Wednesday, 11th December 2024

ಸಂತರ ಸಮಾಜಿಕ ಸುಧಾರಕರ ಯುಗ ಎಂದರೆ ತಪ್ಪಾಗುವುದಿಲ್ಲ

ಇಂಡಿ: ೧೨ನೇ ಶತಮಾನದ ಕ್ರಾಂತಿಕಾರಕ ಯುಗವಾಗಿದ್ದು ಶರಣರ ,ಸಂತರ ಸಮಾಜಿಕ ಸುಧಾರಕರ ಯುಗ ಎಂದರೆ ತಪ್ಪಾಗುವುದಿಲ್ಲ ಎಂದು ಕದಳಿ ವೇದಿಕೆ ಅಧ್ಯಕ್ಷ ಗಂಗಾಬಾಯಿ ಗಲಗಲಿ ಹೇಳಿದರು.

ಪಟ್ಟಣದ ಶ್ರೀಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಕದಳಿ ವೇದಿಕೆ ಇಂಡಿ, ಮನೆಗಳಲ್ಲಿ ಶರಣರ ಸಂದೇಶ ೨೫ನೇ ಬೆಲ್ಳಿ ಹಬ್ಬ ಮತ್ತು ೨೫ಜನ ಶಿಕ್ಷಕರಿಗೆ ಕದಳಿಶ್ರೀ ಪ್ರಶೆಸ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿವಶರಣರು, ಶರಣರು ಪದವನ್ನು ಶಿವನ ಭಕ್ತರು ಎಂದು ಸ್ಥೂಲವಾಗಿ ಹೇಳಬಹುದು, ೧೨ನೇ ಶತಮಾನದ ವಚನಕಾರರು ಎಂದು ಕರೆಯುತ್ತಾರೆ.

ಶರಣರು ಭಗವಂತನ ಸಂಕಲ್ಪಕ್ಕೆ ಶರಣಾದ ವ್ಯಕ್ತಿ ಶರಣರು. ಬಸಣ್ಣ ,ಅಲಂಪ್ರಭು, ಅPಕ್ಕಮಹಾದೇವಿ, ಮಡಿವಾಳ ಮಾಚೀದೇವ ರಚಿಸಿದ ವಚನಗಳಲ್ಲಿ ಶರಣರ ಸಂಸ್ಕೃತಿ ನೋಡಬಹುದು. ಶರಣರು ವಚನಗಳು ಇಂದಿನ ಸಮಾಜಕ್ಕೆ ಪ್ರಸ್ತುತ ಮೋಢನಂಬಿಕೆ ಗೋಢು ಸಂಪ್ರದಾಯ ತೀಲಾಂಜಲಿ ನೀಡಿ ದಯವಿಲ್ಲದ ಧರ್ಮ ಯಾವುದಯ್ಯಾ. ನುಡಿದರೆ ಮುತ್ತಿನ ಹಾರದಂತಿರಬೇಕು. ನಡೇತೀರ್ಥ ನುಡಿ ತೀರ್ಥ ಸನ್ನುಡಿ ಸಂಗವದು ತೀರ್ಥ ಹೀಗೆ ಹಲವಾರು ವಚನಗಳ ಮೂಲಕ ಸಮಸಮಾಜ ಹಾಗೂ ಮಾನವರ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಿದ್ದಾರೆ ,ಇಂದು ಶರಣರ ವಚನಗಳು ಪ್ರತಿಮನೆಮನೆ ಮನಗಳಲ್ಲಿ ಬಿತ್ತರಿಸಿ ಅದರ್ಶ ಸಮಾಜ ಕಟ್ಟುವಲ್ಲಿ ನಾವೇಲ್ಲರೂ ಶ್ರಮಿಸೋಣ ಎಂದರು. ಡಾ,ಸ್ವರೂಪಾನಂದ ಮಹಾಸ್ವಾಮಿಗಳು ಆರ್ಶೀವಚ ನೀಡಿದರು,

ಕದಳಿ ವೇದಿಕೆ ಅಧ್ಯಕ್ಷ ಗಂಗಾ ಗಲಗಲಿ ಆಶೇಯನುಡಿಗಳಾಡಿದರು. ನಿವೃತ್ತ ಪ್ರಾಚಾರ್ಯ ಶೈಲಜಾ ತೆಲ್ಲೂರ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ,ಎಸ್ ಆಲಗೂರ ಕಾರ್ಯಕ್ರಮ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಎಸ್ .ಎಸ್ ಕಲಘಟಗಿ, ಎ.ಆಯ ಸುಣಗಾರ, ಬಿ.ಎಸ್ ಪಾಟೀಲ, ಎಸ್ ಎಸ್ ಸುಗೂರ, ಶಾರದಾ ಹಿರೇಮಠ, ಬಿ.ಎಸ್ ಪೊಲೀಸ್‌ಪಾಟೀಲ, ರಿಯಾನಾ ಫಾಸ್ಟ್, ಭವಾನಿ ಗುಳೇದಗುಡ್ಡ, ಬಿ.ಈ ಹಿರೇಮಠ, ಪಾರ್ವತಿ ದಳವಾಯಿ, ಕದಳಿ ವೇದಿಕೆಯ ಎಲ್ಲಾ ಸರ್ವಸದಸ್ಯರು ಆಡಳಿತ ಮಂಡಳಿ ಶಿಕ್ಷಕರು ವೇದಿಕೆಯಲ್ಲಿ ದ್ದರು.

ಕದಳಿ ವೇದಿಕೆಯಿಂದ ಕದಳಿಶ್ರೀಪ್ರಶೇಸ್ತಿಗೆ ಭಾಜರಾದ ಶಿಕ್ಷಕರಾದ ಅಶೋಕ ಸಾಲಿಮಠ, ಜಿ.ಜಿ ಬರಡೋಲ, ಎಸ್ .ಎಸ್ ಕೊಡ ಹೊನ್ನ,ಎಸ್.ಎನ್ ತೆಲ್ಲೂರ, ಎಮ.ಪಿ ಚಿಮ್ಮಾಗೋಳ, ಯು ಹೆಚ್ಚ್ ಚವ್ಹಾಣ, ಎಸ್.ಎಸ್ ಅಂಕಲಗಿ, ಎ.ಬಿ ದ್ಯಾಮಗೊಂಡ, ಬಿ.ಎಸ್ ಕೋಷ್ಠಿ, ರೇವಣಪ್ಪ ಬಿರಾದಾರ, ರವೀಂದ್ರ ಹೂಗಾರ, ಬಸವರಾಜ ಕಾಂಬಳೆ, ಎಸ್ ಎಸ್ ಬಾಬಳಗಾಂವ್, ಎನ್ ಎ ಬಿರಾದಾರ, ಪಿ.ಎನ್ ಸೋನವಾನೆ, ಜಯಶ್ರೀಕಟಕದೊಂಡ, ಎಸ್.ಟಿ ನಾಯಕ, ನಿಂಗಮ್ಮಾ ದೇಶಮುಖ, ಜಯಶ್ರೀಪತಂಗೆ, ಬಂಗಾರೇವ್ವ ಅವುಟಿ, ಎಲ್.ಎಂ ಐಹೊಳಿ, ಎನ್.ಎಸ್ ಪಾಟೀಲ, ಎಲ್.ಎಂ ಮಠಪತಿ, ಶಾಂತಾ ಪಡಗಣ್ಣ, ದೀನಾ ಕೌಸರ ಸೇರಿದಂತೆ ಅನೇಕರಿಗೆ ಪ್ರಶೇಸ್ತಿ ನೀಡಿ ಗೌರವಿಸಲಾಯಿತು.