Tuesday, 9th August 2022

ದೋಡಾ ಪೊಲೀಸರ ಜಂಟಿ ಕಾರ್ಯಾಚರಣೆ: ಉಗ್ರನ ಬಂಧನ

ಶ್ರೀನಗರ: ಜಮ್ಮು-ಕಾಶ್ಮೀರದ ದೋಡಾ ಪೊಲೀಸರು ಭದ್ರತಾ ಪಡೆಗಳ ಜತೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕೋಟಿ ದೋಡಾ ನಿವಾಸಿ ಫರೀದ್ ಅಹ್ಮದ್ ಎಂಬ ಭಯೋತ್ಪಾದಕನನ್ನು ಸೋಮವಾರ ಬಂಧಿಸಿದ್ದಾರೆ.

ಒಂದು ಚೈನೀಸ್ ಪಿಸ್ತೂಲ್, ಎರಡು ಬಂದೂಕುಗಳು, 14 ಕಾಟ್ರೀಜ್ ಗಳು ಮತ್ತು ಒಂದು ಮೊಬೈಲ್ ಫೋನ್ ನ್ನು ವಶಪಡಿಸಿ ಕೊಂಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಅಮರನಾಥ ಯಾತ್ರೆಗೆ ಮುನ್ನ ಹೆಚ್ಚಿನ ಭದ್ರತಾ ಕ್ರಮವಾಗಿ, ಪೊಲೀಸರು ಠಾಣೆ ದೋಡಾದ ಪಟ್ಟಣದ ಹೊರವಲಯದಲ್ಲಿ ತಡೆಯನ್ನು ಹಾಕಿದ್ದರು. ಈ ಸಂದರ್ಭದಲ್ಲಿ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊತ್ತಿದ್ದ ಯುವಕನನ್ನು ತಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಫರೀದ್ ಅಹ್ಮದ್ ಶಂಕಿತನಿಂದ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡುಗಳನ್ನು ಪಡೆದು ದೋಡಾದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಲು ಸಂಚು ರೂಪಿಸುತ್ತಿದ್ದ ಎಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.