Friday, 27th May 2022

NFT ಕಲಾಕೃತಿ ಮ್ಯೂಸಿಯಂ

ಶಶಾಂಕ್ ಮುದೂರಿ

ತಂತ್ರಜ್ಞಾನವು ಅದೆಂತಹ ವೇಗದಲ್ಲಿ ಸಾಗುತ್ತಿದೆ ಎಂದರೆ, ಜನಸಾಮಾನ್ಯರಿಗೆ ಆ ಜಗತ್ತಿನ ಅವೆಷ್ಟೋ ವಿಷಯಗಳು ಅರಿವಾಗುವ ಮುಂಚೆಯೇ, ಅವು ಹಳತಾಗಿರುತ್ತವೆ!

ಇದಕ್ಕೆ ಒಂದು ಉದಾಹರಣೆ ಎನ್‌ಎಫ್ಟಿ. ಒಂದು ಸುದ್ದಿ ನೋಡಿ. ಅಮೆರಿಕದ ಸಿಯಾಟಲ್‌ನಲ್ಲಿ ಜಗತ್ತಿನ ಮೊದಲ ಎನ್‌ಎಫ್ಟಿ ಕಲಾ ಮ್ಯೂಸಿಯಂ ಈಗ ಆರಂಭವಾಗಿದೆ. ಅದರ ಮುಖ್ಯ ಉದ್ದೇಶ ಬ್ಲಾಕ್‌ಚೈನ್ ಆಧಾರಿತ ಡಿಜಿಟಲ್ ಕಲೆಯನ್ನು ಪ್ರೋತ್ಸಾಹಿಸುವುದು, ಅಂತಹ ಕಲಾವಿದರ ಕಲಾಕೃತಿಗಳನ್ನು ಮಾರಲು ಅನುವು ಮಾಡಿ ಕೊಡುವುದು!

ತಂತ್ರಜ್ಞಾನದ ಪರಿಚಯ ಇಲ್ಲದ ಬಹುಪಾಲು ಜನರಿಗೆ ಈ ಸುದ್ದಿಯ ಮಹತ್ವವು ಅರಿವಾಗುವ ಸಂಭವವೇ ಇಲ್ಲ. ಏಕೆಂದರೆ, ಅಂತಹದೊಂದು ಮ್ಯೂಸಿಯಂ ಆರಂಭವಾಗಿದೆ ಎಂಬ ವಿಚಾರವು ಪ್ರಮುಖ ಎಂದು ಅರಿವಾಗಲು, ಮೊದಲು ಎನ್‌ಎಫ್ಟಿ ಎಂದರೇನು ಎಂಬುದು ಗೊತ್ತಿರಬೇಕು!

ನಾನ್ ಫಂಜಿಬಲ್ ಟೋಕನ್ ಅಥವಾ ಎನ್‌ಎಫ್ಟಿ ಎಂಬುದು ಒಂದು ಡಿಜಿಟಲ್ ಆಸ್ತಿ! ಈಚಿನ ವರ್ಷಗಳಲ್ಲಿ ಅಪಾರ ಜನಪ್ರಿಯತೆ ಪಡೆದಿರುವ ಎನ್‌ಎಫ್ಟಿಯಲ್ಲಿ ಹಣ ಹೂಡಿಕೆಯು ಈಗಿನ ಹೊಸ ತಲೆಮಾರಿನ ಕೆಲವರ ಹವ್ಯಾಸ. ಹೂಡಿಕೆಯಾಗಿ ಇದರ ಪ್ರಾಮುಖ್ಯತೆ ಅರಿವಾಗಬೇಕಾದರೆ, ಒಂದು ವಿಚಾರ ಗಮನಿಸಿ – ಕೆಲವು ಎನ್ಎಫ್ಟಿ ಕಲಾಕೃತಿಗಳು ಮಿಲಿಯ ಗಟ್ಟಲೆ ಡಾಲರುಗಳಿಗೆ ಬಿಕರಿಯಾಗುತ್ತಿವೆ! ನೆಟ್‌ವರ್ಕ್ ಹೊಂದಿರುವ ಕಂಪ್ಯೂಟರು ಗಳಲ್ಲಿ ವ್ಯವಹಾರದ ದಾಖಲೆಯ ರೂಪದಲ್ಲಿರುವ ಬ್ಲಾಕ್‌ಚೈನ್‌ನ ವೇದಿಕೆಯಲ್ಲಿ ಎನ್‌ಎಫ್ ಟಿಗಳು ರೂಪುಗೊಂಡಿವೆ.

ಪ್ರಸಿದ್ಧ ಕಲಾವಿದರು ತಮ್ಮ ಕಲಾಕೃತಿಗಳನ್ನು ಎನ್ಎಫ್ ಟಿ ರೂಪದಲ್ಲಿ ಸಂಗ್ರಹಿಸಿ, ಮಾರುತ್ತಿದ್ದಾರೆ. ಅವುಗಳ ಬೆಲೆ ಕೋಟ್ಯಂತರ ರುಪಾಯಿ ತಲುಪ ಬಹುದು. ಜನಸಾಮಾನ್ಯರು ಸಹ ತಮ್ಮ ಕಲಾಕೃತಿಗಳನ್ನು, ಛಾಯಾಚಿತ್ರಗಳನ್ನು ಎನ್‌ಎಫ್ ಟಿಗೆ ಪರಿವರ್ತಿಸಿ, ಮಾರಾಟ ಮಾಡಿ, ಸಣ್ಣ ಮೊತ್ತದ ಹಣ ಗಳಿಸಬಹುದು. ಇಂಡೋನೇಷ್ಯಾದ ಗೋಜಾಲಿ ಎಂಬ ಯುವಕ, ತನ್ನ ಸಾವಿರಾರು ಸೆಲಿಗಳನ್ನೇ ಎನ್‌ಎಫ್ಟಿ ರೂಪದಲ್ಲಿ ಮಾರಿ, ಒಂದು ಮಿಲಿಯ
ಡಾಲರ್ ಗಳಿಸಿದ್ದಾನೆ!

ಎನ್‌ಎಫ್ಟಿಯು ಸಹಜವಾಗಿ ಭವಿಷ್ಯದ ಜಗತ್ತಿನ ಉತ್ಪನ್ನ. ಅಮೆರಿಕದ ಸಿಯಾಟಲ್‌ನಲ್ಲಿ ಆರಂಭಗೊಂಡಿರುವ ಎನ್ಎಫ್ ಟಿ ಮ್ಯೂಸಿಯಂ, ಒಂದೆಡೆ ಅಂತಹ ಕಲಾಕೃತಿಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟರು, ಕಲಾವಿದರು ಮತ್ತು ಮಧ್ಯವರ್ತಿಗಳ ನಡುವ ಒಂದು ವೇದಿಕೆಯನ್ನು ರೂಪಿಸು ತ್ತದೆ. ಜತೆಗೆ, ಎನ್‌ಎಫ್ ಟಿ ಖರೀದಿ ಮಾಡಲು ಬಯಸುವವರು, ಇಲ್ಲಿ ತಮ್ಮ ಹೆಸರನ್ನು ದಾಖಲಿಸಿ, ನೇರವಾಗಿ ಕಲಾವಿದರೊಡನೆ ವ್ಯವಹಾರ ಮಾಡಬ ಹುದು.

ಎನ್‌ಎಫ್ ಟಿ ಕುರಿತು ಮಾಹಿತಿಯನ್ನು, ತಿಳಿವಳಿಕೆಯನ್ನು ಸಹ ಈ ಮ್ಯೂಸಿಯಂ ನೀಡುತ್ತದೆ. ಇಲ್ಲಿ ಕಲಾಕೃತಿಗಳ ಡಿಜಿಟಲ್ ಪ್ರದರ್ಶನವಿದೆ, ಅದನ್ನು ಜನರು ನೋಡುವ ಅವಕಾಶವೂ ಇದೆ. ಖರೀದಿಸಬಯಸುವವರು ಕಲಾಕೃತಿಗಳನ್ನು ನೋಡಿ, ಆಯ್ಕೆಮಾಡಿಕೊಳ್ಳಬಹುದು. ಮ್ಯೂಸಿಯಂನ ಸ್ಥಾಪಕ ರಲ್ಲೊಬ್ಬರಾದ ಪೀಟ್ ಹ್ಯಾಮಿಲ್ಟನ್ ಅವರ ಹೇಳಿಕೆಯನ್ನು ಗಮನಿಸಿದರೆ, ಎನ್‌ಎಫ್ ಟಿ ಕುರಿತು ಪ್ರಾಥಮಿಕ ಅರಿವು ಮೂಡಬಹುದು ‘ಯಾವುದೇ ಆಸ್ತಿಯ ಮಾಲಕತ್ವವನ್ನು ಗುರುತಿಸುವ ಒಪ್ಪಂದವೇ ಎನ್‌ಎಫ್ ಟಿ. ಈ ಟೋಕನ್ ಗಳು ಮೂಲತಃ ಒಂದು ಸಂಖ್ಯೆ – ಆ ಸಂಖ್ಯೆಯು ಕಲಾಕೃತಿಯು ಯಾರಿಗೆ ಸೇರುತ್ತದೆ ಎಂಬುದನ್ನು ತಿಳಿಸುತ್ತದೆ ಮತ್ತು ಆ ಟೋಕನ್‌ನ್ನು ನೀವು ಖರೀದಿಸಿದರೆ, ನೀವು ಆ ಕಲಾಕೃತಿಯ ಅಧಿಕೃತ ಮಾಲಕತ್ವವನ್ನು ಪಡೆಯಬಹುದು’.

ಡಿಜಿಟಲ್ ಕಲಾಕೃತಿಯ ಲೋಕದಲ್ಲಿ ಎನ್ ಎಫ್ ಟಿಯು ಹೊಸ ಕ್ರಾಂತಿಕಾರಿ ಹಾದಿಯನ್ನು ತೆರೆಯುವ ತಾಕತ್ತನ್ನು ಹೊಂದಿದೆ. ಸ್ವಯಂ ಚಾಲಿತ ವಾಹನಗಳು ವಾಹನ ಲೋಕದ ಹೊಸ ಕ್ರೇಜ್ ಎಂದರೆ ಸ್ವಯಂಚಾಲಿತ ವಾಹನಗಳು! ವಿವಿಧ ವಾಹನ ತಯಾರಕರು ಸ್ವಯಂಚಾಲಿತ ವಾಹನಗಳ ಕುರಿತು ಸಂಶೋಧನೆ, ತಯಾರಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ವೋಕ್ಸ್‌ವೇಗನ್ ಸಂಸ್ಥೆಯು, ಚಿಪ್ ತಯಾರಕಾ ಸಂಸ್ಥೆ ಕ್ವಾಲ್ಕಂ ಜತೆ ಒಂದು ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ಎಂಟು ವರ್ಷಗಳ ಅವಽಯಲ್ಲಿ ಸ್ವಯಂಚಾಲಿತ ವಾಹನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು
ಮುಂದಾಗಿದೆ. ಕ್ವಾಲ್ಕಂ ತಯಾರಿಸುವ, ವಿಶೇಷವಾಗಿ ಸ್ವಯಂಚಾಲಿತ ವಾಹನಗಳಿಗೆಂದೇ ವಿನ್ಯಾಸಗೊಳಿಸಿದ ಚಿಪ್‌ಗಳನ್ನು ೨೦೨೬ರಿಂದ ತನ್ನ ಎಲ್ಲಾ ಕಾರುಗಳಲ್ಲಿ ಅಳವಡಿಸಲಿದೆ. ಇದಕ್ಕಾಗಿ ವೋಕ್ಸ್‌ವೇಗನ್ ಸಂಸ್ಥೆಯು ಸುಮಾರು ೮,೦೫೩ ಕೋಟಿ ರುಪಾಯಿಗಳ ಬಂಡವಾಳವನ್ನು ಹೂಡಲಿದೆ.

ಈ ಸುದ್ದಿಯು ನಮ್ಮ ದೇಶದ ಮಟ್ಟಿಗೆ ಸಾಕಷ್ಟು ಪ್ರಮುಖ. ಏಕೆಂದರೆ, ವೋಕ್ಸ್‌ವೇಗನ್ ಸಂಸ್ಥೆಯು ನಮ್ಮ ದೇಶದಲ್ಲಿ ಹೆಚ್ಚು ಹೆಚ್ಚು ವಾಹನಗಳನ್ನು ತಯಾರಿಸಲು ಹೆಜ್ಜೆ ಇಟ್ಟಿದೆ. ಪೂನಾದಲ್ಲಿರುವ ವೋಕ್ಸ್‌ವೇಗನ್ ಕಾರ್ಖಾನಯು ಎಪ್ರಿಲ್ ೧೯ರಿಂದ ಮೂರನೆಯ ಶಿಫ್ಟ್ ಕೆಲಸವನ್ನು ಆರಂಭಿಸಿದ್ದು, ಆ ಮೂಲಕ ವಾಹನಗಳ ಬೇಡಿಕೆಯನ್ನು ಪೂರೈಸಲಿದೆ.