗಿತ್ತು, ಆದರೆ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಮುಜಮ್ಮಿಲ್ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.

ಜನವರಿ 26 ರಂದು ಐತಿಹಾಸಿಕ ಸ್ಮಾರಕವನ್ನು ಗುರಿಯಾಗಿಸಲು ನಡೆದ ದೊಡ್ಡ ಪಿತೂರಿಯ ಭಾಗವಾಗಿ ಈ ದಾಳಿ ನಡೆದಿದೆ. ಆ ಸಮಯದಲ್ಲಿ ಭದ್ರತೆ ಹೆಚ್ಚಿರುವುದರಿಂದ ವಿಫಲವಾಗಬಹುದು ಎಂದು ಈಗ ಸ್ಫೋಟ ಮಾಡಲಾಗಿದೆ ಎಂದು ಆತ ಹೇಳಿದ್ದಾನೆ. ಮುಜಮ್ಮಿಲ್ ಮೊಬೈಲ್ ಫೋನ್‌ನಿಂದ ಪಡೆಯಲಾದ ಡಂಪ್ ಡೇಟಾದ ವಿಶ್ಲೇಷಣೆಯು ಜನವರಿ ಮೊದಲ ವಾರದಲ್ಲಿ ಕೆಂಪು ಕೋಟೆ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ಅವರ ಪುನರಾವರ್ತಿತ ಉಪಸ್ಥಿತಿಯನ್ನು ತೋರಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಡಿಜಿಟಲ್ ಹೆಜ್ಜೆಗುರುತು ಪತ್ತೆ

ಮಾಡ್ಯೂಲ್‌ನ ಚಟುವಟಿಕೆಗಳಿಗೆ ಹಣಕಾಸು ಮತ್ತು ಉಗ್ರರು ಸ್ಫೋಟಕಗಳನ್ನು ಎಲ್ಲಿಂದ ಪಡೆದರು ಎಂಬುದರ ಕುರಿತು ತಿಳಿಯಲು ಮುಜಮ್ಮಿಲ್‌ನ ಸಂವಹನ ಮತ್ತು ಡಿಜಿಟಲ್ ಹೆಜ್ಜೆಗುರುತುಗಳನ್ನು ವಿಶ್ಲೇಷಿಸುತ್ತಿದ್ದೇವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟಕ್ಕೆ ಸ್ವಲ್ಪ ಮೊದಲು ಉಮರ್ ಯಾರೊಂದಿಗಾದರೂ ಸಂಪರ್ಕದಲ್ಲಿ ಇದ್ದಾನಾ ಎಂದು ತಿಳಿಯಲು ಪೊಲೀಸರು ಹಲವಾರು ಮೊಬೈಲ್ ಡಂಪ್ ಡೇಟಾವನ್ನು, ವಿಶೇಷವಾಗಿ ಕೆಂಪು ಕೋಟೆ ಬಳಿ ಉಮರ್‌ನ ಚಲನವಲನದ ಡೇಟಾವನ್ನು ಸಂಗ್ರಹಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi bomb Blast: ಕೆಂಪು ಕೋಟೆ ಸ್ಫೋಟಕ್ಕೆ ಸಂಚು ಹೇಗೆ ರೂಪಿಸಲಾಗಿತ್ತು? ವೈಟ್‌ ಕಾಲರ್‌ ಟೆರರಿಸಂ ಜಾಲ ಹೇಗಿದೆ ಗೊತ್ತಾ?

ಏತನ್ಮಧ್ಯೆ, ಸ್ಫೋಟದಲ್ಲಿ ಭಾಗಿಯಾದ i20 ಕಾರಿನ ಚಲನವಲನಗಳನ್ನು ಅಧಿಕಾರಿಗಳು ನಕ್ಷೆ ಮಾಡುವುದನ್ನು ಮುಂದುವರೆಸಿದ್ದಾರೆ . ನವೆಂಬರ್ 10 ರಂದು ಹರಿಯಾಣದ ಧೌಜ್‌ನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದ ಆವರಣದ ಬಳಿ ವಾಹನವನ್ನು ನಿಲ್ಲಿಸಲಾಗಿತ್ತು ಮತ್ತು ನಂತರ ಅದನ್ನು ಹಳೆಯ ದೆಹಲಿಯ ಪಾರ್ಕಿಂಗ್ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು ಎಂದು ಮೂಲಗಳು ತಿಳಿಸಿವೆ.