Friday, 27th May 2022

ಹನಿಟ್ರ‍್ಯಾಪ್‍ಗೆ ಸಿಲುಕಿ ಮಾಹಿತಿ ಸೋರಿಕೆ: ಅಧಿಕಾರಿ ಬಂಧನ

ನವದೆಹಲಿ: ಪಾಕಿಸ್ತಾನ ಮೂಲದ ಏಜೆಂಟ್‍ನ ಹನಿಟ್ರ‍್ಯಾಪ್‍ಗೆ ಸಿಲುಕಿ ರಕ್ಷಣಾ ಇಲಾಖೆ ಯ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಆರೋಪದ ಮೇಲೆ ಸಾರ್ಜೆಂಟ್ ದರ್ಜೆಯ ಅಧಿಕಾರಿಯನ್ನು ಬಂಧಿಸಲಾಗಿದೆ.

ಆರೋಪಿ ದೇವೆಂದರ್ ನಾರಾಯಣ ಶರ್ಮಾ ಎಂದು ಗುರುತಿಸಲಾಗಿದ್ದು, ಸುಬ್ರೊಟೊ ಪಾಕ್‍ರ್ನಲ್ಲಿರುವ ಭಾರತೀಯ ವಾಯು ಪಡೆಯ ದಾಖಲೆಗಳ ಕಚೇರಿಯಲ್ಲಿ ಆಡಳಿತ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ತನಿಖೆಯ ಸಮಯದಲ್ಲಿ, ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಶರ್ಮಾ ಅವರನ್ನು ಹನಿಟ್ರ್ಯಾಪ್‍ಗೆ ಬೀಳಿಸಿದ್ದಾರೆ ಎಂಬುದು ಖಚಿತವಾಗಿದೆ. ಮಹಿಳೆಯೊಂದಿಗೆ ಸೂಕ್ಷ್ಮ ದಾಖಲೆಗಳನ್ನು ಸಾರ್ಜೆಂಟ್ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪದಲ್ಲಿ ಮೇಲ್ನೋಟಕ್ಕೆ ಸತ್ಯಾಂಶ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಮಾಹಿತಿ ಸೋರಿಕೆ ಮಾಡಿರುವ ಆಧಾರದ ಮೇಲೆ ಅಧಿಕಾರಿಯನ್ನು ಬಂಧಿಸಲಾಗಿದೆ.

ಪೊಲೀಸರ ಪ್ರಕಾರ ಶರ್ಮಾ ಏಜೆಂಟ್‍ನಿಂದ ಹಣವನ್ನು ಸಹ ಪಡೆದಿದ್ದಾರೆ. ಭಾರತೀಯ ವಾಯುಪಡೆಗೆ ಬಂದ ದೂರಿನ ಆಧಾರದ ಮೇಲೆ ಅಧಿಕೃತ ರಹಸ್ಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.