ಮುಂಬೈ: ಸತತ ಎರಡು ದಿನಗಳ ಕಾಲ ಕುಸಿತ ಕಂಡಿದ್ದ ಬಾಂಬೆ ಷೇರುಪೇಟೆ ವಹಿವಾಟು ಸೋಮವಾರ ಸಂವೇದಿ ಸೂಚ್ಯಂಕ 534 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟನ್ನು ಮುಕ್ತಾಯಗೊಳಿಸಿದೆ.
ಬಾಂಬೆ ಷೇರು ಸಂವೇದಿ ಸೂಚ್ಯಂಕ 533.74 ಅಂಕಗಳಷ್ಟು ಏರಿಕೆಯಾಗಿದ್ದು, 59,299.32 ಅಂಕಗಳ ವಹಿವಾಟಿನೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಎನ್ ಎಸ್ ಇ ನಿಫ್ಟಿ 159.20 ಅಂಕ ಏರಿಕೆಯಾಗಿದ್ದು, 17,691.25 ಅಂಕಗಳ ಮಟ್ಟ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯೊಂದಿಗೆ ಎನ್ ಟಿಪಿಸಿ, ಬಜಾಜ್ ಫಿನ್ ಸರ್ವ್, ಎಸ್ ಬಿಐ, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರ, ಡಾ.ರೆಡ್ಡೀಸ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭ ಗಳಿಸಿದೆ.
ಜಾಗತಿಕ ಷೇರುಮಾರುಕಟ್ಟೆಯ ಭರ್ಜರಿ ವಹಿವಾಟಿನ ಪರಿಣಾಮ ಸೋಮವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 350 ಅಂಕಗಳಷ್ಟು ಏರಿಕೆಯೊಂದಿಗೆ ವಹಿವಾಟು ನಡೆಸಿತ್ತು.