Tuesday, 5th November 2024

ಕಿರುತೆರೆ ನಟ ಚಂದನ್’ಗೆ ಶಾಶ್ವತ ಬಹಿಷ್ಕಾರ

ಹೈದರಾಬಾದ್: ದುರ್ವರ್ತನೆ ಆರೋಪದ ಹಿನ್ನೆಲೆಯಲ್ಲಿ ಕಿರುತೆರೆ ನಟ ಚಂದನ್ ವಿರುದ್ಧ ತೆಲುಗು ಟಿವಿ ಫೆಡರೇಶನ್ ವತಿಯಿಂದ ಶಾಶ್ವತ ಬಹಿಷ್ಕಾರ ಹಾಕಲಾಗಿದೆ.

ತೆಲುಗು ಟೆಲಿವಿಜನ್, ಡಿಜಿಟಲ್ ಮೀಡಿಯಾದಿಂದ ಚಂದನ್ ಗೆ ಬಹಿಷ್ಕಾರ ಹಾಕಲಾಗಿದೆ. ನಟ ಚಂದನ್ ಅವರನ್ನು ಬಹಿಷ್ಕರಿಸಲು ತೆಲುಗು ಟಿವಿ ಫೆಡರೇಶನ್ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ನಿರ್ಮಾ ಪಕರ ಮಂಡಳಿಗೆ ಮನವಿ ಸಲ್ಲಿಸಲಾಗಿದೆ.

ಹೈದರಾಬಾದ್ ನಲ್ಲಿ ಧಾರಾವಾಹಿ ಚಿತ್ರೀಕರಣದ ವೇಳೆ ನಟ ಚಂದನ್ ಹಲ್ಲೆ ಮಾಡಿರುವುದಾಗಿ ಆರೋಪಿಸಿ ತಂತ್ರಜ್ಞರು ಕಪಾಳ ಮೋಕ್ಷ ಮಾಡಿ ಗಲಾಟೆ ನಡೆಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಚಂದನ್, ವಿನಾಕಾರಣ ಘಟನೆ ನಡೆದಿದೆ. ಧಾರಾವಾಹಿಯಲ್ಲಿ ಮುಂದುವರೆಯದಿರಲು ತೀರ್ಮಾನಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದರು.

ಮಂಗಳವಾರ ನಡೆದ ಬೆಳವಣಿಗೆಯಲ್ಲಿ ಚಂದನ್ ಅವರನ್ನು ಬಹಿಷ್ಕರಿಸಲು ತೆಲುಗು ಟಿವಿ ಫೆಡರೇಷನ್ ನಿರ್ಧಾರ ಕೈಗೊಂಡಿದೆ.