ಕೊಡಗು: ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕುಶಾಲನಗರ ಸಮೀಪದ ಬೈಲು ಕೊಪ್ಪದಲ್ಲಿರುವ ಪ್ರವಾಸಿ ತಾಣ ಗೋಲ್ಡನ್ ಟೆಂಪಲ್ ಗೆ ಡಿ.26 ರವರೆಗೆ ಪ್ರವಾಸಿಗರ ಪ್ರವೇಶವನ್ನ ನಿಷೇಧಿಸಲಾಗಿದೆ.
ಟಿಬೆಟಿಯನ್ ನಿರಾಶ್ರಿತರ ಶಿಬಿರದ ಆಡಳಿತ ಮಂಡಳಿ, ಕೊರೊನಾ ಆತಂಕದ ನಡುವೆ ಸದ್ಯ ಪ್ರವಾಸಿಗರ ಭೇಟಿಯನ್ನ ನಿಷೇಧಿ ಸಿದೆ. ದೇವಾಲಯಕ್ಕೆ ಹೊರ ರಾಜ್ಯ ಮತ್ತು ವಿದೇಶಗಳಿಂದ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದು, ಸೋಂಕು ಹೆಚ್ಚಳವಾಗುತ್ತಿದೆ. ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.