Saturday, 14th December 2024

ಸಮಗ್ರ ಅಭಿವೃದ್ಧಿಗೆ ಉತ್ತಮ ನಾಯಕನ ಅವಶ್ಯಕತೆ ಇದೆ

ಹೊಸಕೋಟೆ ತಾಲೂಕಿನ ತಾವರೆಕೆರೆ ಹಾಗೂ ಹೆತ್ತಕ್ಕಿಿ ಗ್ರಾಾಪಂ ವ್ಯಾಾಪ್ತಿಿಯಲ್ಲಿ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ, ಚುನಾವಣಾ ಪ್ರಚಾರ ನಡೆಸಿದರು.

ವಿಶ್ವವಾಣಿ ಸುದ್ದಿಮನೆ ತಾವರೆಕೆರೆ
ಮುಂದಿನ ದಿನಗಳಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಿಯಾಗಬೇಕಾದರೆ ಉತ್ತಮ ನಾಯಕನ ಅವಶ್ಯಕತೆ ಇದೆ. ಆದರೆ ಈ ಹಿಂದೆ ತಾಲೂಕಿನ ಮತದಾರರು ಬಹುಮತ ನೀಡಿ ಜಯಶೀಲರನ್ನಾಾಗಿ ಮಾಡಿದರೂ ಸಹ ಅದನ್ನು ತಿರಸ್ಕರಿಸಿ ರಾಜೀನಾಮೆ ನೀಡಿ ಈಗ ಪುನಃ ಚುನಾವಣೆ ಎದುರಿಸುವಂತಾಗಿದೆ ಎಂದು ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕಿನ ತಾವರೆಕೆರೆ ಹಾಗೂ ಹೆತ್ತಕ್ಕಿಿ ಗ್ರಾಾ.ಪಂ. ವ್ಯಾಾಪ್ತಿಿಯಲ್ಲಿ ನಡೆದ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಿ, ತಾಲೂಕಿನ ಇತಿಹಾಸದಲ್ಲಿಯೇ ಮೊದಲನೇ ಬಾರಿಗೆ ಉಪಚುನಾವಣೆ ನಡೆಯುತ್ತಿಿದೆ. ಈ ಚುನಾವಣೆ ಬರಲು ಕಾರಣ ಅನರ್ಹ ಶಾಸಕ ಎಂ.ಟಿ.ಬಿ. ನಾಗರಾಜ್. ಮುಂದಿನ ದಿನಗಳಲ್ಲಿ ನನ್ನ ಎಲ್ಲ ದರ್ಪದ ಅಧಿಕಾರ ನಡೆಯುವುದಿಲ್ಲ ಎಂದು ಅರಿತ ಅವರು ರಾಜೀನಾಮೆ ನೀಡಿದ ಕಾರಣ 5 ವರ್ಷಕ್ಕೆೆ ಬರಬೇಕಾದ ಚುನಾವಣೆ ಒಂದೂವರೆ ವರ್ಷಕ್ಕೆೆ ಎದುರಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಕಳೆದ 3-4 ವರ್ಷಗಳಿಂದ ಕೆ.ಸಿ.ವ್ಯಾಾಲಿ ಪೈಪ್ ಲೈನ್ ನಮ್ಮ ಭಾಗದಲ್ಲಿ ಹಾದು ಹೋಗಿದ್ದರೂ ಸಹ ಒಂದು ಹನಿ ನೀರು ಕೇಳಿರಲಿಲ್ಲ. ಆದರೆ ಕಳೆದ 3 ತಿಂಗಳಿನಿಂದ ತಾವರೆಕೆರೆ ಪಂಚಾಯಿತಿಯಲ್ಲಿ ವಾಸ್ತವ್ಯ ಹೂಡಿ ನೀರು ಬಿಡಿಸಿ ಜನಗಳ ಮಧ್ಯೆೆ ಜಗಳ ತಂದಿಟ್ಟಂತಹ ಸ್ವಾಾರ್ಥದ ರಾಜಕಾರಣಿ ತಾಲೂಕಿಗೆ ಬೇಕಾ ಎಂದು ಮತದಾರರು ತೀರ್ಮಾನಿಸಬೇಕು. ರಾಷ್ಟ್ರೀಯ ಪಕ್ಷಗಳಾ ಕಾಂಗ್ರೆೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಂದ ಯಾವುದೇ ಸ್ಥಳೀಯ ನಾಯಕನಿಗೆ ಅವಕಾಶ ನೀಡದೆ ಎಲ್ಲ ಹೊರಗಿನವರಿಗೆ ಅವಕಾಶ ಕಲ್ಪಿಿಸಿದ್ದಾಾರೆ. ತಾಲೂಕಿನ ಮಣ್ಣಿಿನ ಮಗನಾದ ನನಗೆ ಈ ಭಾರಿಯ ಚುನಾವಣೆಯಲ್ಲಿ ಅವಕಾಶ ಕಲ್ಪಿಿಸಿಕೊಟ್ಟು ತಾಲೂಕಿನ ಸಮಗ್ರ ಅಭಿವೃದ್ಧಿಿ ಮಾಡಲು ಅವಕಾಶ ಕಲ್ಪಿಿಸಿಕೊಡಬೇಕು. ಎರಡು ಕಾಲು ಲಕ್ಷ ಮತದಾರರನ್ನು ಹೊಂದಿರುವ ಹೊಸಕೋಟೆ ಕ್ಷೇತ್ರಕ್ಕೆೆ ಭೈರತಿ ಹಾಗೂ ಗರುಡಾಚಾರ ಪಾಳ್ಯದಿಂದ ಅಭ್ಯರ್ಥಿಗಳನ್ನು ತಂದು ಚುನಾವಣೆಗೆ ನಿಲ್ಲಿಸುವ ಪ್ರಮೇಯ ಎದುರಾಗಿದೆ. ಯಾವುದೇ ಕಾರಣಕ್ಕೂ ಮಂಡ್ಯ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಅವರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲಿಲ್ಲವೋ ಅದೇ ರೀತಿ ಈ ಭಾರಿ ಹೆಚ್ಚಿಿನ ಕುತೂಹಲ ಮೂಡಿಸಿರುವ ಹೊಸಕೋಟೆ ಕ್ಷೇತ್ರದಲ್ಲೂ ಸಹ ಮತದಾರರು ತಮ್ಮ ಸ್ವಾಾಭಿಮಾನವನ್ನು ಬಿಟ್ಟುಕೊಡದೆ ಈ ಚುನಾವಣೆಯಲ್ಲಿ ಮತದಾನ ಮಾಡಬೇಕು ಎಂದರು.