Saturday, 14th December 2024

ನಗರದಲ್ಲಿ ಸೋಂಕು ಹೆಚ್ಚಳ: ತಪಾಸಣೆ ಚುರುಕು  

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ನಗರದಲ್ಲಿ  ಕರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಪಾಸಣಾ ಪ್ರಕ್ರಿಯೆ ತೀವ್ರಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ  ಮತ್ತೆ 35 ಮಂದಿಗೆ ಸೋಂಕು ತಗುಲಿರುವ ಹಿನ್ನೆೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮುಂದಿನ ದಿನಗಳಲ್ಲಿ ಜನಜಂಗುಳಿಯಿರುವ ಪ್ರದೇಶಗಳಿಗೆ ಬಿಬಿಎಂಪಿ ಸಿಬ್ಬಂದಿ ಖುದ್ದು ಭೇಟಿ ನೀಡಿ, ರೋಗ ಲಕ್ಷಣಗಳುಳ್ಳ ಶಂಕಿತ ವ್ಯಕ್ತಿಗಳ ಸೋಂಕು ಪತ್ತೆ ಪರೀಕ್ಷೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಕಂಟೈನ್ಮೆೆಂಟ್ ವಲಯಗಳಿಂದ ಜನ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ಕರೋನಾ ಸೋಂಕಿತರಿರುವ ವ್ಯಕ್ತಿಯ ನೆಯನ್ನಷ್ಠೇ  ಕಂಟೈನ್ಮೆೆಂಟ್  ಪ್ರದೇಶವೆಂದು ಘೊಷಿಸಲಾಗುವುದು. ಇದರಿಂದ ನೆರೆ ಹೊರೆ ಪ್ರದೇಶಗಳ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ.