Saturday, 12th October 2024

ಅಜಯ್ ಕುಮಾರ್ ತ್ರಿಪಾಠಿ ಕರೋನಾಗೆ ಬಲಿ 

ದೆಹಲಿ:

ಭ್ರಷ್ಟಾಚಾರ ನಿಗ್ರಹ ಪ್ರಾಾಧಿಕಾರ ಲೋಕಪಾಲ್‌ನ ಸದಸ್ಯ ನಿವೃತ್ತ ನ್ಯಾಾಯಮೂರ್ತಿ ಅಜಯ್ ಕುಮಾರ್ ತ್ರಿಿಪಾಠಿ  ಕರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಎ.ಕೆ.ತ್ರಿಿಪಾಠಿ ಅವರಿಗೆ ಸುಮಾರು ಒಂದು ತಿಂಗಳ ಹಿಂದೆ ಕರೋನಾ ವೈರಸ್ ಸೋಂಕು ದೃಢಪಟ್ಟಿಿತ್ತು. ಅಂದಿನಿಂದ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆೆ ಏಮ್ಸ್ ಆಸ್ಪತ್ರೆೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆೆ ಮುಂದುವರಿಸಲಾಗಿತ್ತು.
ಅವರ ಆರೋಗ್ಯ ಮತ್ತಷ್ಟು ವಿಷಮಗೊಂಡ ಕಾರಣ ಅವರನ್ನು ಕಳೆದ ಮೂರು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿರಿಸಿ ನಿಗಾ ವಹಿಸಲಾಗಿತ್ತು. ಆದರೆ ಚಿಕಿತ್ಸೆೆ ಫಲಕಾರಿಯಾಗದೇ  ಕೊನೆಯುಸಿರೆಳೆದರು.

ಛತ್ತೀಸ್‌ಗಢ ಹೈಕೋರ್ಟ್‌ ಮುಖ್ಯ ನ್ಯಾಾಯಮೂರ್ತಿಯಾಗಿದ್ದ ಅವರು ಲೋಕಪಾಲ್‌ನ ನಾಲ್ವರು ಹಿರಿಯ ಸದಸ್ಯರಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸುತ್ತಿಿದ್ದರು.