Wednesday, 11th December 2024

ಟ್ರಕ್ ಗೆ ಕಾರು ಡಿಕ್ಕಿ: ಕುಟುಂಬದ ನಾಲ್ವರ ಸಾವು

ಹಿಸಾರ್: ಟ್ರಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಮೃತಪಟ್ಟಿದ್ದಾರೆ.

ನಾರ್ನಾಂಡ್ ಉಪವಿಭಾಗದ ಬಾಸ್ ಗ್ರಾಮದ ಬಳಿ ಜಿಂದ್-ಭಿವಾನಿ ರಸ್ತೆಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

ಕುಟುಂಬವೊಂದು ಕಾರಿನಲ್ಲಿ ಬರುತ್ತಿತ್ತು. ಈ ವೇಳೆ ಎದುರಿನಿಂದ ಬರುತ್ತಿದ್ದ ಟ್ರಕ್‌ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಘರ್ಷಣೆ ಯಿಂದಾಗಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಮೋಟಾರ್‌ ಸೈಕಲ್‌ನಲ್ಲಿದ್ದ ಬಾಸ್‌ನ ನಿವಾಸಿಗಳಾದ ಸುರೇಂದರ್ ಶರ್ಮಾ ಮತ್ತು ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹನ್ಸಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.