ಐಶಾರಾಮಿ ಜೀವನದ ಸಂಕೇತಗಳಾದ ಏರ್ ಕಂಡೀಷನರ್, ಸುಗಂಧ ದ್ರವ್ಯಗಳು, ರೆಫ್ರಿಜರೇಟರ್ ಇತ್ಯಾಾದಿ ಬಳಕೆಯಿಂದ ಹೊರ ಸೂಸುವ ಸಿಎಫ್‌ಸಿ ಅಂದರೆ ಕ್ಲೊೊರೋಫ್ಲೂೂರೋ ಕಾರ್ಬನ್ ಗಳು ವಾಯುಗೋಳದ ಆಮ್ಲಜನಕದ ಪ್ರಮಾಣವನ್ನು ಕ್ಷೀಣಿಸುವಲ್ಲಿ ಪೈಪೋಟಿಗೆ ನಿಂತಿವೆ.
ಭೂಮಿಯನ್ನು ಸುತ್ತುವರಿದಿರುವ ಅನಿಲಗಳು, ಧೂಳಿನ ಕಣ ಮತ್ತು ನೀರಾವಿಯ ತೆಳುವಾದ ಪದರವನ್ನು ಆವರಿಸಿಕೊಂಡಿರುವ ಗಾಳಿಯ ಹೊದಿಕೆಯೇ ವಾಯುಗೋಳ. ಸೂರ್ಯನ ಶಾಖವನ್ನು ಹಿಡಿದಿರಿಸಿಕೊಂಡು ಭೂಮಿಯನ್ನು ಒಂದು ಜೀವಗ್ರಹವಾಗಿರುವಂತೆ ಅದು ಮಾಡಿದೆ. ಸಾರಜನಕ ಶೇ.78.08, ಆಮ್ಲಜನಕ ಶೇ. 20.94, ಆರ್ಗಾನ್ ಶೇ 0.93, ಇಂಗಾಕದ ಡೈ ಆಕ್ಸೈಡ್ ಶೇ 0.3 ಮತ್ತು ಓಜೋನ್ ಶೇ.0.000005 ಪ್ರಮಾಣದಲ್ಲಿ ವಾಯುಮಂಡದಲ್ಲಿ ಇವೆ.
ವಾಯುಗೋಳದ ಎರಡನೆಯ ಪದರ, ಭೂಮಿಯಿಂದ 50 ಕಿಮೀ ವರೆಗೆ ಹಬ್ಬಿಿದೆ. ಜೀವ ರಕ್ಷಕ ಓಜೋನ್ ಪದರ ಇರುವುದು ಈ ವಲಯದಲ್ಲಿ. ಓಜೋನ್ ಹಲವು ಆಮ್ಲಜನಕ ಅಣುಗಳ ಸಂಯೋಗದಿಂದಾದ ಅದ್ಭುತ ಪದರ. ಸೂರ್ಯನಿಂದ ಬರುವ ಕಿರಣಗಳಲ್ಲಿ ಅತಿ ಅಪಾಯಕಾರಿ ಎನಿಸಿದ ಅತಿ ನೇರಳೆ (ಅಲ್ಟ್ರಾಾವೈಲೆಟ್) ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಜೀವರಾಶಿಗಳನ್ನು ರಕ್ಷಿಸುತ್ತದೆ.
ಸಿಎಫ್‌ಸಿಗಳ ಪ್ರಭಾವ ಹೇಗಿದೆ ಎಂದರೆ, ಈ ಕ್ಷಣಕ್ಕೆೆ ನಾವು ಇವುಗಳ ಉತ್ಪಾಾದನೆ ಮತ್ತು ಬಳಕೆಯನ್ನು ನಿಲ್ಲಿಸಿದರೂ ಸಹ ಅದರ ಫಲಿತಾಂಶ ಓಜೋನ್ ಪದರವನ್ನು ತಲುಪಲು 5 ರಿಂದ 6 ವರ್ಷಗಳಾದರೂ ಬೇಕು. ಹಾಗಾಗಿ ಪ್ರಪಂಚಾದ್ಯಂತ ಕ್ಲೋೋರೋಫ್ಲೂೂರೋ ಕಾರ್ಬನ್‌ಗಳ ಉತ್ಪಾಾದನೆ ಹಾಗೂ ಬಳಕೆಯನ್ನು ನಿಷೇಧಿಸಬೇಕಿದೆ. ಈ ವಿಚಾರದಲ್ಲಿ ವಿಶ್ವಕ್ಕೆೆ ಮಾದರಿಯಾಗಿ ನಿಂತಿರುವುದು ಪುಟ್ಟ ರಾಷ್ಟ್ರವಾದ ಬಾಂಗ್ಲಾಾದೇಶ.
ಸಿಎಫ್‌ಸಿ ಉತ್ಪನ್ನಗಳ ಬಳಕೆಗೆ ಪರ್ಯಾಯವಾಗಿ ಎಚ್‌ಸಿಎಫ್ ಅಂದರೆ ಹೈಡ್ರೋೋಕ್ಲೋೋರೋ ಫ್ಲೂೂರೋ ಕಾರ್ಬನ್ ಗಳ ಉತ್ಪನ್ನಗಳನ್ನು ಬಳಸಬಹುದು. ಮಾರುಕಟ್ಟೆೆಯಲ್ಲಿ ಈಗಾಗಲೇ ಏರ್ ಕಂಡೀಷನರ್, ರೆಫ್ರಿಿಜರೇಟರ್ ಮತ್ತು ಸುಗಂಧ ದ್ರವ್ಯ ಮುಂತಾದವುಗಳಲ್ಲಿ ‘ಎಕೋ ಫ್ರೆೆಂಡ್ಲಿಿ, ಓಜೋನ್ ಫ್ರೆೆಂಡ್ಲಿಿ’ ಎಂಬ ಮಾರ್ಕ್‌ಗಳಿರುವ ಉತ್ಪನ್ನಗಳನ್ನು ಕೊಳ್ಳಬೇಕು. ಪರಿಸರ ಸ್ನೇಹಿಯಾಗಿವೆ. ಹಾಗೆಯೇ ಟಂಗ್‌ಸ್ಟನ್ ಬಲ್‌ಬ್‌ಗಳ ಬದಲಾಗಿ ಮಾರುಕಟ್ಟೆೆಯಲ್ಲಿರುವ ಸಿಎಫ್‌ಎಲ್ ದೀಪಗಳನ್ನು ಖರೀದಿಸಬೇಕು. ಕರ್ನಾಟಕ ಸರಕಾರ ಇವುಗಳನ್ನು ವ್ಯಾಾಪಕವಾಗಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿಿದೆ. ಅವನ್ನು ಕೊಂಡು ನಾಗರಿಕರು ಸಹಕರಿಸಬೇಕು.
-ತಿಪ್ಪೇಸ್ವಾಮಿ ಎನ್‌ಜಿ, ಚಿತ್ರದುರ್ಗ