Tuesday, 27th July 2021

ಹೈಟಿಯ ಪ್ರಧಾನಿಯಾಗಿ ಏರಿಯಲ್ ಹೆನ್ರಿ ಅಧಿಕಾರ ಸ್ವೀಕಾರ

ಪೋರ್ಟ್‌-ಒ-ಪ್ರಿನ್ಸ್‌ (ಹೈಟಿ): ಏರಿಯಲ್ ಹೆನ್ರಿ ಅವರು ಹೈಟಿಯ ನೂತನ ಪ್ರಧಾನಿಯಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ವೃತ್ತಿಯಿಂದ ನರರೋಗ ಶಸ್ತ್ರಚಿಕಿತ್ಸಕ ಹೆನ್ರಿ, ಈ ಮೊದಲು ಸಂಪುಟ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿ ಅವರು, ‘ನಾವು ಮಾಡಬೇಕಾದ ಕಾರ್ಯಗಳು ಬಹಳ ಕಠಿಣ ಹಾಗೂ ಸಂಕೀರ್ಣವಾದವುಗಳಾಗಿವೆ. ಎಲ್ಲರೂ ಒಗ್ಗಟ್ಟಿನಿಂದ ಈ ಸವಾಲುಗಳನ್ನು ಎದುರಿಸೋಣ’ ಎಂದರು. ಜೊವೆನೆಲ್‌ ಮೊಯಿಸ್‌ ಅವರ ಹತ್ಯೆ ಕುರಿತು ನಡೆಯುತ್ತಿರುವ ತನಿಖೆಗೆ ಮಿತ್ರ ರಾಷ್ಟ್ರಗಳ ಸಹಕಾರ ಕೋರುವೆ. ಈ ದುಷ್ಕೃತ್ಯಕ್ಕೆ ಕಾರಣರಾದವರಿಗೆ ಶಿಕ್ಷಿಸದೇ ಬಿಡುವುದಿಲ್ಲ ಎಂದರು.

ಅಧ್ಯಕ್ಷರಾಗಿದ್ದ ಜೊವೆನೆಲ್‌ ಮೊಯಿಸ್‌ ಅವರನ್ನು ಜುಲೈ 7ರಂದು ಮುಂಜಾನೆ ಅವರ ಮನೆಯಲ್ಲಿಯೇ ಸಶಸ್ತ್ರ ವ್ಯಕ್ತಿಗಳ ಗುಂಪು ಹತ್ಯೆ ಮಾಡಿತ್ತು. ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ, ಕ್ಲಾಡ್‌ ಜೋಸೆಫ್ ಅವರು ಹಂಗಾಮಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

Leave a Reply

Your email address will not be published. Required fields are marked *