ಅಭಿವ್ಯಕ್ತಿ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
sachidanandashettyc@gmail.com
1978ರಲ್ಲಿ ನ್ಯೂಯಾರ್ಕ್, ನ್ಯೂಜೆರ್ಸಿ, ಕಾಂನೆಕ್ಟೆಕಟ್ ಗಳಲ್ಲಿ ಭಾರತೀಯ ಸಂಘಗಳ ಒಕ್ಕೂಟ ಸ್ಥಾಪನೆಯಾಯಿತು. 1980 ರಲ್ಲಿ ಭಾರತೀಯ ಸಮಾವೇಶವು ನ್ಯೂಯಾರ್ಕ್‌ನಲ್ಲಿ ನಡೆಯಿತು. ಇತ್ತೀಚಿನ ಮೂರು ನಾಲ್ಕು ದಶಕಗಳಲ್ಲಿ ರಾಜಕೀಯದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಮೆರಿಕಾದಲ್ಲಿ ಭಾರತೀಯ ಸಮುದಾಯ 5 ಮಿಲಿಯನ್ ತಲುಪಿದೆ.
ಗ್ಲೊಬಲ್ ವೆಲ್ತ್ ಮೈಗ್ರೇಶನ್ ರಿವಿವ್ಯೂ ವರದಿಯಂತೆ 2020ನೇ ವರ್ಷದಲ್ಲಿಯೇ 5000 ಕೋಟ್ಯಧಿಪತಿಗಳು (ದೇಶದ ಶ್ರೀಮಂತರಲ್ಲಿ ಶೇ.2ರಷ್ಟು ಜನ) ದೇಶದ ಪೌರತ್ವ ತೊರೆದು ಪರದೇಶಗಳಿಗೆ ವಲಸೆ ಹೋಗಿದ್ದಾರಂತೆ. ಉಳಿದಂತೆ ದೇಶದ 177 ಬಿಲಿಯನರ್‌ಗಳು ಹಾಗೂ 6884 ಅತೀ ಶ್ರೀಮಂತರು ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳಿಗೆ ಅಮೆರಿಕ ಮತ್ತು ಇತರೆ ಐರೋಪ್ಯ ದೇಶಗಳಲ್ಲಿ, ಪೌರತ್ವ ಕೊಡಿಸುವ ದಾವಂತದಲ್ಲಿದ್ದಾರಂತೆ.
ಅದಲ್ಲದೆ ಐಐಟಿ, ಐಐಎಂ ಹಾಗೂ ಏಮ್ಸ್‌ನಂತಹ ಪ್ರತಿಷ್ಠಿತ ಕಾಲೇಜುಗಳಲ್ಲಿ ಇಂಜಿನಿ ಯರಿಂಗ್, ಮೆನೇಜ್‌ಮೆಂಟ್ ಹಾಗೂ ವೈದ್ಯಕೀಯ ಶಿಕ್ಷಣ ಪಡೆದವರಲ್ಲಿ ಶೇ.50ಕ್ಕೂ ಹೆಚ್ಚಿನ ಪದವೀಧರರು, ಸ್ನಾತಕೋತ್ತರ ಪದವೀಧರರು ದೇಶ ತೊರೆದು ವಲಸೆ ಹೋಗು ತ್ತಾರೆ. ಇದು ಭಾರತಕ್ಕೆ ಆಘಾತವೆನಿಸುವ ಸಂಗತಿಯೆನಿಸುವುದಿಲ್ಲವೇ? ವಲಸೆ ಹೋದ ವರ ಜೊತೆಯಲ್ಲಿ ದೇಶದ ಸಂಪತ್ತು, ಬುದ್ಧಿಮತ್ತೆ, ಉನ್ನತ ಶಿಕ್ಷಣ ಹಾಗೂ ಉದ್ಯಮ ಶೀಲತೆಗಳೂ ವಲಸೆ ಹೋಗುತ್ತವೆ ಅಲ್ಲವೇನು? ಮೇಲ್ವರ್ಗದವರ ಈ ತೆರನಾದ ವಲಸೆಗೆ ಕಾರಣ ವೇನು? ಒಂದು ಪ್ರತಿಷ್ಠಿತ ಸಂಸ್ಥೆಯ ವರದಿಯ ಪ್ರಕಾರ 2014ರಿಂದ 2019ರವರೆಗೆ ಸರಿಸುಮಾರು 29 ಸಾವಿರ ಭಾರತೀ ಯರು ದೇಶ ತೊರೆದು ಪರದೇಶಕ್ಕೆ ವಲಸೆ ಹೋಗಿದ್ದಾರೆ.
2022ರಲ್ಲಿ 8000 ಕೋಟ್ಯಧೀಶರು ಭಾರತವನ್ನು ತೊರೆಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಅಸಹಿಷ್ಣು, ಕೋಮು ವಾದಿ ಸಮಾಜ ಹಾಗೂ ಮಿತಿ ಮೀರಿದ ಜಾತೀಯತೆಯಲ್ಲಿ ಅರ್ಹತೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೇ? ಎಲ್ಲೆ ಮೀರಿದ ಭೃಷ್ಟಾಚಾರ ಹಾಗೂ ಸರಕಾರಗಳ ಸಂಪೂರ್ಣ ವೈಫಲ್ಯದಲ್ಲಿ ಜನಜೀವನ ಮಟ್ಟ ಕುಸಿದು ಹೋಗಿದೆಯೇ? ಕಾನೂನು ವ್ಯವಸ್ಥೆ ಹಾಗೂ ನ್ಯಾಯಾಲಯಗಳ ಕಾರ್ಯಾಲಯಗಳಲ್ಲಿ ಅದಕ್ಷತೆ, ವ್ಯಾಪಾರ, ಉದ್ದಿಮೆ ಮಾಡಲಾಗದ ಸ್ಥಿತಿ ಉಂಟಾಗಿದೆಯೇ? ಈ ಕಾರಣಗಳೇ ಪಲಾಯನವಾದಕ್ಕೆ ದಾರಿ ಮಾಡಿ ಕೊಡುತ್ತಿವೆಯೇ? ಕಾರಣಗಳೇನೇ ಇದ್ದರೂ ಪಲಾಯನ ವಾದವು ಮುಂದೊಂದು ದಿನ ದೇಶದ ಅಭಿವೃದ್ಧಿಗೆ ಮಾರಕವಾಗದೇ ಇರಲಾರದು.
ದೇಶ ಬಿಡುವುದಕ್ಕೆ ಹಲವು ಆಯಾಮಗಳಿಂದ ಕಾರಣ ಕೊಡಬಹುದು, ಆದರೆ ನಮ್ಮ ದೇಶದ ಪ್ರಗತಿಗೆ ಅಗತ್ಯವಿರುವ ಪ್ರತಿಭೆ ಮತ್ತು ಸಂಪತ್ತೂ ಎರಡನ್ನೂ ಉಳಿಸಿಕೊಳ್ಳದಿದ್ದರೆ ಉಚ್ಛ ಶಿಕ್ಷಣ ಪಡೆದ ಮತ್ತು ಮೇಲ್ವರ್ಗದ ಶ್ರೀಮಂತರೇ ವಲಸೆ ಹೋಗುವುದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುವುದರಿಂದ ಮುಂದೆ ದೇಶಕ್ಕೆ ಬಹುದೊಡ್ಡ ಹಾನಿಯಾಗದೇ ಇರಲಾರದು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ, ತಾಯ್ನಾಡಿನ ಅಲಕ್ಷ್ಯ, ಜಾತೀಯತೆ, ಅನರ್ಹ ವ್ಯಕ್ತಿಗಳಿಗೆ ಪ್ರಾಶಸ್ತ್ಯ; ಈ ಮೀಸಲು ಕೆಲವೊಂದು ಸಂದರ್ಭಗಳಲ್ಲಿ ಎರಡು ಮೂರು ತಲೆಮಾರಿಗೂ ವಿಸ್ತಾರವಾಗಿ ವಿದ್ಯೆ, ಉದ್ಯೋಗ ಮತ್ತು ಬಡ್ತಿಯಲ್ಲೂ ಕಾಯಂ.
ಈ ಮೀಸಲನ್ನು ಪಾರದರ್ಶಕಗೊಳಿಸಿ ಸರ್ವ ಸಮ್ಮತ, ಅನುಮೋದನಾತ್ಮಕ, ಸೈದ್ಧಾಂತಿಕವಾಗಿ, ಕಾರ್ಯಾನುಷ್ಠಾನದ ಬಗ್ಗೆ ಉತ್ತರ ಹುಡುಕುವುದು ಜಠಿಲ ಪ್ರಶ್ನೆಯೇ ಅಲ್ಲ. ಇದೇನು ಮಿಲಿಯನ್ ಡಾಲರ್ ಪ್ರಶ್ನೆಯಂತೂ ಅಲ್ಲ. ಇದರಿಂದ ಪ್ರತಿಭಾವಂತರ ಹತಾಶಾ ಮನೋಭಾವನೆಯಿಂದ ಪ್ರತಿಭಾ ಪಲಾಯನಕ್ಕೆ ಇಂಬು ಪಡೆದುಕೊಂಡಿದೆ. ಸದ್ಯ ವಿದೇಶಗಳಲ್ಲಿ ನೆಲೆಸಿರುವ ಭಾರ
ತೀಯ ನಾಗರಿಕರ ಸಂಖ್ಯೆ 1.8 ಕೋಟಿಯಿದೆ. ಇಡೀ ವಿಶ್ವದಲ್ಲಿ ವಲಸಿಗ ರಾಷ್ಟ್ರಗಳಲ್ಲಿ ಭಾರತವೇ ಫಸ್ಟ್. ಈ ಪೈಕಿ 27 ಲಕ್ಷ
ಭಾರತೀಯರು ಯು.ಎಸ್.ಎ ಯಲ್ಲಿದ್ದಾರೆ, 34 ಲಕ್ಷ ಜನರು ಸಂಯುಕ್ತ ಅರಬ್ ದೇಶಗಳಲ್ಲಿಯೂ, 25 ಲಕ್ಷ ಜನರು ಸೌದಿ ಅರೇಬಿ ಯಾದಲ್ಲಿಯೂ ಇದ್ದಾರೆ. ಉಳಿದವರು ಯು.ಕೆ, ಆಸ್ಟ್ರೇಲಿಯಾ, ಕೆನಡಾ ಹಾಗೂ ಇತರೆ ದೇಶಗಳಲ್ಲಿದ್ದಾರೆ. ವಲಸೆ ಹೋದವ ರೆಲ್ಲರೂ ಅನುಕೂಲಸ್ಥರು, ಐಶ್ವರ್ಯವಂತರೂ ಆಗಿದ್ದಾರೆ.
1960ರಿಂದ ಈವರೆಗೆ 30000 ಐಐಟಿ ಪದವೀಧರರು ಅಮೆರಿಕಕ್ಕೆ ಪಲಾಯನ ಮಾಡಿದ್ದಾರೆ. ಅಲ್ಲಿಯೇ ಬದುಕು ಕಟ್ಟಿಕೊಂಡಿ ದ್ದಾರೆ. ಅಮೆರಿಕದಲ್ಲಿರುವ ಅತ್ಯಂತ ಯಶಸ್ವಿ ಉದ್ಯೋಗಿಗಳು ಭಾರತೀಯ ಪದವೀಧರರು ಮತ್ತು ಹೆಚ್ಚಿನವರು ಐಐಟಿ, ಐಐಎಂ ಗಳಲ್ಲಿ ಓದಿದವರಾಗಿದ್ದಾರೆ. ಐಐಟಿ, ಐಐಎಂಗಳ ಸ್ಥಾಪನೆಯ ಮೂಲ ಉದ್ದೇಶ ದೇಶದ ಕೈಗಾರಿಕೆ, ವೈಜ್ಞಾನಿಕ ಹಾಗೂ ತಾಂತ್ರಿಕ ಸಾಮರ್ಥ್ಯವನ್ನು ಕಟ್ಟುವ ಮೂಲಾಧಾರಗಳಾಗಬೇಕೆಂಬ ಭಾವನೆಯಿಂದ ಸ್ಥಾಪಿಸಲಾಗಿತ್ತು. ಈ ಸಂಸ್ಥೆಗಳು ದೇಶದ ಅತ್ಯುನ್ನತ ಪ್ರತಿಭೆಗಳ ಗಮ್ಯ ಸ್ಥಾನವಾಗಿರುತ್ತದೆ.
ಇಲ್ಲಿನ ಪ್ರತಿಭೆಗಳನ್ನು ನೇಮಕ ಮಾಡಿಕೊಳ್ಳಲು ವಿಶ್ವದ ಪ್ರತಿಷ್ಠಿತ ಸಂಸ್ಥೆಗಳು ಐಐಟಿ, ಐಐಎಂ, ಕ್ಯಾಂಪಸ್‌ಗಳಿಗೆ ಬರುತ್ತವೆ. ಒಂದು ಸಮೀಕ್ಷೆಯ ಪ್ರಕಾರ ಎಲ್ಲಾ ಐಐಟಿ, ಐಐಎಂ ಪದವೀಧರರು ಅಮೆರಿಕಕ್ಕೆ ಹೋಗಲು ಇಚ್ಛಿಸುತ್ತಾರಂತೆ. ಈಗ ವಿಶ್ವದ
ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಮುಖ್ಯಸ್ಥರು ಭಾರತೀಯರೇ ಆಗಿದ್ದಾರೆ. ಸುಂದರ್ ಪಿಚೈ (ಗೂಗಲ್), ಪರಾಗ್ ಅಗರ್‌ವಾಲ್ (ಟ್ವಿಟರ್), ಅರವಿಂದ ಕೃಷ್ಣ (ಐಬಿಎಂ), ವಿನೋದ್ ಕೋಸ್ಲಾ (ಮಾಕೆನ್ವಿ) ಇವರೆಲ್ಲರೂ ಐಐಟಿಯಲ್ಲಿ ಓದಿದವರು. ಪ್ರತಿಭಾ ಪಲಾಯನದಿಂದ ನಾವು ಉತ್ತಮ ಶಿಕ್ಷಣ, ತರಬೇತಿ ಪಡೆದ ಯುವಕ- ಯುವತಿಯರನ್ನು ಕಳೆದುಕೊಳ್ಳುತ್ತಿದ್ದೇವೆ.
ವೈದ್ಯಕೀಯ ಮತ್ತು ತಂತ್ರಜ್ಞಾನ ಕ್ಷೇತ್ರಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಕಳೆದುಕೊಳ್ಳುವ ಪ್ರತಿಭೆಗಳಿಂದ ದೇಶ- ಅಪಾರ ನಷ್ಟ ವನ್ನನುಭವಿಸುತ್ತದೆ. ಅದೇ ಸಂದರ್ಭದಲ್ಲಿ ವಿದೇಶದಲ್ಲಿ ಉತ್ತಮ ಹುದ್ದೆ ಪಡೆದು ಸ್ವದೇಶಕ್ಕೆ ರವಾನೆ ಮಾಡುವ ಮತ್ತು ಉಳಿತಾಯದಿಂದ ಸ್ವದೇಶಕ್ಕೆ ಕಳಿಸುವ ಹಣದಿಂದ ದೇಶದ ಆರ್ಥಿಕಾಭಿವೃದ್ಧಿಗೆ ಪೂರಕವಾಗುವುದರಲ್ಲಿ ಸಂದೇಹವಿಲ್ಲ ಮತ್ತು ಇದೇ ಮಾನದಂಡಕ್ಕೆ ಪ್ರೋತ್ಸಾಹ ನೀಡುವುದು ತರವಲ್ಲ.
ನಮ್ಮ ದೇಶದ ಪ್ರಗತಿಗೆ ಅಗತ್ಯವಿರುವ ಪ್ರತಿಭೆ ಹಾಗೂ ಸಂಪತ್ತು ಎರಡನ್ನೂ ನಾವು ಕಳೆದುಕೊಳ್ಳಬಾರದು. ವಿಶಾಲ ಅರ್ಥದಲ್ಲಿ ವಲಸೆ ಹೋಗುವುದರಲ್ಲಿ ಮೂರು ವರ್ಗಗಳು. ಮೊದಲನೆಯವರು ತಮ್ಮ ನೆಲ ಸುರಕ್ಷಿತವಲ್ಲ, ಎರಡನೆಯವರು ಉದ್ಯೋಗ, ಶಿಕ್ಷಣ, ಹೆಚ್ಚಿನ ಸಂಪಾದನೆ ಎಂಬ ವೈಯಕ್ತಿಕ ಆಕಾಂಕ್ಷೆಯಾದರೆ, ಮೂರನೆಯ ವರ್ಗ ಔದ್ಯೋಗಿಕ ಮಹತ್ವಾಕಾಂಕ್ಷೆ, ಸಂಪತ್ತಿನ ಕ್ರೋಡೀಕರಣ ಹಾಗೂ ಇನ್ನೊಂದು ದೇಶದ ಪೌರತ್ವವನ್ನು ಬಯಸುವವರು.
80-90ರ ದಶಕದಲ್ಲಿ ಹುಟ್ಟಿರುವ ಅನೇಕರು ಇಂದು ವಿದೇಶಗಳಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ. ತಮ್ಮ ಮಾತೃಭೂಮಿಯ ಮೇಲೆ ಅಪಾರ ಗೌರವವಿಟ್ಟುಕೊಂಡೇ ಇವರು ತಮಗೆ ಸೂಕ್ತವೆನಿಸಿದ ಆಯ್ಕೆಗಳನ್ನು ಮಾಡಿಕೊಂಡಿದ್ದಾರೆ. ಇಂದು ವಿದೇಶ ಗಳಲ್ಲಿನ ವಿದ್ಯಾಭ್ಯಾಸ ಮತ್ತು ಉದ್ಯೋಗಗಳು ಕೇವಲ ಪ್ರತಿಷ್ಠೆಯ ಸಂಗತಿಯಾಗಿ ಉಳಿದಿಲ್ಲ; ಬದಲಾಗಿ ಶಾಶ್ವತವಾಗಿ ಹೊರದೇಶ ದಲ್ಲೇ ನೆಲೆಸುವ ಮಹತ್ವಾಕಾಂಕ್ಷೆಯದ್ದಾಗಿದೆ. ಎಲ್ಲರೂ ಬೇಸರ ಪಟ್ಟು ಭಾರತ ಬಿಟ್ಟು ಬಂದವರಲ್ಲ.
ಉತ್ತಮ ಜೀವನಕ್ಕಾಗಿ ಮತ್ತು ಸಂಪಾದನೆಗಾಗಿ, ಅದಲ್ಲದೆ ಕೆಲವು ಅನಿವಾಸಿ ಭಾರತೀಯರಿಗೆ ಸಿಗುವ ಮರ್ಯಾದೆ ಮತ್ತು ಪ್ರೋತ್ಸಾಹದಿಂದ ಯುವ ಜನಾಂಗದವರು ವಿದೇಶದ ಕನಸು ಕಾಣುತ್ತಿರುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ತಾಯ್ನಾಡನ್ನು ತೊರೆದರೂ ವಿದೇಶದ ಜೀವನ ಶೈಲಿ, ಹವಾಮಾನ, ರೀತಿ, ರಿವಾಜು, ಊಟದ ಶೈಲಿ, ಬೇರೆಯಿದ್ದರೂ ಅನಿವಾರ್ಯವಾಗಿ ಹೊಂದಿ ಕೊಳ್ಳುತ್ತಾರೆ. ಅಲ್ಲಿನ ನಾಗರಿಕರಿಗೆ ಅನ್ಯ ದೇಶದವರು ತಮ್ಮ ದೇಶಕ್ಕೆ ಬಂದು ಶಾಶ್ವತವಾಗಿ ನೆಲೆಸುವುದು ಇಷ್ಟ ವಿರುವುದಿಲ್ಲ.
for them it is very difficult to be one among foreigner, ವಿದೇಶಕ್ಕೆ ಹೋಗುವವರು ಅಲ್ಲಿ ಯಾವತ್ತು ಪರದೇಶಿಗಳೇ? ನಮ್ಮಲ್ಲಿ ದೇಶ ಪ್ರೇಮ ವಿಕಾಸಗೊಳ್ಳಬೇಕು, ಪ್ರತಿಭೆಯನ್ನೂ ಗುರುತಿಸಬೇಕು, ಸ್ವಂತ ಉದ್ದಿಮೆಗೆ ಪ್ರೋತ್ಸಾಹ ಹೆಚ್ಚಿದರೆ ಪಲಾಯನಕ್ಕೆ ಕಡಿವಾಣ ಬೀಳುತ್ತದೆ. ಇದೀಗ ನಾವು ಅಮೆರಿಕಾವನ್ನು ಉದಾಹರಣೆಗೆ ತೆಗೆದುಕೊಳ್ಳುವುದಿದ್ದರೆ ಅಮೆರಿಕ ಒಂದು ವಲಸಿಗರ ರಾಷ್ಟ್ರವೆಂದರೆ ತಪ್ಪಿಲ್ಲ (immigrants nation) ಮತ್ತು ಬಹುಸಂಸ್ಕೃತಿಯ ನಾಡಾಗಿದೆ. 1978ರಲ್ಲಿ ನ್ಯೂಯಾರ್ಕ್, ನ್ಯೂಜೆರ್ಸಿ, ಕಾಂನೆಕ್ಟೆಕಟ್ ಗಳಲ್ಲಿ ಭಾರತೀಯ ಸಂಘಗಳ ಒಕ್ಕೂಟ ಸ್ಥಾಪನೆಯಾಯಿತು.
1980ರಲ್ಲಿ ಭಾರತೀಯ ಸಮಾವೇಶವು ನ್ಯೂಯಾರ್ಕ್ ನಲ್ಲಿ ನಡೆಯಿತು. ಇತ್ತೀಚಿನ ಮೂರು ನಾಲ್ಕು ದಶಕಗಳಲ್ಲಿ ರಾಜಕೀಯ
ದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅಮೆರಿಕಾದಲ್ಲಿ ಭಾರತೀಯ ಸಮುದಾಯ 5 ಮಿಲಿಯನ್ ತಲುಪಿದೆ. ಭಾರತೀಯರು
ಮುಂದಿನ ದಿನಗಳಲ್ಲಿ ದೊಡ್ಡಣ್ಣ ಎನಿಸಿಕೊಂಡ ದೇಶದ ಪ್ರಬಲ ರಾಜಕೀಯ ಮತ್ತು ಸಾಮಾಜಿಕ ಶಕ್ತಿಯಾಗಲಿದೆ. ಭಾರತೀಯ ಹಲವಾರು ನಾಯಕರು ಬುಶ್- ಹ್ಯಾರಿಸ್ ಆಡಳಿತದಲ್ಲಿ ಭಾಗಿಯಾಗಿದ್ದರು.
ಭಾರತೀಯ ಮೂಲದ ಕಮಲಾ ಹ್ಯಾರಿಸ್ ಉಪಾಧ್ಯಕ್ಷರಾಗಿಯೇ ಬಿಟ್ಟರು. ಯಾವುದು ಏನೇ ಆದರೂ ಪ್ರಜ್ಞಾವಂತರೆಲ್ಲರೂ ಸೇರಿ ಉತ್ತಮ ಪರಿಕಲ್ಪನೆ ಮಾಹಿತಿಗಳ ಮೂಲಕ ಸಿರಿವಂತರು, ಪ್ರತಿಭಾನ್ವಿತರು ವಿದೇಶಕ್ಕೆ ಪಲಾಯನ ಮಾಡುವವರ ವರ್ತನೆಯಲ್ಲಿ
ಪರಿವರ್ತನೆ ತರಬೇಕು. ಮೊದಲು ದೇಶ. (Nation First)