Friday, 13th December 2024

ಎಎನ್‌ಐನ ಟ್ವಿಟರ್ ಖಾತೆ ಅಮಾನತು

ವದೆಹಲಿ : ಟ್ವಿಟರ್ ನಿಯಮಗಳ ಉಲ್ಲಂಘಿಸಿದ ಭಾರತದ ಸುದ್ದಿ ಸಂಸ್ಥೆ ಎಎನ್‌ಐನ ಟ್ವಿಟರ್ ಅಮಾನತುಗೊಳಿಸಲಾಗಿದೆ.

ಎಎನ್‌ಐ ಸಂಪಾದಕಿ ಸ್ಮಿತಾ ಪ್ರಕಾಶ್ ತಮ್ಮ ಖಾತೆಯ ಮೂಲಕ ಅನುಯಾಯಿಗಳಿಗೆ ವಿಷಯ ತಿಳಿಸಿದ್ದಾರೆ.

ಎಎನ್‌ಐ ಸುಮಾರು 7.6 ಮಿಲಿಯನ್ ಅನುಯಾಯಿಗಳನ್ನ ಹೊಂದಿದೆ. ಈ ಹಿಂದೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಅಧಿಕೃತ ಸಂಸ್ಥೆಯಾಗಿ ಗುರುತಿಸಲ್ಪಟ್ಟಿತ್ತು.

ಟ್ವಿಟರ್’ನ ಈ ಕ್ರಮವು ಎಎನ್‌ಐ ಮತ್ತು ಅದರ ಅನುಯಾಯಿಗಳಿಗೆ ಹತಾಶೆ ಮತ್ತು ಗೊಂದಲವನ್ನ ಉಂಟುಮಾಡಿದೆ. ಭಾರತದ ಅತಿದೊಡ್ಡ ಸುದ್ದಿ ಸಂಸ್ಥೆಯನ್ನ ಟ್ವಿಟರ್ ಲಾಕ್ ಮಾಡಿದೆ ಎಂದು ಸ್ಮಿತಾ ಪ್ರಕಾಶ್ ಟ್ವೀಟ್’ನಲ್ಲಿ ತಮ್ಮ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ.