Friday, 13th December 2024

ಬ್ರಹ್ಮೋತ್ಸವಂ ಉತ್ಸವ ವೇಳೆ ಕಾಲ್ತುಳಿತ: ಇಬ್ಬರ ಸಾವು

ಮಧುರೈ: ತಮಿಳುನಾಡು ರಾಜ್ಯದ ಮಧುರೈನಲ್ಲಿ ಶನಿವಾರ ಚಿತ್ತಿರೈ ಬ್ರಹ್ಮೋತ್ಸವಂ ಉತ್ಸವ ವೇಳೆ ಕಾಲ್ತುಳಿತ ಸಂಭವಿಸಿದೆ.

ಘಟನೆಯಲ್ಲಿ ಕನಿಷ್ಠ ಇಬ್ಬರು  ಮೃತಪಟ್ಟು, ಎಂಟು ಮಂದಿ ಗಾಯಗೊಂಡಿದ್ದಾರೆ. ವೈಗೈ ನದಿಗೆ ಕಲ್ಲಜಗರ್ ದೇವರ ಪ್ರವೇಶ ವೀಕ್ಷಿಸಲು ಸಾವಿರಾರು ಭಕ್ತರು ನೆರೆದಿದ್ದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ. ಗಾಯಾಳು ಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ರಾಜಾಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘಟನೆಗೆ ಸಂತಾಪ ಸೂಚಿಸಿದ್ದು, ಮೃತರ ಕುಟಂಬಕ್ಕೆ ತಲಾ 5 ಲಕ್ಷ ರೂಪಾಯಿ ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ಎರಡು ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾಗಿರುವವರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಶ್ರೀ ಮೀನಾಕ್ಷಿ-ಸುಂದರೇಶ್ವರ ದೇವಸ್ಥಾನದಲ್ಲಿ 12 ದಿನಗಳ ವಾರ್ಷಿಕ ಚಿತ್ತಿರೈ ಬ್ರಹ್ಮೋತ್ಸವಂ ಉತ್ಸವ ನಡೆಯು ತ್ತಿದೆ. ಇದರ ಅಂಗವಾಗಿ ವೈಗೈ ನದಿಗೆ ಕಲ್ಲಜಗರ್ ದೇವರ ಪ್ರವೇಶವನ್ನು ವೀಕ್ಷಿಸಲು ತಮಿಳುನಾಡಿದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.