Friday, 7th May 2021

ವೀಕೆಂಡ್ ಲಾಕ್ ಡೌನ್ ಒಂದು ದಿನ ವಿಸ್ತರಣೆ: ಯುಪಿ ಸರ್ಕಾರ

ಲಖನೌ: ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕಿನ ದೃಷ್ಟಿಯಿಂದ, ಪ್ರಸ್ತುತ ಜಾರಿಯಲ್ಲಿರುವ ವಾರಾಂತ್ಯದ ಲಾಕ್‌ಡೌನ್ ಅನ್ನು ಒಂದು ದಿನ ವಿಸ್ತರಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿ ಲಾಕ್‌ಡೌನ್ ಶುಕ್ರವಾರ ರಾತ್ರಿ 8 ರಿಂದ ಪ್ರಾರಂಭವಾಗಲಿದ್ದು, ಮಂಗಳವಾರ ಬೆಳಿಗ್ಗೆ 7 ಗಂಟೆಗೆ ಕೊನೆಗೊಳ್ಳಲಿದೆ. ವಾರಾಂತ್ಯದ ಲಾಕ್‌ಡೌನ್‌ನಿಂದಾಗಿ ಹೊಸ ಕರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಸಮಯದಲ್ಲಿ ಎಲ್ಲಾ ಅಗತ್ಯ ಸೇವೆಗಳು ಮುಂದುವರಿಯುತ್ತವೆ, ಆದಾಗ್ಯೂ, ಅನಗತ್ಯವಾಗಿ ತಿರುಗಾಡುವವರನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ.

ಕರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ವಾರಾಂತ್ಯದ ಲಾಕ್​ಡೌನ್ ಬದಲು ಎರಡು ವಾರಗಳವರೆಗೆ ಸಂಪೂರ್ಣ ಲಾಕ್‌ಡೌನ್ ಪರಿಗಣಿಸುವಂತೆ ಸೂಚಿಸಿತ್ತು. ಏತನ್ಮಧ್ಯೆ, ಉತ್ತರಪ್ರದೇಶದಲ್ಲಿ 1 ರಿಂದ 8 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳನ್ನೂ – ಶೈಕ್ಷಣಿಕ ಕಾರ್ಯಗಳನ್ನು 2021 ರ ಮೇ 20 ರವರೆಗೆ ನಿರ್ಬಂಧಿಸಲಾಗಿದೆ. ಈ ನಿಟ್ಟಿನಲ್ಲಿ ಶಾಲೆಗಳನ್ನು ಮುಚ್ಚುವ ಆದೇಶವನ್ನೂ ನೀಡಲಾಗಿದೆ.

2021 ರ ಮೇ 20 ರವರೆಗೆ ವಿದ್ಯಾರ್ಥಿಗಳು ಶಾಲೆಗೆ ಬರುವುದಿಲ್ಲ ಎಂದು ಯುಪಿ ಮೂಲ ಶಿಕ್ಷಣ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಡಾ.ಸತೀಶ್ ದ್ವಿವೇದಿ ಹೇಳಿದ್ದಾರೆ.

ವಿಶೇಷವೆಂದರೆ, ಕಳೆದ ನಾಲ್ಕು ದಿನಗಳಿಂದ, ಯುಪಿಯಲ್ಲಿ ಹೊಸದಾಗಿ ಸೋಂಕಿನ ಪ್ರಕರಣಗಳು ಇಳಿಮುಖ ವಾಗಿವೆ. ಉತ್ತರಪ್ರದೇಶದಲ್ಲಿ ಬುಧವಾರ ಕಳೆದ 24 ಗಂಟೆಗಳಲ್ಲಿ 29,824 ಹೊಸ ರೋಗಿಗಳು ವರದಿಯಾಗಿ ದ್ದರೆ, ಕೊರೋನಾ ರೋಗದಿಂದ ಚೇತರಿಸಿಕೊಂಡು ಮನೆಗೆ ತೆರಳಿದವರ ಸಂಖ್ಯೆ 35,903 ಕ್ಕೆ ಏರಿಕೆಯಾಗಿದೆ.

 

Leave a Reply

Your email address will not be published. Required fields are marked *