Thursday, 16th September 2021

ಲವ್, ಲ್ಯಾಂಡ್ ಜಿಹಾದ್ ತಡೆಗೆ ಕಾನೂನು: ಅಮಿತ್ ಶಾ

ಗುವಾಹಟಿ: “ಲವ್ ಮತ್ತು ಲ್ಯಾಂಡ್ ಜಿಹಾದ್”  ತಡೆಯಲು ಬಿಜೆಪಿ ಕಾನೂನುಗಳನ್ನು ಜಾರಿಗೆ ತರಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅಸ್ಸಾಂ ತನ್ನ ಮೊದಲ ಹಂತದ ವಿಧಾನಸಭಾ ಚುನಾವಣೆ ಎದುರಿಸಲು ಇನ್ನು ಒಂದೇ ದಿನ ಬಾಕಿ ಇದೆ.

ಅಸ್ಸಾಂನ ಕಾಮರೂಪದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾ, ಎಐಯುಡಿಎಫ್ ನಾಯಕ ಬದ್ರುದ್ದೀನ್ ಅಜ್ಮಲ್ “ಲ್ಯಾಂಡ್ ಜಿಹಾದ್” ನಡೆಸಿದ್ದಾರೆ. ಐದು ವರ್ಷಗಳ ನಂತರ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್’ನಲ್ಲಿ ಪಾಲ್ಗೊಳ್ಳುವ ಯಾರನ್ನೂ ಕಾಣುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇನೆ.

ಅಸ್ಸಾಂನ ಜನರ ಮುಂದೆ ಮೂರು ಚಿತ್ರಗಳಿವೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಮತ್ತು ಜನರಿಗೆ ಮಾಡಿದ ಸೇವೆ, ರಾಹುಲ್ ಗಾಂಧಿಯವರ ಪ್ರವಾಸ ಮತ್ತು ಅಜ್ಮಲ್ ಅವರ ಒಳನುಸುಳುವಿಕೆಯ ಕಾರ್ಯಸೂಚಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಆಧುನಿಕ ಕಾಲಾಪಹಾದ್ ಬದ್ರುದ್ದೀನ್ ಅಜ್ಮಲ್ ಅಸ್ಸಾಂ ಅನ್ನು ನಿಜಕ್ಕೂ ಸುರಕ್ಷಿತವಾಗಿರಿಸುತ್ತಾರೆಯೇ? ಶಾ ಪ್ರಶ್ನಿಸಿದ್ದಾರೆ.

ಬದ್ರುದ್ದೀನ್ ಅಜ್ಮಲ್ ಸರ್ಕಾರ ರಚನೆಯಾದರೆ, ಒಳನುಸುಳುವವರನ್ನು ತಡೆಯಲು ಸಾಧ್ಯವಾಗಲಿದೆಯೆ? ಡಬಲ್ ಎಂಜಿನ್ ಸರ್ಕಾರದ ಸಹಾಯದಿಂದ ಅಸ್ಸಾಂ ಅನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಪಿಎಂ ಮೋದಿ ಮಾತನಾಡಿದ್ದಾರೆ ಎಂದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily

Leave a Reply

Your email address will not be published. Required fields are marked *