Saturday, 24th October 2020

ನವರಾತ್ರಿ ಉತ್ಸವದ ಸಂಭ್ರಮ ಆರಂಭ

ಶಿರಸಿ: ನಾಡಿನ ಅಧಿದೇವತೆ ಶಕ್ತಿ ಪೀಠದ ಶಿರಸಿಯ ಶ್ರೀ ಮಾರಿಕಾಂಬೆಯ ಸನ್ನಿಧಾನದಲ್ಲಿ ನವರಾತ್ರಿ ಉತ್ಸವದ ಸಂಭ್ರಮ ಆರಂಭ ವಾಗಿದ್ದು, ಶ್ರೀ ದೇವಿಯ ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.
ಶನಿವಾರದಿದಂದ ೯ ದಿನಗಳ ಕಾಲ ಸಕಲ ಧಾರ್ಮಿಕ ವಿಧಿವಿಧಾನಗಳ ಮುಖಾಂತರ ವಿಜಯದಶಮಿಯ ಆಚರಣೆ ನಡೆಯ ಲಿದ್ದು, ಪ್ರತಿದಿನ ಉಡಿ,ಮಹಾಪೂಜೆ,ಪುಷ್ಪಾಲಂಕಾರ ಪೂಜೆ, ತುಲಾಭಾರ,ಮತ್ತು ಕಾಣಿಕೆ ಸೇವೆಗಳು ಮಾತ್ರ ನೆರವೆರಲಿವೆ ಎಂದು ಆಡಳಿತ ಮಂಡಳಿ ಉಪಾಧ್ಯಕ್ಷ ಮನೋಹರ ಮಲ್ಮನೆ ತಿಳಿಸಿದರು.
ಕೊವೀಡ್ ೧೯ ಇರುವ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಣೆ ಮಾಡಲಾಗುತ್ತಿದ್ದು,ಯಾವುದೇ ರೀತಿಯ ಕೀರ್ತನೆ, ಸಾಂಸ್ಕೃ ತಿಕ ಸ್ಷರ್ದಾ ಕಾರ್ಯಕ್ರಮಗಳು ನೆರವೆರುವುದಿಲ್ಲ,ಸರಕಾರದ ಸೂಚನೆಯಂತೆ ಕೋವಿಡ್ ೧೯ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ದೇವಸ್ಥಾನದಲ್ಲಿ ಚಾಚು ತಪ್ಪದೆ ಪಾಲಿಸಲಾಗುತ್ತಿದೆ.
ಭಕ್ತರು ಸರತಿ ಸಾಲಿನಲ್ಲಿ ನಿಂತು ತಮ್ಮ ಕಷ್ಟಗಳನ್ನು ಪರಿಹರಿಸಿ ಶುಭಫಲಗಳನ್ನು ನೀಡು ಎಂದು ಶ್ರೀ ದೇವಿಯಲ್ಲಿ ಅರಿಕೆ ಇಡು ತ್ತಿದ್ದಾರೆ. ಸರ್ವಾಲಂಕಾರ ಭೂಷಿತಳಾದ ಶ್ರೀ ದೇವಿಯು ಬಂದ  ಭಕ್ತರನ್ನು ಹರಸುತ್ತಿದ್ದಾಳೆ.

Leave a Reply

Your email address will not be published. Required fields are marked *