Tuesday, 26th October 2021

ನಿಫಾ ಪರೀಕ್ಷಾ ವರದಿ ನೆಗೆಟಿವ್: ಕಾರವಾರ ಯುವಕನಿಗೆ ಬಿಗ್ ರಿಲೀಫ್

ಮಂಗಳೂರು : ನಿಫಾ ವೈರಸ್ ಆತಂಕದಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ಕಾರವಾರ ಮೂಲದ ಯುವಕನ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ.

ಗೋವಾದಲ್ಲಿ ಆರ್ ಪಿಸಿಆರ್ ಕಿಟ್ ತಯಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸೆ.8 ರಂದು ಊರಿಗೆ ಬಂದಿದ್ದ. ಬಳಿಕ ಯುವಕನಲ್ಲಿ ಜ್ವರ, ತಲೆನೋವು ಸೇರಿದಂತೆ ನಿಫಾ ವೈರಸ್’ನ ಲಕ್ಷಣಗಳು ಕಂಡುಬಂದಿತ್ತು. ಹೀಗಾಗಿ ಯುವಕ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ.

ವೆನ್ಲಾಕ್ ಆಸ್ಪತ್ರೆಯಲ್ಲಿ ಯುವಕನ ರಕ್ತ, ಮೂತ್ರ, ಮೂಗಿನ ದ್ರವ ಮಾದರಿಯನ್ನು ಪುಣೆಯ ಪ್ರಯೋ ಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಯುವಕನ ವರದಿ ಬಂದಿದ್ದು, ನೆಗೆಟಿವ್ ಇದೆ.

ಸದ್ಯ ಯುವಕ ಆರೋಗ್ಯವಾಗಿದ್ದಾನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *