ಪ್ರಧಾನಿ ಮೋದಿ ತೆಗೆದುಕೊಂಡ ಯಾವುದೇ ನಿರ್ಧಾರವಿದ್ದರೂ, ಮೊಸರಿನಲ್ಲಿ ಕಲ್ಲು ಹುಡುಕುತ್ತಿಿದ್ದ ಕಾಂಗ್ರೆೆಸ್ಸಿಿನ ನಾಯಕರು ಹಠಾತ್ ಬದಲಾವಣೆಯಾಗಿದ್ದು ದೇಶದ ಜನತೆಗೆ ಆಶ್ಚರ್ಯ ತರಿಸಿದೆ. ಮೋದಿಯವರ ಕಡು ವಿರೋಧಿಗಳಾಗಿದ್ದ ಪಿ.ಚಿದಂಬರಂ, ಜೈರಾಮ್ ರಮೇಶ್, ಅಭಿಷೇಕ್ ಮನು ಸಿ್ಂವ, ಶಶಿ ತರೂರ ಸಹಿತ ಮುಂತಾದ ನಾಯಕರು ಮೋದಿ ಕುರಿತು ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಮೋದಿ ಆಗ್ಟ್ 15ರಂದು ಕೆಂಪುಕೋಟೆಯ ಮೇಲೆ ದೇಶವನ್ನುದ್ದೇಶಿಸಿ ಜನಸಂಖ್ಯೆೆಯ ನಿಯಂತ್ರಣ, ಪ್ಲಾಾಸ್ಟಿಿಕ್ ನಿರ್ಮೂಲನೆ ಕುರಿತು ಮಾಡಿದ ಭಾಷಣವನ್ನು ಪಿ.ಚಿದಂಬರಂ ಮುಕ್ತ ಕಂಠದಿಂದ ಶ್ಲಾಾಸಿದ್ದರು.
ಇದರ ಬೆನ್ನಲ್ಲೇ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಅವರು, ಮೋದಿ ಮಾಡಿದ್ದನ್ನು ಈ ಹಿಂದೆ ಯಾರೂ ಮಾಡಿಲ್ಲ, ಅವರ ಅವಧಿಯಲ್ಲಿನ ಆಡಳಿತ ಸಂಪೂರ್ಣವಾಗಿ ಋಣಾತ್ಮಕ ಅಂಶಗಳನ್ನು ಒಳಗೊಂಡಿಲ್ಲ. ಪ್ರತಿ ಬಾರಿಯೂ ಅವರ ಕೆಲಸಕ್ಕೆೆ ವಿರೋಧವಾಗಿ ಮಾತನಾಡುವುದು ಒಳ್ಳೆೆಯದಲ್ಲ ಎಂದಿದ್ದಾರೆ. ಇವರ ಅಭಿಪ್ರಾಾಯಕ್ಕೆೆ ಅಭಿಷೇಕ್ ಮನು ಸಿ್ಂವ ಮತ್ತು ಶಶಿ ತರೂರ ಬೆಂಬಲ ನೀಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಮೋದಿಯವರ ಕಡು ವಿರೋಧಿಗಳಾಗಿದ್ದ ಇವರು ಸ್ವಚ್ಛ ಭಾರತ ಅಭಿಯಾನ, ಬಾಲಕೋಟ್ ದಾಳಿ, ಸರ್ಜಿಕಲ್ ಸ್ಟ್ರೈಕ್ ನಂತರ ದೇಶ ಮೆಚ್ಚುವ ಕಾರ್ಯಾಚರಣೆಯ ಬಗ್ಗೆೆ ಸಾಕ್ಷಿ ಕೇಳಿದ್ದರು. ದೇಶದ ರಾಜಕೀಯ ವ್ಯವಸ್ಥೆೆಯಲ್ಲಿ ಇಂತಹ ಬದಲಾವಣೆ ಕಾಣಿಸಿರುವುದು ಸ್ವಾಾಗತಾರ್ಹ .
-ಮಣಿಕಂಠ ಪಾ ಹಿರೇಮಠ., ಚವಡಾಪೂರ