Tuesday, 27th July 2021

ನಿತ್ಯ ದಾಖಲಾತಿ ದಾಖಲಿಸದ ಹಿಂದುಳಿದ- ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ : ಪ್ರಸಾದ್

ವಿಶೇಷ ವರದಿ : ಆನಂದಸ್ವಾಮಿ ಹಿರೇಮಠ

ಮಾನವಿ : ತಾಲ್ಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಯಾವುದೇ ಕಡತಗಳಿಗೂ ಸಂಪೂರ್ಣ ಮಾಹಿತಿ ಇಲ್ಲವೇ ಎಂದು ಆನಂದ ಸ್ವಾಮಿ ಅವರು ಕೇಳಿದ ಮಾಹಿತಿಗೆ ತಾಲೂಕಿನ ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಪ್ರಸಾದ್ ಅವರ ಬೇಜವಾಬ್ದಾರಿತನದ ಉತ್ತರ ನೀಡಿದ್ದಲ್ಲದೇ ನನಗೆ ಅದರ ಯಾವುದೇ ಮಾಹಿತಿ ಇಲ್ಲ ಎಂದು ಉತ್ತರಿಸು ತ್ತಿದ್ದಾರೆ ಎಂದರು.

ಅರ್ಜಿದಾರರು ಪ್ರಸ್ತುತ ಸಾಲಿನ ಸ್ವಯಂ ಘೋಷಿತ ಪರಿಷ್ಟತ 4(1)ಎ ಮತ್ತು 4(1)ಬಿ ಮಾಹಿತಿ ಸೇರಿದಂತೆ ಇತರೆ ಅರ್ಜಿಗಳ ಮಾಹಿತಿಯನ್ನು ಕೇಳಿದ್ದರು ಕೇಳಿದ ಮಾಹಿತಿಗೆ ಕಚೇರಿಯಲ್ಲಿ ಯಾವುದೇ ಕಡತಗಳು ಲಭ್ಯವಿಲ್ಲ ಎಂದು ಮಾಹಿತಿ ಅಧಿಕಾರಿ ಗಳು ನೀಡಿರುವುದು ಇಲಾಖೆಯ ನಡೆಯುತ್ತಿರುವುದಾದರೂ ಏನು ಯಾವ ಕಡತಗಳ ಮೇಲೆ ಎನ್ನುವುದು ಪ್ರಶ್ನೆಯಾಗಿದೆ.

ತಾಲೂಕ ಇಲಾಖೆ ಪ್ರಾರಂಭಗೊಂಡು ತನ್ನ ಕಾರ್ಯ ವೈಖರಿಗಳನ್ನು ಮತ್ತು ಇಲಾಖೆಯ ಎಲ್ಲ ಕೆಲಸ ಗಳನ್ನು ತಿಳಿಪಡಿಸುವುದು 4(1)ಎ ಮತ್ತು 4(1)ಬಿ ಇಲಾಖೆ ಯಲ್ಲಿ ಯಾವ ಯಾವ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಅವರ ಕಾರ್ಯವೈಖರಿಗಳೇನು ಮತ್ತು ಇಲಾಖೆಗೆ ಒಬ್ಬ ಅಧಿಕಾರಿ ಅಧಿಕಾರ ಸ್ವೀಕರಿಸುವ ಸಮಯದಲ್ಲಿ ಈ ಎರಡು ಕಡತಗಳನ್ನು ಪರಿಶೀಲಿಸಿ ಕೊಂಡು ಅಧಿಕಾರ ವನ್ನು ಪಡೆಯುತ್ತಾರೆ. ಮತ್ತು ಪ್ರತಿ ವರ್ಷವೂ ಡಿಸೆಂಬರ್ 31ಕೆ ಈ ಮಾಹಿತಿಯನ್ನು ಇಲಾಖೆಯ ಅಂತರಜಾಲದಲ್ಲಿ ಪ್ರಕಟಣೆ ಮಾಡುವವರ ಮೂಲಕ ಸಾರ್ವಜನಿಕರಿಗೆ ನೀಡುವುದು ಮಾಹಿತಿ ಹಕ್ಕಿನ ನಿಯಮವು ಇರುತ್ತದೆ.

ಅಧಿಕಾರಿಗಳಿಗೆ ಯಾವುದೇ ಅರಿವಿಲ್ಲದೇ ಇರುವುದು ಕಡತಗಳ ನಿರ್ವಹಣೆಯ ಜವಾಬ್ದಾರಿ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳೇ ಉತ್ತರಿಸಬೇಕಿದೆ.

Leave a Reply

Your email address will not be published. Required fields are marked *