ಬೆಂಗಳೂರಿನ ಅಂಚಿನಲ್ಲಿರುವ ರೋರಿಕ್ ಎಸ್ಟೇಟನ್ನು ಫಿಲ್‌ಮ್ ಸಿಟಿ ಮಾಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾಾರೆ. ಈ ನಗರ ತನ್ನ ಸಹಜ ಚೆಲುವು, ತಣ್ಣನೆಯ ಹವಾಮಾನ, ನೈಸರ್ಗಿಕ ಭದ್ರತೆಯಿಂದಾಗಿ ಜನಕೋಟಿಯನ್ನು ಆಕರ್ಷಿಸಿಕೊಂಡು ಈಗಾಗಲೇ ಹೊರಲಾರದ ಹೊರೆ ಹೊತ್ತಿಿದೆ. ಧಾರಣಶಕ್ತಿಿಯನ್ನು ಕಳೆದುಕೊಂಡಿದೆ. ಫಿಲ್‌ಮ್ ಸಿಟಿಯನ್ನು ನಿರ್ಮಿಸಿದರೆ ವಾಹನದಟ್ಟಣೆ, ಪ್ರವಾಸಿಗರ ದಂಡು, ನೀರಿಗಾಗಿ ಬೇಡಿಕೆ, ತ್ಯಾಾಜ್ಯದ ರಾಶಿ, ವನ್ಯಜೀವಿಗಳ ಸಂಕಷ್ಟ ಎಲ್ಲವೂ ಹೆಚ್ಚಲಿದೆ. ಇಷ್ಟಕ್ಕೂ ಮನರಂಜನೆಯ ಹಪಾಹಪಿಯಿಂದಾಗಿಯೇ ನೆಲ, ನೀರು, ಗಾಳಿಯನ್ನೆೆಲ್ಲ ಈ ದುಃಸ್ಥಿಿತಿಗೆ ತಂದಿದ್ದೇವೆ. ಇನ್ನೆೆಷ್ಟು ಕೃತಕ ರಂಜನೆ ಬೇಕು ನಮಗೆ?
ಕಳೆದ ನೂರು ವರ್ಷಗಳಲ್ಲಿ ಈ ನಗರದಲ್ಲಿ ಏನೆಲ್ಲ ಕೃತಕಗಳನ್ನು ನಿರ್ಮಿಸಿಕೊಂಡ ನಾವು ಒಂದೇ ಒಂದು ಹೊಸ ಲಾಲ್‌ಬಾಗನ್ನಾಾಗಲೀ ಕಬ್ಬನ್ ಪಾರ್ಕನ್ನಾಾಗಲೀ ನಿರ್ಮಾಣ ಮಾಡಿಲ್ಲ. ಬದಲಿಗೆ ಪ್ರಕೃತಿ ನೀಡಿದ ಎಲ್ಲ ಸವಲತ್ತುಗಳನ್ನೂ ದುರುಪಯೋಗ ಮಾಡಿಕೊಂಡು ಇದನ್ನೊೊಂದು ನರಕ ಮಾಡಿದ್ದೇವೆ. ಇಲ್ಲಿ ಮತ್ತೊೊಂದು ಮಾಯಾನಗರಿ ಬೇಕಿಲ್ಲ. ಕಾಂಕ್ರೀಟ್ ಕಟ್ಟಡ ಬೇಕಿಲ್ಲ. ಬದಲಿಗೆ ಹೊಸದೊಂದು ಶ್ವಾಾಸಕೋಶ ಬೇಕಿದೆ.
–ನಾಗೇಶ ಹೆಗಡೆ, ಡಾ. ಕೇಶವ ಕೊರ್ಸೆ, ಡಾ. ರಾಜೇಗೌಡ ಹೊಸಹಳ್ಳಿ, ನ. ರವಿಕುಮಾರ್ ಮತ್ತು ರಾಧಾಕೃಷ್ಣ ಭಡ್ತಿ