ಇಂಡಿ: ಮತಕ್ಷೇತ್ರದ ಜನರ ಬಹುದಿನಗಳ ಬೇಡಿಕೆಯಾಗಿದ್ದ ತಿಡಗುಂದಿ ಶಾಖಾ ಕಾಲುವೆಯ ಮುಖಾಂತರ ಹಾಗೂ ತೆರೆದ ಕಾಲುವೆಯ ಮುಖಾಂತರ ೪೦ನೇ ಕಿ.ಮೀ ದಿಂದ ೫೬ ಕಿ.ಮೀ ವರೆಗೆ ೫೬ ಕಿ.ಮೀ ದಿಂದ ೬೫ ಕಿ.ಮೀವರೆಗೆ ತಡವಲಗಾ,ಹಂಜಗಿ ಅಥರ್ಗಾ, ನಿಂಬಾಳ ಕೆರೆಗಳಿಗೆ ಪೈಪಲೈನ್ ಮೂಲಕ ನೀರು ಹರಿಸಿದಕ್ಕೆ ಹಾಗೂ ಶ್ರೀರೇವಣಸಿದ್ದ ಏತನೀರಾವರಿ ಅನುಷ್ಠಾನ ಗೋಳಿಸಿ ಹಣ ಬಿಡುಗಡೆ ಮಾಡಿದ ಮುಖ್ಯ ಮಂತ್ರಿ ಬಸವರಾಜ ಬೋಮ್ಮಾಯಿ ಹಾಗೂ ನೀರಾವರಿ ಸಚಿವ ಗೋವಿಂದ ಕಾರಜೋಳ ಮತ್ತು ಸಂಸದ ರಮೇಶ ಜಿಗಜಿಣಗಿಯವರಿಗೆ ಭಾರತೀಯ ಜನತಾ ಪಾರ್ಟಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕೀವುಡೆ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ,ಬಿಜೆಪಿ ರಾಜ್ಯ ಕರ‍್ಯಕಾರಣಿ ಸದಸ್ಯ ಶೀಲವಂತ ಉಮರಾಣಿ ಮತಕ್ಷೇತ್ರದ ರೈತರು ,ಜನರ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಜಂಟಿಯಾಗಿ ಪ್ರಕಟಣೆಗೆ ತಿಳಿಸಿದ್ದಾರೆ.