Monday, 16th May 2022

ಕುಕ್ಕೆ ಸುಬ್ರಹ್ಮಣ್ಯ: ಜ.16ರವರೆಗೆ ದರ್ಶನಕ್ಕೆ ಮಾತ್ರ ಅವಕಾಶ

Kukke

ಮಂಗಳೂರು: ಕೋವಿಡ್ ಮತ್ತು ಓಮೈಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಪ್ರಭಾವ ದೇವಾಲಯಗಳ ಮೇಲೂ ಬಿದ್ದಿದೆ.

ಸರ್ಕಾರ ಹಬ್ಬ, ಜಾತ್ರೆ, ಉತ್ಸವಗಳನ್ನು ನಿರ್ಬಂಧಿಸಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ಜ.16ರವರೆಗೆ ಕೇವಲ‌ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಜ.6ರಿಂದ ಮುಂದಿನ ಆದೇಶದವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತಾದಿಗಳ ಯಾವುದೇ ಸೇವಾದಿಗಳು ನಡೆಸಲ್ಪಡುವುದಿಲ್ಲ ಎಂದು ಹೇಳಿದೆ.

ದೇವಳಕ್ಕೆ ಬರುವ ಭಕ್ತಾದಿಗಳಿಗೆ ಒಂದು ಬಾರಿಗೆ 50 ಮಂದಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿರುತ್ತದೆ ಹಾಗೂ ವಾರಾಂತ್ಯದಲ್ಲಿ ಶುಕ್ರವಾರ ರಾತ್ರಿ ಗಂಟೆ 10 ರಿಂದ ಸೋಮವಾರ 5 ಗಂಟೆಯ ತನಕ ವೀಕ್‌ಎಂಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಶನಿವಾರ ಮತ್ತು ಭಾನುವಾರಗಳಂದು ದರ್ಶನಕ್ಕೆ ಕೂಡಾ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕುಕ್ಕೆ‌ಸುಬ್ರಹ್ಮಣ್ಯದಲ್ಲಿ ವಾರದ ದಿನಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಿದ್ದು, ವಾರಾಂತ್ಯದಲ್ಲಿ ದರ್ಶನಕ್ಕೂ‌ ನಿರ್ಬಂಧ ವಿಧಿಸಲಾಗಿದೆ. ಜಿಲ್ಲೆ ಯಲ್ಲಿ ಲಸಿಕಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಜಿಲ್ಲೆಯಲ್ಲಿ 1 ಲಕ್ಷ ಕ್ಕೂ ಹೆಚ್ಚಿನವರು ಈ ವರೆಗೂ ಒಂದು ಡೋಸ್ ಲಸಿಕೆಯ‌ನ್ನೂ ಪಡೆದಿಲ್ಲ.

ಜಿಲ್ಲೆಯಲ್ಲಿ ನಡೆಯುತ್ತಿರುವ ಕಂಬಳ, ಕೋಲ , ಯಕ್ಷಗಾನ ಕಾರ್ಯಕ್ರಮ ಮುಂದೂಡಬೇಕು. ಪೂರ್ವ ನಿಗದಿತ ಮದುವೆ ಕಾರ್ಯಕ್ರಮದಲ್ಲಿ ಕೇವಲ 200 ಜನರಿಗೆ ಮಾತ್ರ ಅವಕಾಶ ನೀಡಿದ್ದೇವೆ. ಮುಂದಿನ ವಾರದಿಂದ ವಾರಾಂತ್ಯದ ಕರ್ಫ್ಯೂ ಬಿಗಿಗೊಳಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.