Thursday, 2nd February 2023

ಹೊಸ ವರ್ಷ ಪಾರ್ಟಿ ಬೇಡ, ಪಟಾಕಿ ಸಿಡಿಸ ಬೇಡಿ: ಕೊಡಗು ಪೊಲೀಸ್

ಕೊಡಗು: ಹೊಸ ವರ್ಷ – ಪಾರ್ಟಿ ಬೇಡ. ಪಟಾಕಿ ಸಿಡಿಸಬೇಡಿ ಎಂದು ಗುರುವಾರ ಪೊಲೀಸ್ ಇಲಾಖೆ ವತಿಯಿಂದ ನ್ಯೂ ಇಯರ್ ಮಾರ್ಗಸೂಚಿ ಸಭೆಯಲ್ಲಿ ಸೂಚನೆ ನೀಡಲಾಗಿದೆ.

ಹೊಂಸ್ಟೇ ರೆಸಾಟ್೯,ಲಾಡ್ಜ್ ಮಾಲೀಕರ ಸಭೆಯಲ್ಲಿ ಮಾತನಾಡಿದ ಡಿವ್ಯೆಎಸ್ಪಿ ದಿನೇಶ್ ಕುಮಾರ್, ಕೋವಿಡ್ ನಿಯಮ ಉಲ್ಲಂಘಿಸದಿರಿ. ಸರಕಾರ, ಪೊಲೀಸ್, ಜಿಲ್ಲಾಡಳಿತ ಮಾರ್ಗಸೂಚಿ ಪಾಲಿಸಿ. ಆಡಂಬರದ ಆಚರಣೆ ಬೇಡ. ಸಾಮಾಜಿಕ ಅಂತರ ಕಾಪಾಡಿಕೊಳ್ಲಿ, ಸಿಡಿಮದ್ದು ಪ್ರದರ್ಶನ ಬೇಡ ಎಂದು ಮನವಿ ಮಾಡಿದರು.

ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳಿಗೆ ಬರುವ ಪ್ರವಾಸಿಗರಿಗೆ ಹೆಚ್ಚು ಜನ ಸೇರುವ ರಾಜಾ ಸೀಟ್ ಅಬ್ಬಿ ಜಲಪಾತ ಮತ್ತು ಇತರ ಪ್ರವಾಸಿ ತಾಣಗಳಿಗೆ ಹೋಗದಂತೆ ಸೂಚನೆ ನೀಡಲು ಮಾಡಿದರು.

ಹೊಸ ತಳಿಯ ರೂಪಾಂತರಿ Covid ಕೊಡಗಿನಲ್ಲಿ ವ್ಯಾಪಿಸದಂತೆ ತಡೆಯಲು ಎಲ್ಲರ ಸಹಕಾರ ಕೋರಿದ ಪೊಲೀಸ್ ಅಧಿಕಾರಿ,
ಡಿ.ಜೆ ಸೇರಿದಂತೆ ಅಬ್ಬರದ ಮ್ಯೂಸಿಕ್ ಗೆ ಅವಕಾಶ ಇಲ್ಲ. ಸಾರ್ವಜನಿಕವಾಗಿ ಹೊಸ ವರ್ಷ ಆಚರಣೆಗೆ ಅನುಮತಿ ಇಲ್ಲ ಎಂದು ಹೇಳಿದರು.

error: Content is protected !!