Sunday, 25th September 2022

ಸ್ವಾರ್ಥಕ್ಕಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ

ವಿಶ್ವವಾಣಿ ಸುದ್ದಿಮನೆ ಚಿಕ್ಕಬಳ್ಳಾಾಪುರ
ಕೇವಲ ಒಂದೂವರೆ ವರ್ಷದ ಹಿಂದೆ ನನ್ನನ್ನು ಆಯ್ಕೆೆ ಮಾಡಿ ವಿಧಾನಸಭೆಗೆ ಕಳಿಸಿಕೊಟ್ಟಿಿದ್ದಿರಿ. ನಾನು ಆಸೆಪಟ್ಟು, ಅಧಿಕಾರಕ್ಕಾಾಗಿ ರಾಜೀನಾಮೆ ನೀಡಿಲ್ಲ, ಕ್ಷೇತ್ರದ ಸ್ವಾಾಭಿಮಾನಕ್ಕಾಾಗಿ, ನಿಮ್ಮೆೆಲ್ಲರ ಅಭಿವೃದ್ಧಿಿಗೆ ನಾನು ನನ್ನ ಸ್ಥಾಾನಕ್ಕೆೆ ನಾನು ರಾಜೀನಾಮೆ ಕೊಟ್ಟಿಿದ್ದೇನೆ ಎಂದು ಚಿಕ್ಕಬಳ್ಳಾಾಪುರ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ಡಾ. ಕೆ.ಸುಧಾಕರ್ ಎಂದರು.
ಮರಳಕುಂಟೆ ಗ್ರಾಾಪಂ ವ್ಯಾಾಪ್ತಿಿಯಲ್ಲಿ ಉಪಚುನಾವಣೆಯ ಪ್ರಚಾರ ನಡೆಸಿ ಮಾತನಾಡಿ, ಕೇವಲ ಒಂದೂವರೆ ವರ್ಷದಲ್ಲಿ ಬಂದಿರುವ ಚುನಾವಣೆ ನಿಮಗೆ ಹೊರೆಯಗಿದೆ. ಆದರೆ ಇದು ನನ್ನ ಆಸೆಗೆ ಬಂದಿರುವ ಚುನಾವಣೆ ಅಲ್ಲ, ಬದಲಾಗಿ ಕ್ಷೇತ್ರದ ಅಭಿವೃದ್ಧಿಿಗೆ ಬಂದ ಚುನಾವಣೆ ಆಗಿದೆ ಎಂದರು.

ಮೈತ್ರಿಿ ಸರಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇತ್ತು. ಆದರೆ ಅದರಲ್ಲಿ ಅಭಿವೃದ್ಧಿಿ ಮಾಡುವ ಮನಸ್ಸು, ಮಮತೆ, ಮಮಕಾರ ಇರಲಿಲ್ಲ. ಅವರಿಗೆ ಇದ್ದದ್ದು ಸುಧಾಕರ್ ಕ್ಷೇತ್ರದ ವಿರುದ್ಧ ಮಲತಾಯಿ ಧೋರಣೆ ಮಾತ್ರ ಇತ್ತು. ನನ್ನ ಅಭಿವೃದ್ಧಿಿಯ ಯಾವ ಮನವಿಗೂ ಸರಕಾರ ಸ್ಪಂದಿಸಲಿಲ್ಲ. ಇದೆ ಕಾಂಗ್ರೆೆಸ್‌ನಲ್ಲಿದ್ದ ಮಂತ್ರಿಿ ಎಲ್ಲದಕ್ಕೂ ವಿರೋಧ ಮಾಡಿದರು, ರಾಜಕೀಯವಾಗಿ ನನ್ನನ್ನು ಮುಗಿಸಲು ಮೊದಲ ದಿನದಿಂದ ಪ್ರಯತ್ನಿಿಸಿದರು. ನಾನು ಕೊಟ್ಟ ಮಾತು, ನೀಡಿದ ಭರವಸೆ ಉಳಿಸಿಕೊಳ್ಳಬೇಕೆಂದು ರಾಜೀನಾಮೆ ನೀಡಿದೆ ಎಂದರು.

ಸಭೆಯಲ್ಲಿ ಮಾತನಾಡಿದ ಚಿಕ್ಕಬಳ್ಳಾಾಪುರ ಜಿಲ್ಲಾಾ ಬಿಜೆಪಿ ಅಧ್ಯಕ್ಷ ಡಾ ಮಂಜುನಾಥ್, ಹಿಂದೆ ಕಾಂಗ್ರೆೆಸ್‌ನ ಅನ್ಯಾಾಯ ಎದುರಿಸಲು ಶ್ಯಾಾಂಪ್ರಸಾದ್ ಮುಖರ್ಜಿ ಬಿಜೆಪಿಯನ್ನು ಕಟ್ಟಿಿ ಬೆಳೆಸಲು ಮುಂದಾಗಿದ್ದರು. ಅದೇ ರೀತಿ ಸುಧಾಕರ್ ಕಾಂಗ್ರೆೆಸ್‌ನಿಂದ ಹೊರ ಬಂದಿದ್ದಾಾರೆ. ಇವರು ಸ್ವಾಾರ್ಥಕ್ಕಾಾಗಿ ಪಕ್ಷ ಬಿಟ್ಟು ಬಂದಿಲ್ಲ. ಇವರು ಶಾಸಕರಾಗಿದ್ದಾಾಗ, ಇಲ್ಲಸಲ್ಲದ ಆರೋಪವನ್ನು ಮೈತ್ರಿಿ ಸರಕಾರದ ನಾಯಕರು ಮಾಡಿದ್ದರು. ಇವರನ್ನು ಸಚಿವರನ್ನಾಾಗಿಸುವ ಆಮಿಷವನ್ನು ಕೂಡ ಮೈತ್ರಿಿ ಸರ್ಕಾರ ನೀಡಿತ್ತು. ಆದರೆ ಜಿಲ್ಲೆೆಯ ಅಭಿವೃದ್ಧಿಿಗಾಗಿ ಅವರು ಪಕ್ಷ, ಸರ್ಕಾರ ಬಿಟ್ಟು ಬಂದಿದ್ದಾಾರೆ. ಆದರೆ ಇವರನ್ನು ಸ್ವಾಾರ್ಥಿ ಎಂದು ಬಿಂಬಿಸುವ ಯತ್ನವನ್ನು ಕಾಂಗ್ರೆೆಸ್‌ನವರು ಮಾಡಿದ್ದಾಾರೆ. ಆದರೆ ಈ ಆರೋಪಕ್ಕೆೆ ಬೆಲೆ ಕೊಡಬೇಡಿ. ಡಿ.5 ಮತದಾನದ ದಿನ ನೀವೆಲ್ಲ ಬಂದು, ಮತ ಹಾಕಿ. ಅವರನ್ನು ಗೆಲ್ಲಿಸಿಕೊಡಿ, ಸಚಿವರಾಗಿ ಅವರು ಬರುತ್ತಾಾರೆ. ಇದು ಸೂರ್ಯ ಉದಯಿಸಿದಷ್ಟೇ ಸತ್ಯ ಎಂದು ಹೇಳಿದರು.

ಜನರಿಗಾಗಿ ಕೆಟ್ಟವನಾಗಲು ಸಿದ್ಧ
ನಾನು ಮತ್ತೆೆ ಅಭಿವೃದ್ಧಿಿ ಕೆಲಸ ಮಾಡಬಹುದು ಎಂದು ವಿಶ್ವಾಾಸದಿಂದ ರಾಜೀನಾಮೆ ನೀಡಿದೆ. ಇದಾದ ಬಳಿಕ ತಾಲೂಕಿಗೆ ಮೆಡಿಕಲ್ ಕಾಲೇಜು ಬಂತು, ಮಂಚೇನಳ್ಳಿಿ ಪ್ರತ್ಯೇಕ ತಾಲೂಕಾಯಿತು, ವಸತಿಹೀನರಿಗೆ ನಿವೇಶನ ಲಭಿಸುವ ಮಾತು ಸಿಕ್ಕಿಿದೆ. ಮಾಜಿ ಮುಖ್ಯಮಂತ್ರಿಿಗಳು ಹೇಳಿದ್ದಾಾರೆ ಚಿಕ್ಕಬಳ್ಳಾಾಪುರದವರಿಗೆ ಮೆಡಿಕಲ್ ಕಾಲೇಜು ಉಪಯೋಗವಿಲ್ಲವಂತೆ, ಹೊರರಾಜ್ಯದ ವಿದ್ಯಾಾರ್ಥಿಗಳಿಗೆ ಅನುಕೂಲವಂತೆ ನಾನು ಮಾಜಿ ಮುಖ್ಯಮಂತ್ರಿಿಗಳಿಗೆ ಕೊಂಚವಾದರೂ ಲೌಕಿಕ ಜ್ಞಾಾನವಿದೆ ಎಂದುಕೊಂಡಿದ್ದೆೆ. ಆದರೆ ಈ ರೀತಿಯ ಜ್ಞಾಾನವಿದೆ ಎಂದುಕೊಂಡಿರಲಿಲ್ಲ. ರಾಮನಗರ ಜಿಲ್ಲೆೆಯಲ್ಲಿ ಒಂದು ವಿಶ್ವವಿದ್ಯಾಾಲಯವಿದೆ, ವೈದ್ಯಕೀಯ ಕಾಲೇಜು ರಾಮನಗರಕ್ಕೆೆ ಮಂಜೂರಾಗಿದೆ. ಚಿಕ್ಕಬಳ್ಳಾಾಪುರ ಜಿಲ್ಲೆೆಗೆ ಅವಶ್ಯಕತೆ ಇಲ್ಲದ ಮೆಡಿಕಲ್ ಕಾಲೇಜು ಕನಕಪುರ ತಾಲ್ಲೂಕಿಗೆ ಅಗತ್ಯವಿತ್ತಾಾ? ಇದನ್ನು ಕೇಳಿದ್ದಕ್ಕೆೆ ನಾನು ಕೆಟ್ಟವನಾದೆ . ಜನರಿಗಾಗಿ ನಾನು ಕೆಟ್ಟವನೆನಿಸಿಕೊಳ್ಳಲು ಸಿದ್ಧ. ನಾನು ಜನರಿಗಾಗಿ ಒಂದು ಸಾರಿಯಲ್ಲ, ನಿಮಗೆ ಅನ್ಯಾಾಯವಾದರೆ ಇನ್ನೂ ಹತ್ತು ಸಾರಿ ರಾಜೀನಾಮೆ ನೀಡಲು ಸಿದ್ಧ ಎಂದರು.