Friday, 30th September 2022

ಕೆಎಎಸ್, ಪಿಎಸ್ಐ ಪರೀಕ್ಷೆಗೆ ಒಂದು ವರ್ಷ ಉಚಿತ ತರಬೇತಿ

ಬೆಂಗಳೂರು: ಕೆಎಎಸ್, ಪಿಎಸ್ ಐ, ಎಫ್ ಡಿಎ, ಎಸ್ ಡಿಎ, ಪಿಡಿಓ, ಗ್ರೂಪ್ ಸಿ, ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಬೆಂಗಳೂರಿನ ಕೆಆರ್‌ಪುರದಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡೆಮಿ ವತಿಯಿಂದ 4 ತಿಂಗಳು ಅಥವಾ ಒಂದು ವರ್ಷದವರೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಸೆ.7ರಿಂದ ತರಗತಿಗಳು ಆರಂಭವಾ ಗುತ್ತಿದ್ದು, ಇಂದಿನಿಂದಲೇ ಪ್ರವೇಶ ಪಡೆಯಹುದಾಗಿದೆ.

ತರಬೇತಿ ಸಂಪೂರ್ಣ ಉಚಿತವಾಗಿದ್ದು, ಅಕಾಡೆಮಿಯಲ್ಲಿ 24/7 ಗ್ರಂಥಾಲಯ ಸೌಲಭ್ಯ, ಪ್ರತಿ ವಾರ ನಡೆಸುವ ಟೆಸ್ಟ್, ಪ್ರತಿ ವಿದ್ಯಾರ್ಥಿಗೆ ಪ್ರತಿ ದಿನ ನ್ಯೂಸ್ ಪೇಪರ್‌ ಸೇರಿದಂತೆ ಇತರ ಸೌಲಭ್ಯಗಳಿಗೆ ಕನಿಷ್ಠ ಮಾತ್ರ ಶುಲ್ಕವಿರುತ್ತದೆ ಎಂದು ಅಕಾಡಮಿಯ ನಿರ್ದೇಶಕ ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.

ವಿಳಾಸ: ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡೆಮಿ , GRT ಜ್ಯುವೆಲರ್ಸ್ ಎದುರು, ಕೆ.ಆರ್ ‌ಪುರ, ಬೆಂಗಳೂರು-36. ನೋಂದಣಿ ಮತ್ತು ಮಾಹಿತಿಗಾಗಿ ಸಂಪರ್ಕಿಸಿ, 9632516387, 9902829811