Wednesday, 11th December 2024

ಒಂದೇ ದಿನ 19 ವಿಮಾನಗಳಲ್ಲಿ 3,726 ಭಾರತೀಯರ ಆಗಮನ

ನವದೆಹಲಿ: ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರೆಸಿರುವ ಸಂದರ್ಭದಲ್ಲಿ, ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರುವ ಕೆಲಸದಲ್ಲಿ ವಿದೇಶಾಂಗ ಸಚಿವಾಲಯ ನಿರತವಾಗಿದೆ.

ತನ್ನ ಆಪರೇಷನ್ ಗಂಗಾ ಕಾರ್ಯಾಚರಣೆ ಮುಂದುವರೆಸಿದ್ದು, ಉಕ್ರೇನ್ ನಿಂದ ಗುರುವಾರ 19 ವಿಮಾನಗಳ ಮೂಲಕ 3,726 ಭಾರತೀಯರನ್ನು ಮರಳಿ ಕರೆತರಲಾಗುತ್ತಿದೆ ಎಂಬುದಾಗಿ ವಿಮಾನ ಯಾನ ಸಚಿವರು ಮಾಹಿತಿ ನೀಡಿದ್ದಾರೆ.

ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಉಕ್ರೇನ್ ನ ನೆರೆಯ ದೇಶಗಳಿಂದ 3.726 ಭಾರತೀಯ ರನ್ನು ಭಾರತಕ್ಕೆ ಕರೆತರಲು ಐಎಎಫ್ ಮತ್ತು ಭಾರತೀಯ ವಿಮಾನಯಾನ ಸಂಸ್ಥೆಗಳ 19 ವಿಮಾನಗಳು ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ತಿಳಿಸಿದ್ದಾರೆ.

ಆಪರೇಶನ್ ಗಂಗಾ ಅಡಿಯಲ್ಲಿ, ಐಎಎಫ್, ಏರ್ ಇಂಡಿಯಾ ಮತ್ತು ಇಂಡಿಗೊದ ಎಂಟು ವಿಮಾನಗಳು ರೊಮೇನಿಯನ್ ರಾಜಧಾನಿ ಬುಚಾರೆಸ್ಟ್ ನಿಂದ ಭಾರತಕ್ಕೆ ಗುರುವಾರ ಕಾರ್ಯನಿರ್ವಹಿಸಲಿವೆ ಎಂದು ಅವರು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.