Tuesday, 15th October 2024

3,23,144 ಮಂದಿಗೆ ಕರೋನಾ ಸೋಂಕು ದೃಢ

ನವದೆಹಲಿ: ದೇಶದಾದ್ಯಂತ ಕರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಕಳೆದ 24 ಗಂಟೆಯಲ್ಲಿ 3,23,144 ಮಂದಿಗೆ ಕರೋನಾ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ. 

ಒಂದೇ ದಿನ 2,771 ಸೋಂಕಿತರು ಮೃತಪಟ್ಟಿದ್ದು, ಕಳೆದ ಸೋಮವಾರ 2,51,827 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ದೇಶದಲ್ಲಿ ಈವೆರೆಗೆ ಒಟ್ಟು 1,76,36,307 ಜನರಿಗೆ ಕರೋನಾ ಸೋಂಕು ತಗಲಿದ್ದು, ಈ ಪೈಕಿ 1,97,894 ಮಂದಿ  ಮೃತಪಟ್ಟಿದ್ದಾರೆ. ಒಟ್ಟು 1,45,56,209 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.