Thursday, 25th April 2024

ಬಾಲಿವುಡ್’ನಿಂದ ನಿವೃತ್ತಿಯತ್ತ ಸನಾ ಖಾನ್ ಹೆಜ್ಜೆ

ಮುಂಬೈ: ಆಮೀರ್‌ ಖಾನ್‌ ನಟನೆಯ ದಂಗಲ್‌ನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಜೈರಾ ವಾಸೀಂ ಅವರು ೨೦೧೯ರಲ್ಲಿ ನಟನಾ ವೃತ್ತಿಯಿಂದ ಹೊರ ಬರುವುದಾಗಿ ತಿಳಿಸಿದ್ದರು. ಈಗ ಸನಾ ಖಾನ್ ಸರದಿ.

ಸಲ್ಮಾನ್ ಖಾನ್‌ ಅವರ ಜೈಹೋ ಚಿತ್ರದಲ್ಲಿ ನಟಿಸಿ, ಬಿಗ್‌ ಬಾಸ್‌ ಆರನೇ ಸೀಸನ್‌ ನಲ್ಲಿ ಸ್ಪರ್ಧಿಸಿದ್ದ ಸನಾ ಖಾನ್‌ ಟ್ವಿಟರ್‌ನಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಅಲ್ಲಾ ಹೆಸರಿನಲ್ಲಿ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.

ಮನೋರಂಜನೆಯಲ್ಲಿ ಇಲ್ಲಿಯವರೆಗೂ ಮುಳುಗಿದ್ದೆ. ಇದು ತನಗೆ ಪ್ರಸಿದ್ದಿ, ಹೆಸರು ಹಾಗೂ ಸಂಪತ್ತು ನೀಡಿದೆ. ಆದರೆ, ಈ ಜಗತ್ತಿಗೆ ಬರುವ ಉದ್ದೇಶ ಇದೊಂದೇನಾ ಎಂದು ಕೂಡ ಪ್ರಶ್ನಿಸಿ ಕೊಂಡಿದ್ದಾರಂತೆ.

Leave a Reply

Your email address will not be published. Required fields are marked *

error: Content is protected !!