Friday, 13th December 2024

ಗಿಲ್ಗಿಟ್ ಬಲ್ಟಿಸ್ತಾನ್‌ನಲ್ಲಿ ಚುನಾವಣೆಗೆ ಪಾಕ್ ಸುಪ್ರೀಂ ಆದೇಶ

ದೆಹಲಿ:

ಭಾರತದ ವಿರುದ್ಧ ಒಂದಿಲ್ಲೊಂದು ತಗಾದೆ ಮಾಡುತ್ತಿರುವ ಪಾಕಿಸ್ತಾನ ಈಗ ಮತ್ತೊಮ್ಮೆ ಗಿಲ್ಗಿಟ್ ಬಲ್ಟಿಸ್ತಾನ್ ಪ್ರದೇಶದ ವಿಷಯದಲ್ಲೂ ಮತ್ತೊಮ್ಮೆ ಕ್ಯಾತೆ ತೆಗೆದಿದೆ.

ಆದರೆ ಭಾರತ ಪಾಕ್ ನರಿ ಬುದ್ದಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟಸಿದೆ. ಭಾರತದ ಅವಿಭಾಜ್ಯ ಅಂಗವಾಗಿರುವ ಗಿಲ್ಗಿಟ್ ಬಲ್ಟಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ಪಾಕಿಸ್ತಾನ ಸುಪ್ರೀಂಕೋರ್ಟ್ ನೀಡಿರುವ ಆದೇಶದ ವಿರುದ್ಧ ಕೇಂದ್ರ ಸರಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ಪಾಕಿಸ್ತಾನಕ್ಕೆೆ ತಾಕೀತು ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಗಿಲ್ಗಿಟ್ ಬಲ್ಟಿಸ್ತಾನ, ಲಡಖ್ ಹಾಗೂ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಪುನರುಚ್ಚರಿಸಿದೆ. ಈ ಪ್ರದೇಶಗಳಲ್ಲಿ ಅಕ್ರಮ ಅಧಿಭೋಗವನ್ನು ಪಾಕಿಸ್ತಾನ ಕೂಡಲೇ ತೆರವುಗೊಳಿಸಬೇಕು ಎಂದು ಕೇಂದ್ರ ಸರಕಾರ ಆಗ್ರಹಿಸಿದೆ.

ಗಿಲ್ಟಿಗ್ ಬಲ್ಟಿಸ್ತಾನ ಪ್ರದೇಶದಲ್ಲಿ ಚುನಾವಣೆ ನಡೆಸಲು 2018ರ ಸರಕಾರದ  ಆದೇಶಕ್ಕೆ ತಿದ್ದುಪಡಿ ಮಾಡಲು ಪಾಕಿಸ್ತಾನ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಇದರ ವಿರುದ್ಧ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಈ ಪ್ರದೇಶದಿಂದ ಅಕ್ರಮ ಸ್ವಾದೀನವನ್ನು ತಕ್ಷಣ ತೆರವುಗೊಳಿಸುವಂತೆ ಆಗ್ರಹಿಸಿದೆ.