Wednesday, 28th July 2021

ಸೆ.16ರಿಂದ ಮೂರು ದಿನ ಮಲೆಮಹದೇಶ್ವರ ದರ್ಶನವಿಲ್ಲ

ಚಾಮರಾಜನಗರ : ಸೆಪ್ಟೆಂಬರ್ 17ರಂದು ಅಮವಾಸ್ಯೆ ಇರುವುದರಿಂದ ಮಲೆ ಮಹಾದೇಶ್ವರ ಬೆಟ್ಟಕ್ಕೆ ಭಕ್ತರು ಸಾಗರೋಪಾದಿ ಯಲ್ಲಿ ಆಗಮಿಸುತ್ತಾರೆ.

ದೇವರಿಗೆ ಎಣ್ಣೆ ಮಜ್ಜನ, ಅಮವಾಸ್ಯೆ ವಿಶೇಷ ಪೂಜೆಯಲ್ಲಿ ತೊಡಗುತ್ತಾರೆ ಎನ್ನುವ ಕಾರಣದಿಂದಾಗಿ, ಕೊರೋನಾ ಮುನ್ನೆಚ್ಚರಿ ಕೆಯ ಕ್ರಮವಾಗಿ ಮಹದೇಶ್ವರಸ್ವಾಮಿಯ ದರ್ಶನಕ್ಕೆ ಭಕ್ತರಿಗೆ ಬ್ರೇಕ್ ಹಾಕಲಾಗಿದೆ.

ಈ ಕುರಿತಂತೆ ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ದೇಶ ಹೊರಡಿಸಿದ್ದು, ಸೆಪ್ಟೆಂಬರ್ 16ರಿಂದ 18ರವರೆಗೆ ದೇವರಿಗೆ ಎಣ್ಣೆಮಜ್ಜನ, ಅಮವಾಸ್ಯೆ ವಿಶೇಷ ಪೂಜೆ ನಡೆಸುವುದಕ್ಕಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ, ಸಾಮಾಜಿಕ ಅಂತರ ಕಾಯ್ದುಕೊಳ್ಳೋದು ಕಷ್ಟ. ಇದೇ ಕಾರಣದಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಮಲೆ ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಅವಕಾಶ ಇರೋದಿಲ್ಲ ಎಂಬುದಾಗಿ ಸೂಚಿಸಿದ್ದಾರೆ.

 

Leave a Reply

Your email address will not be published. Required fields are marked *