Wednesday, 11th December 2024

ಬಿಹಾರಕ್ಕೆ ಒಬ್ಬರು ಸಿಎಂ, ಇಬ್ಬರು ಡಿಸಿಎಂ ?

ಪಾಟ್ನಾ: ಬಿಹಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಸುಶೀಲ್ ಕುಮಾರ್ ಮೋದಿ ಮುಂದುವರೆಯಲಿದ್ದಾರೆ ಎನ್ನಲಾಗಿತ್ತು. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಉಪ ಮುಖ್ಯಮಂತ್ರಿಗಳಾಗಿ ತಾರ್ ಕಿಶೋರ್ ಪ್ರಸಾದ್, ರೇಣು ದೇವಿ ಅವರನ್ನು ಆಯ್ಕೆ ಮಾಡಲಾಗಿದೆಯೆನ್ನಲಾಗಿದೆ. ಸುಶೀಲ್ ಕುಮಾರ್ ಮೋದಿಗೆ ಹುದ್ದೆ ಕೈತಪ್ಪಿದೆ.

ಬಿಹಾರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಶಾಸಕಾಂಗ ನಾಯಕನ ಆಯ್ಕೆಗಾಗಿ ನಡೆದ ಎನ್.ಡಿ.ಎ. ಶಾಸಕರ ಸಭೆಯಲ್ಲಿ ನಿತೀಶ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಬಾರಿ ಸುಶೀಲ್ ಕುಮಾರ್ ಮೋದಿಗೆ ಉಪಮುಖ್ಯಮಂತ್ರಿ ಸ್ಥಾನ ಕೈತಪ್ಪುವುದು ಬಹುತೇಕ ಖಚಿತವಾಗು ತ್ತಿದ್ದಂತೆ ಅವರು ಟ್ವೀಟ್ ಮಾಡಿದ್ದು, ಬಿಜೆಪಿ ಹಾಗೂ ಸಂಘ ಪರಿವಾರ ನನಗೆ ಬಹಳಷ್ಟು ಕೊಟ್ಟಿದೆ. 40 ವರ್ಷದ ರಾಜಕೀಯದಲ್ಲಿ ಬಿಜೆಪಿ ನನಗೆ ಬಹಳ ಕೊಟ್ಟಿದೆ. ಕಾರ್ಯಕರ್ತ ಎಂಬ ಹುದ್ದೆಯನ್ನು ಯಾರೂ ಕಸಿದುಕೊಳ್ಳಲಾಗದು ಎಂದು ತಿಳಿಸಿದ್ದಾರೆ.

ಪಕ್ಷ ನೀಡುವ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ ಎಂದು ಬಿಹಾರದ ಬಿಜೆಪಿ ಹಿರಿಯ ನಾಯಕರಾಗಿರುವ ಮೋದಿ ಹೇಳಿದ್ದಾರೆ.