Wednesday, 29th November 2023

ಮಹಿಳೆಯರ ಸ್ಫೂರ್ತಿ ಸೆಲೆ ಸಿಂಧೂ

ಭಾರತದ ಹೆಮ್ಮೆಯ ಪುತ್ರಿ ಪುಸರ್ಲ ವೆಂಕಟ ಸಿಂಧೂ ಅವರು ಬ್ಯಾಡ್ಮಿಂಟನ್ವಿ ಶ್ವಚಾಂಪಿಯನ್‌ಶಿಪ್ ಜಯಿಸಿ ಭಾರತ ಮತ್ತೊಮ್ಮೆೆ ವಿಶ್ವ ಭೂಪಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ಸಿಂಧೂ ಭಾರತೀಯರಿಗೆ ಹೆಮ್ಮೆೆ ತಂದಿದ್ದಾರೆ. ಮರೀಚಿಕೆಯಾಗಿದ್ದ ವಿಶ್ವಚಾಂಪಿಯನ್‌ಶಿಪ್ ಚಿನ್ನದ ಪದಕವನ್ನ ತಮ್ಮ ಮೂರನೇ ಫೈನಲ್ ಪ್ರಯತ್ನದಲ್ಲಿ ಸಿಡಿಲೆರಗುವಂತೆ ಎದುರಾಳಿಯ ಮೇಲೆರಗಿ ಕೇವಲ 36 ನಿಮಿಷಗಳಲ್ಲಿ ಪಡೆದಿದ್ದಾರೆ. ಅವರ ತಾಯಿಯ ಜನ್ಮದಿನದಂದು ಅಮೋಘವಾದ ಉಡುಗೊರೆ ನೀಡಿ, ಮಹಿಳೆಯರಿಗೆ ಸ್ಫೂರ್ತಿ ಸೆಲೆಯಾಗಿದ್ದಾರೆ. ಇನ್ನಾಾದರೂ ಬರೀ ಕ್ರಿಿಕೆಟ್ ಎಂಬ ಮೋಸದಾಟದ ಹಿಂದೆ ಬೀಳದೆ ಬ್ಯಾಡ್ಮಿಿಂಟನ್ ಕ್ರೀಡೆಯ ಕಡೆಗೂ ಯುವಕ-ಯುವತಿಯರು ಗಮನ ಕೊಡಲಿ. ಫೈನಲ್‌ನಲ್ಲಿಯೇ ಸೋಲುತ್ತಿದ್ದ ಸಿಂಧೂ, ಇಂದು ಅಪರಿಮಿತ ಆತ್ಮವಿಶ್ವಾಾಸ ಹಾಗೂ ಕಠಿಣ ಪರಿಶ್ರಮದಿಂದ ಕೊನೆಗೂ ಗುರಿ ಸಾಧಿಸಿದ್ದಾಾರೆ. ಚೀನಾ, ಇಂಡೋನೇಷ್ಯಾಾ ದೇಶದ ಪ್ರಾಾಬಲ್ಯವಿದ್ದ ಬ್ಯಾಾಡ್ಮಿಿಂಟನ್ ಕ್ರೀಡೆಯಲ್ಲಿ ಈಗ ಭಾರತದ ಸ್ಥಾಾನವನ್ನ ಗಟ್ಟಿಿಗೊಳಿಸಿದ್ದಾರೆ. 36 ವರ್ಷಗಳ ನಂತರ ಪುರುಷರ ವಿಭಾಗದಲ್ಲಿ ಕಂಚು ತಂದ ಬಿ. ಸಾಯಿ ಪ್ರಣೀತ್ ಅವರ ಐತಿಹಾಸಿಕ ಸಾಧನೆಯೂ ಪ್ರಶಂಸನೀಯವಾದದ್ದು. ದುಡ್ಡು ಯಾರಾದರೂ ಗಳಿಸಬಹುದು ಆದರೆ ತಂದೆತಾಯಿಯರಿಗೆ ಹಾಗೂ ಇಡೀ ದೇಶಕ್ಕೆೆ ಹೆಮ್ಮೆೆ ತರುವಲ್ಲಿಯ ಸಾರ್ಥಕತೆ ವರ್ಣಿಸಲಸದಳ. ಮುಂದೆ ಪೋಷಕರು ತಮ್ಮ ಮಕ್ಕಳಿಗೆ ಸಿಂಧೂ, ಸೈನಾ, ಶ್ರೀಕಾಂತ್, ಪ್ರಣೀತ್ ಅವರ ಹೆಸರಿಟ್ಟರೆ ಅಚ್ಚರಿಯೇನಿಲ್ಲ. ಕ್ರೀಡೆಯಲ್ಲಿನ ರಾಜಕೀಯ ತೊಡೆದುಹಾಕಿ, ಸೂಕ್ತ ತರಬೇತಿ ಹಾಗೂ ಮೂಲಭೂತ ಸೌಕರ್ಯಗಳು ಸರಕಾರದ ಮೂಲಕ ಕ್ರೀಡಾಪಟುಗಳಿಗೆ ದೊರಕಿದರೆ ಭಾರತೀಯ ಕ್ರೀಡಾಳುಗಳು ತಲುಪದ ಗುರಿಯೇ ಇರುವದಿಲ್ಲ. ಭಾರತ ಬ್ಯಾಾಡ್ಮಿಿಂಟನ್ ಶಕ್ತಿಿ ಕೇಂದ್ರವಾಗಲಿ ಎಂದು ಹಾರೈಸುತ್ತ ಹೆಮ್ಮೆೆಯ ಸಹೋದರಿ ಸಿಂಧೂಗೆ ಭಾರತೀಯರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ರಾಘವೇಂದ್ರ ಮಠದ್, ರಾಯಚೂರು.

Leave a Reply

Your email address will not be published. Required fields are marked *

error: Content is protected !!