Monday, 30th January 2023

ಸಾರಿಗೆ ಬಸ್ ಚಾಲಕ ಆತ್ಮಹತ್ಯೆ

ಬೀದರ: ಚುನಾವಣೆ ಕರ್ತವ್ಯದಲ್ಲಿದ್ದ ಈಶಾನ್ಯ ಸಾರಿಗೆ ಸಂಸ್ಥೆ ಬಸ್ ಚಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ.

ಗೊಂಗರಗಾಂವ್ ಗ್ರಾಮದ ಓಂಕಾರ ಬಸಪ್ಪಾ ಮ್ಯಾಕ್ರೆ (ಚಾಲಕ ಸಂ- 1079) ಆತ್ಮಹತ್ಯೆ ಮಾಡಿಕೊಂಡ ಚಾಲಕ. ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆಯಲ್ಲಿ ಕೋಸಂ ಗ್ರಾಮಕ್ಕೆ ನಿಯೋಜನೆ ಮಾಡಲಾಗಿತ್ತು. ಶನಿವಾರ ರಾತ್ರಿ ಚುನಾವಣಾ ಸಿಬ್ಬಂದಿ ಮತ್ತು ಇವಿಎಂ ಯಂತ್ರಗಳನ್ನು ಸಾಗಿಸಿದ್ದ ಚಾಲಕ ಓಂಕಾರ, ಬಸ್ ಗ್ರಾಮದಲ್ಲೆ ಬಿಟ್ಟು ಬೀದರನ ಬಸ್ ನಿಲ್ದಾಣ ಘಟಕ 2ಕ್ಕೆ ಮಧ್ಯರಾತ್ರಿ ವಾಪಸ್ಸಾಗಿ ವಿಶ್ರಾಂತಿ ಕೋಣೆಗೆ ತೆರಳಿದ್ದರು.

ಬೆಳಿಗ್ಗೆ ಸಿಬ್ಬಂದಿಗಳು ಕೋಣೆಗೆ ತೆರಳಿದಾಗ ಚಾಲಕ ಓಂಕಾರ್ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತಂತೆ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!