ಚಿತ್ತಾಪುರ: ಎಸಿಸಿ ಸಿಮೆಂಟ್ ಕಾರ್ಖಾನೆ ಎದುರು ಶವವಿಟ್ಟು ಕಾರ್ಮಿಕರು ಮತ್ತು ಸಂಬಂಧಿಕರು ಪ್ರತಿಭಟನೆ ನಡೆಸಿದರು.
ತಾಲೂಕಿನ ವಾಡಿ ಪಟ್ಟಣದಲ್ಲಿರುವ ಎಸಿಸಿ ಕಾರ್ಖಾನೆಯಲ್ಲಿ ಪಟ್ಟಣದ ಕಾಕಾ ಚೌಕ್ ನಿವಾಸಿ ಎಸ್ ಎಂ ಜಿ ಕಾಂಟಾಕ್ಟ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಗುಂಡಪ್ಪ ಜವಳಗಾ(45) ಕೆಲಸ ಮಾಡುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಕಾರ್ಮಿಕನ ಸಾವಿಗೆ ಎಸಿಸಿ ಕಂಪನಿಯ ಅಧಿಕಾರಿಗಳು ಯಾವುದೇ ರೀತಿಯಿಂದ ಸ್ಪಂದನೆ ನೀಡುತ್ತಿಲ್ಲ ಎಂದು ಕಾರ್ಮಿಕರು ಮತ್ತು ಮೃತ ಸಂಬಂಧಿಕರು ಪ್ರತಿಭಟನೆ ನಡೆಸಿದರು.
ನಿನ್ನೆ ಕಾರ್ಖಾನೆಗೆ ಕೆಲಸಕ್ಕೆ ಹೋದಾಗ ಗುತ್ತಿಗೆದಾರ ಸೋಮಶೇಖರ್ ತಮ್ಮ ಸ್ವಂತ ಮನೆ ಕೆಲಸಕ್ಕೆ ಕರೆದುಕೊಂಡು ಹೋದಾಗ ಘಟನೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು ಕೆಲಸ ಮಾಡುವ ವೇಳೆ ಹೃದಯಾಘಾತದಿಂದ ಮೃತಪಟ್ಟ ಕಾರ್ಮಿಕ ಗುಂಡಪ್ಪ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಬೇಕು ಮತ್ತು ಮೃತ ವ್ಯಕ್ತಿಯ ಮಗನಿಗೆ ಖಾಯಂ ನೌಕರಿ ನೀಡ ಬೇಕು ಎಂದು ಒತ್ತಾಯಿಸಿ ದಲಿತ ಸಂಘಟನೆಯವರು, ಕಾರ್ಮಿಕರು ಮತ್ತು ಸಂಬಂಧಿಕರು ಕಂಪನಿ ಗೇಟ್ ಎದುರು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಚಿತ್ತಾಪುರ ಸಿಪಿಐ ಪ್ರಕಾಶ್ ಯಾತನೂರ ಪೋಲಿಸ್ ಠಾಣೆಯಲ್ಲಿ ಕರೆಯಿಸಿ ಪ್ರತಿಭಟನಾಕಾರರೊಂದಿಗೆ ಮಾತನಾಡಿ ಆಗಿರುವ ಘಟನೆಯ ಬಗ್ಗೆ ಮೃತನ ಕುಟುಂಬ ಬೇಡಿಕೆಯನ್ನು ಆಲಿಸಿ ಕಂಪನಿಯವರೊಂದಿಗೆ ಮಾತನಾಡಿ ಪರಿಹಾರ ನೀಡಿ ರುವ ನಿಟ್ಟಿನಲ್ಲಿ ಕಾರ್ಯ ಮಾಡಲಾಗುವುದು ಎಂದು ಹೇಳಿದರು.