ಅಮೆರಿಕ ಮೂಲದ ಟ್ವಿಟರ್ ಇದೀಗ ಹಲವು ರಾಷ್ಟ್ರಗಳೊಂದಿಗೆ ವಾದ ವಿವಾದಗಳನ್ನು ಮಾಡಿಕೊಳ್ಳುತ್ತಿದೆ. ಇತ್ತೀಚಿಗೆ ನೈಜೀರಿ
ಯಾದ ಅಧ್ಯಕ್ಷ ಮುಹಮ್ಮದು ಬುಹಾರಿ ಅವರ ಟ್ವೀಟ್ ಡಿಲೀಟ್ ಮಾಡಿದ ನಂತರ ಸಿಟ್ಟಿಗೆದ್ದ ರಾಷ್ಟ್ರ ತಮ್ಮ ದೇಶದಲ್ಲಿ ಟ್ವಿಟರ್ ಅನ್ನೇ ಬ್ಯಾನ್ ಮಾಡಿತ್ತು.
ಟ್ವಿಟರ್ ತನ್ನ ಹಮ್ಮುಬಿಮ್ಮುಗಳನ್ನು ಈಗ ನಮ್ಮ ದೇಶದಲ್ಲೂ ಪ್ರದರ್ಶಿಸುತ್ತಿದೆ. ಟ್ವಿಟರ್ ಭಾರತದಲ್ಲಿ ಎಲ್ಲಾ ಮೊಬೈಲ್ ಬಳಕೆದಾರರ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ ಮತ್ತು ಖಾಸಗಿತನಕ್ಕೆ ಅಪಾಯ ಉಂಟುಮಾಡುತ್ತಿದೆ. ಕೇಂದ್ರ ಸರಕಾರ ಟ್ವಿಟರ್‌ಗೆ ಕೊನೆಯ ಎಚ್ಚರಿಕೆಯ ನೊಟೀಸ್ ಜಾರಿ ಮಾಡಿದ್ದರು ಕ್ಯಾರೆ ಅನ್ನುತ್ತಿಲ್ಲ.
ಟ್ವಿಟರ್ ಜನರಿಗೆ ಸುರಕ್ಷತೆ ವಾತಾವರಣ ಕಲ್ಪಿಸುತ್ತಿಲ್ಲ ಎಂಬುದು ಐಟಿ ಪರಿಣಿತರ ದೂರ. ಬಲಪಂಥೀಯ ನಿಲುವು ಹೊಂದಿರುವ ಯಾರಿಗೇ ಆದರೂ ಟ್ವಿಟರ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣ ಇರುವಂತೆ ಮಾಡಲಾಗುತ್ತದೆ. ಇದನ್ನೆ ಟ್ವಿಟರ್ ಉದ್ದೇಶ ಪೂರ್ವಕವಾಗಿಯೇ ಮಾಡುತ್ತಿದೆ. ಭಾರತದಲ್ಲಿ ಟ್ವಿಟರ್ ಬಲಪಂಥೀಯ ರಾಜಕೀಯ ನಾಯಕರು ಮತ್ತು ಹಿಂಬಾಲಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ ಅಸಂಖ್ಯ ಸಾಕ್ಷಿಗಳಿವೆ.
ಅದರಲ್ಲೂ ಭಾರತದ ಟ್ವಿಟರ್ ಮುಖ್ಯಸ್ಥನಾಗಿ ಕಾಶ್ಮೀರದ ರಾಹೀಲ್ ಖುರ್ಷಿದ್ ಎಂಬ ಪತ್ರಕರ್ತನನ್ನು ನೇಮಿಸಿದಾಗ ಇದು ಖಚಿತವಾಗಿತ್ತು. ಈ ರಾಹಿಲ್ ಖುರ್ಷಿದ್ ಎಡಪಂಥೀಯರೊಂದಿಗೆ ಮತ್ತು ಕಾಶ್ಮೀರ ಪ್ರತ್ಯೇಕತಾ ವಾದಿಗಳ ಜತೆಗೆ ಆತ್ಮೀಯ ಸಂಪರ್ಕ ಹೊಂದಿದ್ದ. ದೆಹಲಿಯ ಕಾಲೇಜಿನಲ್ಲಿ ದೇಶದ್ರೋಹಿ ಕೂಗುಗಳೆದ್ದಾಗ, ಅಜಾದಿ ಘೋಷಣೆಗಳು ಮೊಳಗಿದಾಗ ಏಕಾಏಕಿ ಟ್ವಿಟರ್ ನಿಂದ ಎಬಿವಿಪಿಯ ನೂರಾರು ಖಾತೆಗಳು, ಅದರಲ್ಲೂ ಸಾವಿರಾರು ಹಿಂಬಾಲಕರಿದ್ದ ಪ್ರಮುಖ ವಿದ್ಯಾರ್ಥಿ ನಾಯಕರ ಖಾತೆಗಳು ರಾತ್ರೋರಾತ್ರಿ ಅಮಾನತುಗೊಳಿಸಿದ. ಆದರೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಯಾವುದೇ ವಿದ್ಯಾರ್ಥಿ ಗಳದ್ದೂ ಕೂಡಾ ಹೀಗೆ ಅಮಾನತ್ತಾಗಲಿಲ್ಲ.
ಗಲ್ಫ್ ರಾಷ್ಟ್ರಗಳಲ್ಲಿ ಕೆಲಸದಲ್ಲಿರುವ ಭಾರತ ಮೂಲದ ಜನರು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಭಾರತ ದೇಶದ ಆಗು ಹೋಗುಗಳ ಬಗ್ಗೆ ಪೋ ಹಾಕಿದರೆ ಅದನ್ನೇ ಒಂದು ಧರ್ಮದ ವಿರುದ್ಧ ಅವಹೇಳನ ಮಾಡಿದರು ಅಂತ ಅಲ್ಲಿಯ ಜನರೇ ಟ್ವಿಟರ್ ಮೂಲಕ ಗಲ್ಫ್ ರಾಷ್ಟ್ರಗಳ ಮಂತ್ರಿಗಳಿಗೆ ದೂರು ನೀಡಿ ಅವರನ್ನು ಜೈಲಿಗೆ ಕಳಿಸುವ ಕೆಲಸ ಮಾಡಿದ್ದಾರೆ. ಟ್ವಿಟರ್‌ನಿಂದಾಗಿ ಭಾರತದ ಹುಡುಗರು ಗಲ್ಫ್ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಇವೆ ವಿಷಯಗಳನ್ನು ಕೇಂದ್ರ ಸರಕಾರ ಪರಿಶೀಲಿಸಿ ತಕ್ಷಣ ಟ್ವಿಟರ್ ಅನ್ನು ನಿಷೇಧಿಸಬೇಕು.
– ವಿಜಯಕುಮಾರ್ ಎಚ್. ಕೆ ರಾಯಚೂರು
ವಿಶ್ವನಾಥ್ ಎಂಬ ಸೆರಗಿನ ಕೆಂಡ
ಮಾಜಿ ಸಚಿವ ಎಚ್.ವಿಶ್ವನಾಥ್ ನೇರ, ನಿಷ್ಠುರ ನಡೆಗೆ ಹೆಸರಾದವರು. ಮಾಜಿ ಸಿಎಂ ಎಸ್.ಎಂ.ಕೃಷ್ಣ ಸರಕಾರದಲ್ಲಿ ಶಿಕ್ಷಣ ಸಚಿವರಾಗಿದ್ದಾಗ ಮಠಾಧೀಶರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಹಾಗೆಯೇ ತಮ್ಮ ಇಲಾಖೆಯಲ್ಲಿ ಹಲವು ಬದಲಾವಣೆಗೆ ಕೈ ಹಾಕಿ ವಿವಾದವನ್ನು ಮೈ ಮೇಲೆ ಎಳೆದುಕೊಂಡವರು. ಹಳ್ಳಿ ಹಕ್ಕಿಯ ಹಾಡು ಎಂಬ ತಮ್ಮ ಮೊದಲ ಹಾಗೂ ಆತ್ಮ ಚರಿತ್ರೆಯ ಪುಸ್ತಕ ಬರೆದು ಅದರಲ್ಲಿ ಎಸ್.ಎಂ.ಕೃಷ್ಣ ಮತ್ತು ಕನ್ನಡದ ಹಿರಿಯ ನಟಿ ಬಿ.ಸರೋಜಾ ದೇವಿ ಮದುವೆ
ಕುರಿತು ಪ್ರಸ್ತಾಪ ಮಾಡಿ ಮಾಧ್ಯಮಗಳಲ್ಲಿ ಹೆಚ್ಚು ಸುದ್ದಿಯಾಗಿದ್ದರು.
ಹಾಗೆಯೇ ಆಡಳಿತ ಪಕ್ಷವಿರಲಿ, ಪ್ರತಿಪಕ್ಷವಿರಲಿ ನೇರ ಮಾತಿಗೆ ಹೆಸರಾದ ವಿಶ್ವನಾಥ್ ತಮ್ಮ ಎದುರಾಳಿಗಳನ್ನು ಮಾತಿನ ಕಟಕಟೆಗೆ ನಿಲ್ಲಿಸುತ್ತಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಕರೆ ತಂದು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿದ ವಿಶ್ವನಾಥ್ ಅವರಿಂದ ನಿರ್ಲಕ್ಷ್ಯಕ್ಕೆ ಒಳಗಾದಾಗ ಅವರ ವಿರುದ್ಧವೇ ನಿಂತರು. ಬಳಿಕ ಜಾತ್ಯತೀತ ಪಕ್ಷ ಎನ್ನುವ ಕಾರಣಕ್ಕೆ ತತ್ವ, ಸಿದ್ಧಾಂತದ ಆಧಾರದ ಮೇಲೆ ಜೆಡಿಎಸ್ ಸೇರಿದರು. ಆದರೆ,ಅಲ್ಲೂ ಬಹಳ ದಿನ ಉಳಿಯಲಿಲ್ಲ.
ಬಂದ ಸ್ವಲ್ಪ ದಿನಗಳ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ದೇವೇಗೌಡರನ್ನು ಉಸಿರು ಇರುವವರೆಗೂ ಮರೆಯಲ್ಲ ಎಂದ ವಿಶ್ವನಾಥ್,
ದೇವೇಗೌಡ ಮತ್ತು ಕುಮಾರಸ್ವಾಮಿ ತಮ್ಮನ್ನು ಪಕ್ಷದಲ್ಲಿ ರಬ್ಬರ್ ಸ್ಟಾಂಪ್ ತರಹ ಕಂಡಾಗ ಅವರಿಗೇ ತಿರುಗಿ ಬಿದ್ದರು! ತನಗೆ ಸೂಕ್ತ ಗೌರವ, ಮರ್ಯಾದೆ ಸಿಗದೇ ಹೋದಾಗ ಮತ್ತೆ ರೆಬೆಲ್ ಆದರು.
ಬಿಜೆಪಿ ಸೇರಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಪತನಕ್ಕೆ ಕಾರಣರಾದರು. ಮಂತ್ರಿಗಿರಿಯ ಆಸೆಯಿಂದ ಬಿಜೆಪಿಗೆ ಬಂದ ಅವರು ಉಪ ಚುನಾವಣೆಯಲ್ಲಿ ಸೋತರು. ಆದರೂ, ಪಕ್ಷಕ್ಕೆ ಬಂದವರು ಎಂಬ ಕಾರಣಕ್ಕೆ ವಿಧಾನ ಪರಿಷತ್‌ಗೆ ಆಯ್ಕೆ ಮಾಡು ವಾಗ ಸ್ವಪಕ್ಷದವರಿಂದಲೇ ವಿರೋಧ ಎದುರಾಯಿತು. ಕೊನೆಗೆ ಅವರನ್ನು ಸಾಹಿತಿಗಳ ಕೋಟಾದಲ್ಲಿ ನಾಮನಿರ್ದೇಶನ ಮಾಡಲಾಯಿತು.
ರಾಜ್ಯದ ಸಿಎಂ ಯಡಿಯೂರಪ್ಪರನ್ನು ಬದಲಾಯಿಸಬೇಕೆಂದು ಬಹಿರಂಗ ಹೇಳಿಕೆ ನೀಡಿರುವುದಲ್ಲದೇ, ಬಿಜೆಪಿ ರಾಜ್ಯ ಉಸ್ತು ವಾರಿ ಅರುಣ್ ಸಿಂಗ್ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿzರೆ. ಈ ಮೂಲಕ ವಿಶ್ವನಾಥ್ ತಮ್ಮ ಸ್ಥಾನ-ಮಾನ, ಗೌರವ, ಮಾತಿಗೆ ಬೆಲೆ ಸಿಗದೇ ಹೋದಾಗ ಸಿಡಿದೇಳುತ್ತೇನೆ ಎಂದು ಸಾಬೀತು ಮಾಡಿzರೆ. ಆ ಮುಖೇನ ತಾನು ಸೆರಗಿನೊಳಗಿನ ಕೆಂಡ ಎಂದು ತೋರಿಸಿದ್ದಾರೆ.
– ಶ್ರೀಧರ್ ಡಿ.ರಾಮಚಂದ್ರಪ್ಪ ಚಿತ್ರದುರ್ಗ
೪ ವರ್ಷದ ಪದವಿ ಶೀಘ್ರ ಜಾರಿಯಾಗಲಿ
೨೦೨೧-೨೨ ನೇ ಸಾಲಿನಿಂದ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ವ್ಯಾಪ್ತಿಗೆ ಒಳಪಡುವ ಪದವಿ ಕಾಲೇಜುಗಳಲ್ಲಿ ನಾಲ್ಕು ವರ್ಷದ ಪದವಿ ಕೋರ್ಸುಗಳನ್ನು ಆರಂಭಿಸಲು ಸರಕಾರ ಚಿಂತನೆ ನಡೆಸಿದೆ.
ಇದು ನೂತನ ರಾಷ್ಟ್ರೀಯ ನೀತಿಯ ಶಿ-ರಸಿನಂತೆ ಆರಂಭಿಸಲಾಗುತ್ತಿದೆ ದು ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ನಾಲ್ಕು ವರ್ಷದ ಪದವಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಚಿಂತನೆ ಸ್ವಾಗಾತಾರ್ಹವಾದರೂ ಕೋವಿಡ್ ಪರಿಸ್ಥಿತಿಯಿಂದ ಇನ್ನು ಜನ ಚೇತರಿಸಿಕೊಳ್ಳದಿರುವಾಗ ಈ ಹೊಸ ನೀತಿಯನ್ನು ಪಾಲಿಸುವುದು ಕೆಲವು ಗೊಂದಲಗಳನ್ನು ಉಂಟುಮಾಡಬಹುದು. ಕಾಲೇಜುಗಳು ಇದಕ್ಕೆ ಪೂರ್ವ ಸಿದ್ಧತೆಯಲ್ಲಿ ತೊಡಗಬೇಕು. ಕನಿಷ್ಠ ಒಂದು ವರ್ಷವಾದರೂ ಅಂತರ ಇರಲೇಬೇಕಾಗುತ್ತದೆ. ಬಹು ಮುಖ್ಯವಾಗಿ ಪಠ್ಯಕ್ರಮವನ್ನು ಅಳವಡಿಸುವುದೇ ದೊಡ್ಡ ಮಟ್ಟದ ಕೆಲಸ.
ಈಗಿನ ಸಿಲೆಬಸ್‌ಗಳನ್ನು ಪರಾಮರ್ಶಿಸಿ, ಬದಲಾಗಬೇಕಾಗಿರುವ ಹೊಸದಾಗಿ ಅಳವಡಿಸಬೇಕಾದ ವಿಷಯಗಳ ಕೂಲಂಕುಶ
ಚರ್ಚೆಗಳಾಗಬೇಕು. ಇದಕ್ಕಾಗಿ ಶಿಕ್ಷಣ ತಜ್ಞರ ತಂಡವನ್ನು ಮೊದಲು ನೇಮಿಸಿ ಹೊಸ ಪಠ್ಯಕ್ರಮ ವಿದ್ಯಾರ್ಥಿಗಳಿಗೆ ಎಷ್ಟರ ಮಟ್ಟಿಗೆ ಉಪಯುಕ್ತ ಅಲ್ಲದೆ ಪ್ರಸ್ತುತ ಕಾಲಕ್ಕೆ ಪಠ್ಯವನ್ನು ಯಾವ ಹಂತದಲ್ಲಿ ಸಿದ್ಧತೆಗೊಳಿಸಬೇಕು ಎಂಬೆಲ್ಲ ವಿಚಾರಗಳ ಚರ್ಚೆಗಳಾಗಬೇಕಿದೆ. ಈಗಿರುವ ಕೆಲವು ಸೆಮಿಸ್ಟರ್ ಗಳು ಪರೀಕ್ಷೆಗಳ ಭಾಗ್ಯವೇ ಕಂಡಿಲ್ಲದಿರುವಾಗ ಹೊಸ ಯೋಜನೆಗಳು
ಆತುರವಾಗಿ ಅನುಷ್ಠಾನಗೊಳ್ಳುವುದು ಸೂಕ್ತವಲ್ಲವೆಂದು ಅನಿಸುತ್ತೆ.
ಏಕಾಏಕಿ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭಿಸುವುದಾದರೇ, ಈ ಎಲ್ಲ ತೊಡಕುಗಳು ಎದುರಾಗುವ ಸಾಧ್ಯತೆಗಳಿವೆ. ಆದ್ದರಿಂದ ಒಂದು ವರ್ಷ ತಡವಾದರೂ ವ್ಯವಸ್ಥಿತ ರೀತಿಯಲ್ಲಿ ಎನ್‌ಇಪಿ ಪಾಲನೆ ಮಾಡುವುದು ಸೂಕ್ತ.
– ವಿ.ಶ್ರೀರಾಮ್ ಬೆಂಗಳೂರು