Friday, 13th December 2024

ಬಂಗಾಳಿ ಖ್ಯಾತ ನಟ ಸೌಮಿತ್ರ ಚಟರ್ಜಿ ಇನ್ನಿಲ್ಲ

ಕೊಲ್ಕತ್ತಾ: ಬಂಗಾಳಿ ಖ್ಯಾತ ನಟ ಸೌಮಿತ್ರ ಚಟರ್ಜಿ ಕೊಲ್ಕತ್ತಾ ಆಸ್ಪತ್ರೆಯಲ್ಲಿ ಮಧ್ಯಾಹ್ನ ನಿಧನರಾದರು.

ಕೊರೋನಾ ಸೇರಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಕೊನೆಯುಸಿ ರೆಳೆದಿದ್ದಾರೆ.

ಕೋವಿಡ್-19 ಪಾಸಿಟಿವ್ ಪರೀಕ್ಷೆ ವರದಿ ಬಂದ ನಂತರ ಅ.6ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ತಿಂಗಳ ನಂತರವೂ ಚೇತರಿಸಿಕೊಳ್ಳದ ಭಾನುವಾರ ನಿಧನರಾಗಿದ್ದಾರೆ.  ಸೌಮಿತ್ರ ಚಟರ್ಜಿ ಪತ್ನಿ, ಮಗ, ಮಗಳನ್ನು ಅಗಲಿದ್ದಾರೆ.

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಚಟರ್ಜಿಯವರು ಭಾಜನರಾಗಿ ದ್ದಾರೆ. 2018ರಲ್ಲಿ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಲೀಜನ್ ಆಫ್ ಆನರ್ ಕೂಡ ಲಭಿಸಿತ್ತು.