Friday, 13th December 2024

ಅಫ್ತಾಬ್‌ ಅಮಿನ್‌ ಪೂನಾವಾಲಗೆ ನಾಳೆ ಮಂಪರು ಪರೀಕ್ಷೆ

ವದೆಹಲಿ: ಶ್ರದ್ಧಾ ವಾಲ್ಕರ್‌ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಫ್ತಾಬ್‌ ಅಮಿನ್‌ ಪೂನಾವಾಲನನ್ನು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಆಸ್ಪತ್ರೆಯಲ್ಲಿ ಸೋಮವಾರ ಮಂಪರು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ದೆಹಲಿ ನ್ಯಾಯಾಲಯವು ಮಂಗಳವಾರದವರೆಗೆ ಆರೋಪಿ ಅಫ್ತಾಬ್‌ನನ್ನು ಪೊಲೀಸರ ವಶಕ್ಕೆ ನೀಡಿದೆ. ಇದರ ಒಳಗೆ ಮಂಪರು ಪರೀಕ್ಷೆ ಕೈಗೊಳ್ಳಲು ಪೊಲೀಸರು ನಿರ್ಧರಿಸಿ ದ್ದಾರೆ.

ಗುರುಗ್ರಾಮದಿಂದ ಮೂರು ಎಲುಬುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಶ್ರದ್ಧಾಳದ್ದು ಎನ್ನಲಾಗಿದೆ. ಜತೆಗೆ ಮೃತದೇಹವನ್ನು 35 ತುಂಡುಗಳನ್ನಾಗಿಸಲು ಆರೋಪಿ ಬಳಸಿದ್ದಾನೆ ಎನ್ನಲಾದ ಚಾಕು ಮತ್ತು ಇತರೆ ಹರಿತವಾದ ವಸ್ತುಗಳನ್ನು ಅಫ್ತಾಬ್‌ ಪ್ಲಾಟ್‌ನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅ.18ರ ಬೆಳಗಿನ ಜಾವ ಅಫ್ತಾಬ್‌ ತನ್ನ ಮನೆಯ ಮಾರ್ಗದಲ್ಲಿ ಬ್ಯಾಗ್‌ ಸಮೇತ ನಡೆದು ಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಒಂದರಲ್ಲಿ ಸೆರೆಯಾಗಿದೆ.

ಶ್ರದ್ಧಾ ಮೃತದೇಹದ ಭಾಗಗಳನ್ನು ಕಾಡಿಗೆ ಬಿಸಾಕಲು ಆತ ಬ್ಯಾಗ್‌ ಸಮೇತ ಹೋಗುತ್ತಿದ್ದಿರಬಹುದು ಎಂದು ಶಂಕಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಶ್ರದ್ಧಾ ರೀತಿ ಸಮಸ್ಯೆಗಳನ್ನು ಎದುರಿಸುತ್ತಿರುವ ಯುವತಿಯರ ನೆರವಿಗಾಗಿ ರಾಜ್ಯ ಮಹಿಳಾ ಆಯೋಗದಡಿಯಲ್ಲಿ ಸ್ಕ್ವಾಡ್‌ ರಚಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.