Wednesday, 11th December 2024

ತಾಜಾ ಹಿಟ್ಟು ಪೂರೈಕೆಗೆ ಮುಂದಾದ Aashirvaad ಅಟ್ಟಾ

ಬೆಂಗಳೂರು ಗ್ರಾಹಕರು www.aashirvaadchakki.com ವೆಬ್‌ಸೈಟ್‌ನಲ್ಲಿ ತಮಗೆ ಬೇಕಾದ ಹಿಟ್ಟನ್ನು ಆರ್ಡರ್‌ ಮಾಡಿಕೊಳ್ಳಬಹುದು.

ಬೆಂಗಳೂರು: ಭಾರತದ ನಂಬರ್ 1 ಪ್ಯಾಕೇಜ್ಡ್ ಅಟ್ಟಾ ಬ್ರ್ಯಾಂಡ್ ಆಗಿರುವ Aashirvaad ಅಟ್ಟಾ, ಇಂದು ಬೆಂಗಳೂರಿನಲ್ಲಿ ತನ್ನ ಇತ್ತೀಚಿನ ಡೈರೆಕ್ಟ್-ಟು-ಕನ್ಸೂಮರ್ (ಡಿ2ಸಿ) ಕೊಡುಗೆಯ ‘ನಮ್ಮ ಚಕ್ಕಿ’ಯನ್ನು ಬಿಡುಗಡೆ ಮಾಡಿದೆ.

ನಮ್ಮ ಚಕ್ಕಿಯನ್ನು ಅನನ್ಯವಾಗಿಸುವ ವಿಚಾರವೇನು?
• ಗ್ರಾಹಕರು ಆರ್ಡರ್ ಮಾಡಿದ ನಂತರವೇ ವಿಶೇಷವಾಗಿ ಹಿಟ್ಟನ್ನು ಪುಡಿಮಾಡಲಾಗುತ್ತದೆ
• 12 ವಿಭಿನ್ನ ಹಿಟ್ಟುಗಳು ನವಯುಗದ ಗ್ರಾಹಕರ ಅವಶ್ಯಕತೆಗಳಿಗೆ ಅನುಗುಣವಾಗಿ ಲಭ್ಯ ಇವೆ. ಕಾಳು ಆಧಾರಿತ ಹಿಟ್ಟುಗಳು ಅಂದರೆ 100% ಜೋಳ, 100% ರಾಗಿ ಹಿಟ್ಟು, ರಾಗಿ ಮತ್ತು ಕ್ವಿನೋವಾ ಸೇರಿದ ಅಟ್ಟಾ, ಬಲವರ್ಧಿತ ಹಿಟ್ಟು (ಕಬ್ಬಿಣ, ಫೋಲಿಕ್ ಆಮ್ಲ ಮತ್ತು ವಿಟಮಿನ್ ಬಿ 12 ನೊಂದಿಗೆ ಬಲವರ್ಧಿತ), ಹೆಚ್ಚಿನ ಪ್ರೋಟೀನ್ ಮತ್ತು ಏಕ ಧಾನ್ಯದ ಹಿಟ್ಟುಗಳೊಂದಿಗೆ ಅಟ್ಟಾ, 100% ಖಾಪ್ಲಿ ಅಟ್ಟಾ ಮತ್ತು 100 % ಎಂಪಿ ಲೋಕವಾನ್ ಅಟ್ಟಾ ಮತ್ತು 100% ಚನಾ ದಾಲ್ ಬೆಸನ್ ಮುಂತಾದವು ಬಿಡುಗಡೆ ಮಾಡಲಾಗುತ್ತಿರುವ ಕೆಲವು ವಿಶೇಷ ವೇರಿಯೆಂಟ್‍ಗಳಲ್ಲಿ ಸೇರಿವೆ.
• ಪೇಪರ್ ಆಧಾರಿತ ಮತ್ತು ವ್ಯಕ್ತಿಗತ ಪ್ಯಾಕೇಜಿಂಗ್ (ಪ್ಯಾಕ್‌ನಲ್ಲಿ ಗ್ರಾಹಕರ ಹೆಸರನ್ನು ಬರೆದು) ಕೂಡ ಇರಲಿದೆ.

ಈ ಕುರಿತು ಮಾತನಾಡಿದ ITC ಕಂಪನಿಯ SBU ಸ್ಟೇಪಲ್ಸ್, ಸ್ನ್ಯಾಕ್ಸ್ ಮತ್ತು ಮೀಲ್ಸ್‌ನ ಗಣೇಶ್ ಸುಂದರರಾಮನ್, ಸಾಮಾನ್ಯವಾಗಿ ಜನರಿಗೆ ಪ್ರತಿ ಪದಾರ್ಥಗಳಲ್ಲೂ ತಾಜಾ ಉತ್ಪನ್ನ ಪಡೆಯಬೇಕೆಂಬ ತವಕವಿರುತ್ತದೆ. ಇಂತವರಿಗಾಗಿಯೇ ಆಶೀರ್ವಾದ್‌ ಕಂಪನಿಯು ಜನರ ಬೇಡಿಕೆ ಮೇರೆಗೆ ತಾಜಾ ಹಿಟ್ಟನ್ನು ತಯಾರಿಸಲು ಮುಂದಾಗಿದೆ. ಅಂದರೆ, ಈವರೆಗೂ ಗೋಧಿ, ರಾಗಿ ಹಿಟ್ಟುಗಳನ್ನು ತಯಾರಿಸಿ ಅದರ ಪ್ಯಾಕೇಟ್‌ಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತಿತ್ತು. ಇದೀಗ, ಆಶೀರ್ವಾದ್‌ ಆನ್‌ಲೈನ್‌ನಲ್ಲಿ ಜನರು ತಮಗೆ ಬೇಕಾದ ಹಿಟ್ಟನ್ನು ತಯಾರಿಸಿಕೊಡುವಂತೆ ಆರ್ಡರ್‌ ಮಾಡಿದ ಬಳಿಕವೇ, ೪೮ ಗಂಟೆಗಳ ಅವಧಿಯಲ್ಲಿ ಮಷಿನ್‌ಗೆ ಹಾಕಿಸಿ, ಅದನ್ನು ಶುದ್ಧಗೊಳಿಸಿ ತಾಜಾ ಹಿಟ್ಟನ್ನು ಪೂರೈಸುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಿದ್ಧ ಹಿಟ್ಟುಗಳು ಲಭ್ಯವಿದೆ. ಆದರೆ, ಬಹಳಷ್ಟು ಜನರಿಗೆ ತಾಜಾ ಹಿಟ್ಟನ್ನು ಖರೀದಿಸಬೇಕೆಂಬ ಆಸೆ ಇರುತ್ತದೆ. ಇದು ಆರೋಗ್ಯಕ್ಕೂ ಹೆಚ್ಚು ಒಳ್ಳೆಯದು. ಹಿಂದಿನ ಕಾಲದಲ್ಲಿ ಮನೆಯಲ್ಲಿಯೇ ಗೋದಿ, ಅಕ್ಕಿ, ರಾಗಿ ಇತರೆ ಧಾನ್ಯಗಳ ಹಿಟ್ಟನ್ನು ಮಷಿನ್‌ಗೆ ಹಾಕಿಸಿಕೊಂಡು ಬರುತ್ತಿದ್ದರು. ಇದು ಹೆಚ್ಚು ಆರೋಗ್ಯಕರ. ಇದೇ ಮಾದರಿಯಲ್ಲಿ ಜನರಿಗೂ ತಾಜಾ ಹಿಟ್ಟು ಪೂರೈಸುವುದು ನಮ್ಮ ಉದ್ದೇಶ.. ಇದೇ ಮೊದಲ ಬಾರಿಗೆ ಈ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಪ್ರಸ್ತುತ ನಮ್ಮ ಚಕ್ಕಿ ಹೆಸರಿನ ಈ ತಾಜಾ ಹಿಟ್ಟು ಪೂರೈಸುವ ಕ್ರಮದಲ್ಲಿ ಗೋದಿ, ಅಕ್ಕಿ, ರಾಗಿ, ಚೆನ್ನಾದಾಲ್‌ ಸೇರಿದಂತೆ 12 ಬಗೆಯ ಹಿಟ್ಟುಗಳನ್ನು ಪೂರೈಸಲಿದೆ.

ಗ್ರಾಹಕರು www.aashirvaadchakki.com ವೆಬ್‌ಸೈಟ್‌ನಲ್ಲಿ ತಮಗೆ ಬೇಕಾದ ಹಿಟ್ಟನ್ನು ಆರ್ಡರ್‌ ಮಾಡಿಕೊಳ್ಳಬಹುದು. ನಿಮ್ಮ ಆರ್ಡರ್‌ ಪಡೆದ ಬಳಿಕ ಆ ಧಾನ್ಯವನ್ನು ಮಷಿನ್‌ಗೆ ಹಾಕಿಸಿ ಹಿಟ್ಟು ಮಾಡಿಸಿ, ಪೇಪರ್‌ ಪ್ಯಾಕೇಟ್‌ ಮೇಲೆ ನಿಮ್ಮ ಹೆಸರನ್ನು ಮುದ್ರಿಸಿ ಪಾರ್ಸಲ್‌ ಮಾಡಲಾಗುವುದು. ಇದು ಕೇವಲ ೪೮ ಗಂಟೆಗಳ ಅವಧಿಯ ಒಳಗಾಗಿ. ಈ ರೀತಿಯ ಹಿಟ್ಟಿನ ದರವೂ ಕೂಡ ಕೈಗೆಟುಕುವ ರೀತಿಯಲ್ಲಿಯೇ ಇದೆ ಎಂದು ವಿವರಣೆ ನೀಡಿದರು.