Wednesday, 11th December 2024

ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಇವರ‍್ಯಾರು ?

ಅಭಿಮತ

ಮಾರುತೀಶ ಅಗ್ರಾರ

ಗ್ರೇಟಾ ಥನ್‌ಬರ್ಗ್, ರೆಹಾನಾ, ಮಿಯಾ ಖಲೀ-, ಮೀನಾ ಹ್ಯಾರಿಸ್, ಜಯ್ ಶಾ ಅಲಿ ಯಾಸ್ ಕಮಲ್ ಜಜಿತ್ ಸಿಂಗ್ ಝೂಟಿ, ಡಾ.ಝೇಡೆಸ್ ಉರುಫ್ ಬಲ್ಜೀತ್ ಸಿಂಗ್ ಪದಂ ಇವರೆಲ್ಲ ಯಾರು? ರೈತರಾ? ಭಾರತೀಯರಾ? ಹೋಗಲಿ, ಭಾರತ ಸರಕಾರ
ನೇಮಿಸಿರುವ ವಿದೇಶಿ ರಾಯಭಾರಿಗಳಾ? ಇದ್ಯಾವುದೂ ಅಲ್ಲ.

ಹೋಗಲಿ ಇವರ ಅಜ್ಜ, ಅಪ್ಪ, ಅಣ್ಣ-ತಮ್ಮ, ಬಂಧು-ಬಳಗ ಇವರುಗಳ್ಯಾರಾದರು ಭಾರತದಲ್ಲಿ ರೈತರಾಗಿದ್ದರಾ? ಇಲ್ಲ.
ಅಂತಹಾ ಯಾವುದೇ ಹಿನ್ನೆಲೆಗಳಿಲ್ಲ ಇವರಿಗೆ. ಅರುಂಧತಿ ರಾಯ್ ಅಂಥವರಾದರೆ, ಮಿಯಾ ಖಲೀಫಳ ಅಜ್ಜನ ಮೂಲ ಭಾರತ. ಹಾಗೂ ಅವರದ್ದು ಕೂಡ ರೈತ ಮನೆತನವೇ ಆಗಿತ್ತೆಂದೇಳಿ, ಮಿಯಾಗೂ ಭಾರತಕ್ಕೂ ಲಿಂಕಿದೆ ಎಂದು ಕಪೋಲಕಲ್ಪಿತ ಸಂಬಂಧ ಕಲ್ಪಿಸಿ ಜನರ ಮುಂದೆ ಹೇಳಿದರೂ ಅದನ್ನು ಕಿವಿಕೊಟ್ಟು ಕೇಳಲು ಈಗ ಭಾರತದಲ್ಲಿರುವುದು ಮೋದಿ ಸರಕಾರ!

ಆದಾಗ್ಯೂ ಭಾರತದ ಕೆಲ ಸೋಕಾಲ್ಡ್ ಹೋರಾಟಗಾರರು, ಎಡಪಂಥೀಯರು, ಬುದ್ಧಿಜೀವಿಗಳು, ಪೇಡ್ ಸಾಹಿತಿಗಳು,
ಪ್ರಗತಿಪರರು, ಕಾಂಗ್ರೆಸ್ಸಿನ ಚೇಲಾಗಳು ಹಾಗೂ ಮೋದಿ ವಿರೋಧಿಗಳೆಲ್ಲರೂ ಮೋದಿ ವಿರುದ್ಧ ನಾನಾ ರೀತಿಯ ಪಿತೂರಿಗಳನ್ನು ಹೂಡಿ ಜನರನ್ನು ಮೋದಿ ವಿರುದ್ಧ ಎತ್ತಿಕಟ್ಟಲು ಯತ್ನಿಸಿದರೆ ಅವರುಗಳ ಮಾತಿಗೆ ಮರುಳಾಗುವವರು ಯಾರು ಇಲ್ಲ! ಯಾಕೆ ಗೊತ್ತಾ? ಬರ್ಖಾ ದತ್, ಸಾಗರೀಕ ಘೋಷ್, ರಾಜ್‌ದೀಪ್ ಸರ್‌ದೇಸಾಯಿರಂತ ಪ್ರಗತಿಪರರೆನಿಸಿಕೊಂಡವರ ಹಾಗೂ ಜೀವಪರ ರೆಂದುಕೊಂಡವರ ನಿಜವಾದ ಮುಖವಾಡ ಏನೆಂಬುದು ರಾಷ್ಟ್ರದ ಜನರಿಗೆ ಗೊತ್ತಾಗಿದೆ.

ಆದರೆ ವಿಷಯ ಅದಲ್ಲ. ವಯಸ್ಸಿಗೆ ಮೀರಿದ ಪಬ್ಲಿಸಿಟಿ ಸಿಕ್ಕಿದರೆ ಗ್ರೇಟಾ ಥನ್‌ಬರ್ಗ್ ನಂಥವರ ತಲೆ ಕುತ್ತಿಗೆ ಮೇಲೆ ನಿದೆ ಇಲ್ಲ! ಇಂಥವರಿಗೆ ನಮ್ಮ ಮಾತನ್ನು ಜಗತ್ತು ಆಲಿಸುತ್ತದೆ ಎನ್ನುವ ಧೀಮಾಕು! ಅಂದಹಾಗೆ ಇವರುಗಳ ರಕ್ಷಕರು ಹಾಗೂ ಬೆಂಬಲಿಗರು ಯಾರು ಗೊತ್ತಾ? ಜಗತ್ತಿನ ಬುದ್ಧಿಜೀವಿಗಳು! ಇವರಿಗೆ ಭಾರತೀಯರ ಕಷ್ಟ-ಸುಖ, ಇಲ್ಲಿನ ಜನಜೀವನ, ರಾಜಕೀಯ ವ್ಯವಸ್ಥೆ, ಸರಕಾರದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸವಾಲುಗಳೇನು? ಆಶೋತ್ತರಗಳೇನು? ಸರಕಾರವೊಂದು ಜಾತ್ಯತೀತ ಪ್ರಜಾ ಪ್ರಭುತ್ವ ಹೊಂದಿರುವ ದೊಡ್ಡ ರಾಷ್ಟ್ರವೊಂದನ್ನು ಹೇಗೆ ಮುನ್ನಡೆಸುತ್ತದೆ? ಅದರ ಮುಂದಿರುವ ಮಾರ್ಗಗಳೇನು? ಎಂಬುದರ
ಬಗ್ಗೆ ಲವಲೇಶವಾದರೂ ಮಾಹಿತಿ ಇದೆಯಾ?

ನಯಾಪೈಸೆ ಮಾಹಿತಿ ಇಲ್ಲದಿದ್ದರೂ, ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ ಅಂತಾರಾಷ್ಟ್ರೀಯವಾಗಿ ಇನ್ನಷ್ಟು ದೊಡ್ಡವರಾಗೋ ಹಪಾಹಪಿ ಇವರಿಗೆ! ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತ ಹೋರಾಟದಲ್ಲಿ ಭಾಗಿಯಾಗಿದ್ದಕ್ಕೆ ಥನ್ ಬರ್ಗ್
ಅಂಥವರಿಗೆ ವಿದೇಶಿ ಕೋಟಾದಡಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಕೊಟ್ಟರೂ ಆಶ್ಚರ್ಯವಿಲ್ಲ!

ನಿಜವಾಗಿಯೂ ರಿಹಾನಾ, ಮಿಯಾ ಖಲೀ-, ಥನ್ ಬರ್ಗ್ ಅಂಥವರಿಗೆ ನಾಗರೀಕ ಸಮಾಜದ ಮೇಲೆ ಮಮಕಾರ, ಸಹಾನುಭೂತಿ ಇದ್ದಿದ್ದರೆ, ಕಳೆದ ವರ್ಷ ಅಮೆರಿಕದಲ್ಲಿ ಜಾರ್ಜ್ ಫಾಯ್ಡ್ ಎಂಬ ಕಪ್ಪು ವರ್ಣಿಯನ ಕತ್ತಿನ ಮೇಲೆ ಮೊಣಕಾಲಿಟ್ಟು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ರೀತಿಯಲ್ಲಿ ಆತನನ್ನು ಅಲ್ಲಿನ ಪೊಲೀಸರು ಕೊಂದರಲ್ಲ ಆಗೇಕೆ ಇವರು ಅಮೆರಿಕದ ಬಿಳಿಯರು ತೋರಿದ ದೌರ್ಜನ್ಯ ನೀತಿಯ ವಿರುದ್ಧ ದನಿ ಎತ್ತಲಿಲ್ಲ? ಒಂದೇ ಒಂದು ಟ್ವೀಟನ್ನು ಮಾಡಲಿಲ್ಲ? ಅವರವರ ತಟ್ಟೆಯ ಹೆಗ್ಗಣಗಳು ಸತ್ತು ಬಿದ್ದಿರುವಾಗ ಬೇರೆಯವರ ತಟ್ಟೆಯಲ್ಲಿ ಬಿದ್ದಿರುವ ನೋಣ ಹುಡುಕಿದಂತಾಗಿದೆ ಇವರ ಹೋರಾಟದ ಹಾದಿ!

ಯಾಕೆಂದರೆ ಅವರುಗಳ ದೇಶದ ನೂರೆಂಟು ಸಮಸ್ಯೆಗಳು, ಸಾಕಷ್ಟು ಹೋರಾಟಗಳು ಹಳ್ಳ ಹಿಡಿದಿರುವಾಗ ನಮ್ಮ ದೇಶದ ಚಿಂತೆಯೇಕೆ ಇವರಿಗೆ. ಕಳೆದ ಆರೇಳು ವರ್ಷಗಳಿಂದ ಮೋದಿಯ ವರ್ಚಸ್ಸನ್ನು ಜಾಗತಿಕವಾಗಿ ಹಾಳು ಮಾಡಲು ಕಾಂಗ್ರೆಸ್ ಹಾದಿಯಾಗಿ ಅನೇಕರು ಪ್ರಯತ್ನಿಸಿದರು. ಆದರೆ ಅವರ ಪ್ರಯತ್ನ ಹಳ್ಳಹಿಡಿಯಿತು. ಆರ್ಟಿಕಲ-೩೭೦, ತ್ರಿವಳಿ ತಲಾಕ್ ರದ್ದು, ಸಿಎಎ, ರಾಮಮಂದಿರ ಈ ಎಲ್ಲಾ ವಿಚಾರದಲ್ಲೂ ಜನರನ್ನು ಮೋದಿಯ ವಿರುದ್ಧ ಎತ್ತಿಕಟ್ಟಲು ಹೋಗಿ ಕೊನೆಗೆ ತಾವೇ ಜನರಿಂದ ತಪರಾಕಿ ಹಾಕಿಸಿಕೊಂಡರು ಮೋದಿ ವಿರೋಧಿಗಳು.

ಇದರಿಂದ ಜೀರ್ಣಿಸಿಕೊಳ್ಳಲಾಗದಷ್ಟು ನಷ್ಟವಾಗಿದ್ದು ಕಾಂಗ್ರೆಸ್‌ಗೆ! ಆದರೂ ಮಂಡಿಗೆ ತಿನ್ನುವುದನ್ನು ಮಾತ್ರ ಆ ಪಕ್ಷ ಬಿಟ್ಟಿಲ್ಲ. ಮೋದಿಯ ಯಶಸ್ಸನ್ನು ಕಮ್ಯುನಿ ನಾಯಕರು ಸಹಿಸುತ್ತಿಲ್ಲ. ಆದ್ದರಿಂದ ಇದೀಗ ಕೃಷಿ ಮಸೂದೆ ಜಾರಿ ಮಾಡಿರುವುದನ್ನು ಮುಂದಿಟ್ಟುಕೊಂಡು ರೈತರನ್ನು ಹಾಗೂ ಜನರನ್ನು ಮೋದಿಯವರ ವಿರುದ್ಧ ಎತ್ತಿ ಕಟ್ಟುವುದು ಬುದ್ಧಿಜೀವಿಗಳ ಯೋಚನೆ ಯಾಗಿದೆ.