ಸಾವಿರಾರು ಕನ್ನಡಿಗರಿಗೆ ಉದ್ಯೋೋಗ ನೀಡಿದ ಒಡೆಯ ದಿ.ಸಿದ್ಧಾಾರ್ಥ. ಕರುನಾಡಿನ ಕಾಫಿಯನ್ನು ಪ್ರಪಂಚದ ಹಲವಾರು ದೇಶಗಳಿಗೆ ನವ ಬ್ರ್ಯಾಾಂಡ್‌ಯಾಗಿ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ, ಅವರ ಷೇರು ವಹಿವಾಟು ಇತರ ವ್ಯವಹಾರ ಮತ್ತಿಿತರ ವಿಷಯಗಳಲ್ಲಿ ನಷ್ಟದಲ್ಲಿ ಸಿಕ್ಕಿಿ ಹಾಕಿಕೊಂಡಿದ್ದು ಸುಳ್ಳಲ್ಲ. ಮನನೊಂದು ಸಿಸಿಡಿ ಒಡೆಯ ಮರಳಿ ಬಾರದ ಲೋಕಕ್ಕೆೆ ಹೋಗಿದ್ದು ವಿಷಾದನೀಯ ಸಂಗತಿ. ಇವರ ಬಗ್ಗೆೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಗೊಂದಲಮಯ ಹೇಳಿಕೆ ನೀಡಿದರು, ಮಾಜಿ ಸಚಿವ, ಕಾಂಗ್ರೆೆಸ್ ಮುಂಖಡ ಕೃಷ್ಣ ಭೈರೇಗೌ. ಕೆಲ ದಿನಗಳ ಹಿಂದೆ ನಡೆದ ಒಕ್ಕಲಿಗ ಸಂಘ-ಸಂಸ್ಥೆೆಗಳಿಂದ ಹಮ್ಮಿಿಕೊಂಡಿದ್ದ ಡಿಕೆಶಿ ಬಂಧನ ವಿರೋಧಿಸಿ ಪ್ರತಿಭಟನಾ ರ್ಯಾಾಲಿಯಲ್ಲಿ ಮಾತನಾಡಿ ಇಂದೊಂದು ಆತ್ಮಹತ್ಯೆೆಯಲ್ಲ ಕೊಲೆ ಎಂದು ಆರೋಪಿಸಿದರು. ಆದರೆ, ಅವರ ನಿಗೂಢ ಸಾವಿನ ಸಂದರ್ಭದಲ್ಲಿ ಇವರು ಬಾಯಿ ಬಿಡಲಿಲ್ಲ ಯಾಕೆ?
ಸಿದ್ಧಾರ್ಥ ಒಬ್ಬ ಪ್ರಾಾಮಾಣಿಕವಾಗಿ ಉದ್ಯಮದಲ್ಲಿ ತೊಡಗಿಸಿಕೊಂಡು, ಕನ್ನಡನಾಡಿನ ಹೆಮ್ಮೆೆಯ ಪುತ್ರರಾಗಿದ್ದರು. ಅವರ ಮೇಲೆ ನಿಜವಾದ ಪ್ರೀತಿ ಇದ್ದರೆ ನಿಗೂಢ ಸಾವಾದ ನಂತರದಲ್ಲೇ ಸರಕಾರ, ಸಿಬಿಐ ತನಿಖೆಗೆ ವಹಿಸಬೇಕಿತ್ತು. ಪಕ್ಷದ ಪ್ರಮುಖರೊಬ್ಬರ ಬಂಧನ ನಂತರವಷ್ಟೇ ಇಂತಹ ಹೇಳಿಕೆಗಳನ್ನು ನೀಡಿ ರಾಜ್ಯದ ಜನರಲ್ಲಿ ಗೊಂದಲ ಸೃಷ್ಟಿಿ ಮಾಡವುದು ಸರಿಯೇ?
ಸಿದ್ಧಾರ್ಥ ಎಸ್. ಬಳ್ಳಾರಿ