Sunday, 29th January 2023

ಜೂ.12ರಂದು ಸಪ್ತಗಿರಿ ಮೆಲೋಡೀಸ್ ಆರ್ಕೆಸ್ಟ್ರಾ ತಂಡದಿಂದ ಗಾನಗಂಧರ್ವ ರಸಮಂಜರಿ

ಮೈಸೂರು: ನಗರದ ಚಾಮುಂಡಿಪುರನ ಸಪ್ತಗಿರಿ ಮೆಲೋಡೀಸ್ ಆರ್ಕೆಸ್ಟ್ರಾ ತಂಡ ದಿಂದ ಜೂ.12ರಂದು ಸಂಜೆ ನಂಜು ಮಳಿಗೆಯ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಗಾಯಕರಾಗಿದ್ದ ದಿವಂಗತ ಎಸ್.ಪಿ.ಬಾಲಸುಬ್ರಹ್ಮಣ್ಯಂ ಜನ್ಮದಿನದ ಅಂಗ ವಾಗಿ ‘ಗಾನಗಂಧರ್ವ’ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಧ್ಯಕ್ಷ ಎಂ.ವಿ. ಗೋವಿಂದರಾಜ್ ಮಾತನಾಡಿ, ‘ಸಾರ್ವಜನಿಕರಿಗೆ ಉಚಿತ ಪ್ರವೇಶ ಇರಲಿದೆ’ ಎಂದರು.

‘ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಮಾಜ ಸೇವಕರಾದ ರವಿ ಗೌಡ್ರು, ಕೆ.ರಘುರಾಂ ವಾಜಪೇಯಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ನಿಕಟಪೂರ್ವ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಚಲನಚಿತ್ರ ನಿರ್ಮಾಪಕ ಎಸ್.ಎ.‌ ಶ್ರೀನಿವಾಸ್, ವೈದ್ಯರಾದ ಡಾ.ಸುರೇಂದ್ರ, ಡಾ.ರೇಖಾ, ಡಾ. ರವೀಂದ್ರ ಕುಮಾರ್ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಹಲವು ದಶಕಗಳಿಂದ ಕಲಾ ಸೇವೆ ಮಾಡಿದ ಸಾಧಕರಾದ ಮಹಾಲಿಂಗು, ನಾಗರಾಜ್, ಬಾಲಕೃಷ್ಣ, ಜಯಲಕ್ಷ್ಮಿ ನಾಯ್ಡು, ಶಾಂತಮ್ಮ, ರಾಧಮ್ಮ, ಪಾರ್ಥಸಾರಥಿ, ವಾಸು, ಪಾರ್ವತಮ್ಮ ಹಾಗೂ ಶಾಂಭಮೂರ್ತಿ ಅವರನ್ನು ಸತ್ಕರಿಸಲಾಗುವುದು’ ಎಂದರು.

error: Content is protected !!