ಅಭಿಪ್ರಾಯ
ಡಾ.ಸಂದೀಪ್ ನಾಯಕ್
ಮಹಿಳೆಯರಲ್ಲಿ ಅತಿ ಹೆಚ್ಚು ಕಾಡುವ ಭಯವೆಂದರೆ ಸ್ತನಕ್ಯಾನ್ಸರ್. ವಿಶ್ವದಲ್ಲಿ ಶೇ. 25 ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿzರೆ. ಆಘಾತಕಾರಿ ವಿಷಯವೆಂದರೆ ಪ್ರತಿ ವರ್ಷ ಸ್ತನ ಕ್ಯಾನ್ಸರ್ಗೆ ಒಳಗಾಗುತ್ತಿರುವ ಮಹಿಳೆಯರ ಪ್ರಮಾಣ ಏರಿಕೆಯಾಗುತ್ತಲೇ ಇದೆ.
ಆರಂಭದ ಹಂತದಲ್ಲಿಯೇ ಈ ಕ್ಯಾನ್ಸರ್‌ನನ್ನು ಪತ್ತೆ ಹಚ್ಚುವುದರಿಂದ ಮುಂದಾಗುವ ಅಪಾಯವನ್ನು ತಪ್ಪಿಸ ಬಹುದು. ಆದರೆ, ಈ ಕ್ಯಾನ್ಸರ್ ಕೊನೆಯ ಹಂತಕ್ಕೆ ತಲುಪಿದರೆ ಚಿಕಿತ್ಸೆ ಅಸಾಧ್ಯದ ಮಾತು. ಸ್ತನದ ಜೀವಕೋಶ ದಲ್ಲಿ ಬೆಳೆಯುವ ಕ್ಯಾನ್ಸರ್ ಅನ್ನು ಸ್ತನ ಕ್ಯಾನ್ಸರ್ ಎಂದು ಗುರುತಿಸಲಾಗುತ್ತದೆ. ಅಕ್ಟೋಬರ್ ಮಾಸವನ್ನು ಸ್ತನ ಕ್ಯಾನ್ಸರ್ ಮಾಸವೆಂದೇ ವಿಶ್ವಾದ್ಯಂತ ಆಚರಣೆ ಮಾಡಲಾಗುತ್ತಿದೆ.
ಸ್ತನ ಕ್ಯಾನ್ಸರ್ ಪ್ರಾರಂಭದ ಪತ್ತೆ : ಸ್ತನ ಕ್ಯಾನ್ಸರ್ ಅನ್ನು 4 ಹಂತವಾಗಿ ವಿಂಗಡಿಸಲಾಗಿದೆ.
ಹಂತ1: ಸ್ತನ ಕ್ಯಾನ್ಸರ್ ಗಡ್ಡೆಯಾಗಿ ಬೆಳೆಯುತ್ತದೆ. ಪ್ರಾರಂಭದಲ್ಲಿ ಯಾವುದೇ ಮೊಡವೆ ರೀತಿ ಕಂಡು ಬರುವು ದಿಲ್ಲ. ಒಂದು ಎಳೆಯಾಗಿ ಕ್ಯಾನ್ಸರ್ ಒಳಗಡೆ ಬೆಳೆಯುತ್ತಾ ಹೋಗುತ್ತದೆ. ನಂತರದಲ್ಲಿ ಅದು ಗಡ್ಡೆಯಾಗಿ ಮಾರ್ಪಡಲಿದೆ.
ಹಂತ2: ಗಡ್ಡೆ ಸುಮಾರು 2 ಸೆ. ಮೀಟರ್‌ಗೆ ದೊಡ್ಡದಾಗಿ ಬೆಳೆಯಲು ಪ್ರಾರಂಭಿಸುತ್ತದೆ. ನಂತರ ಹತ್ತಿರದ ದುಗ್ಧರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತಾ ಹೋಗುತ್ತದೆ. ಕೆಲವು ಸಮಯದಲ್ಲಿ ಗೆಡ್ಡೆ ಬೆಳೆಯದೇ ಹಾಗೆಯೇ ಉಳಿದು ಕೊಳ್ಳುವ ಸಾಧ್ಯತೆಯೂ ಇದೆ
ಹಂತ 3: ನಂತರ ಹಂತ ಹಂತವಾಗಿ ಗಡ್ಡೆಯ ಗಾತ್ರದಲ್ಲಿ ಬದಲಾವಣೆಯಾಗಬಹುದು. 5 ಸೆ. ಮೀ.ಗೂ ಹೆಚ್ಚು ದೊಡ್ಡದಾಗಿ ಬೆಳೆಯಬಹುದು. ಆಕ್ಸಿಲರಿ ಗ್ರಂಥಿಗಳ ಮೇಲೆ ಹರಡುತ್ತ ಪರಿಣಾಮ ಬೀರುತ್ತದೆ.
ಹಂತ 4: ಸ್ತನ ಕ್ಯಾನ್ಸರ್ ಹರಡುತ್ತಾ ಹೋದಂತೆ ಯಕೃತ್, ಶ್ವಾಸಕೋಶ ಅಥವಾ ಮೆದುಳಿನ ಮೇಲೆ ಪರಿಣಾಮ ಬೀಳುತ್ತದೆ. ಮೂಳೆಗಳಿಗೂ ಹಾನಿ ಯಾಗುವ ಸಾಧ್ಯತೆಯಿದೆ. ಮಹಿಳೆಯರು ಆರಂಭದ ಸ್ತನ ಕ್ಯಾನ್ಸರ್ ಬಗ್ಗೆ ಪತ್ತೆಹಚ್ಚಬೇಕಾದರೆ ಮ್ಯಾಮೊಗ್ರಫಿ ಪರೀಕ್ಷೆಗೆ ಒಳಪಡುವುದು ಉತ್ತಮ. ಆ ಮೂಲಕ ಸ್ತನ ಕ್ಯಾನ್ಸರ್ ಇದೆಯಾ ಎಂದು ಪತ್ತೆ ಹಚ್ಚಬಹುದಾಗಿದೆ.
ಪ್ರಾರಂಭದ ಪತ್ತೆ ಹಚ್ಚಿ: ಮಹಿಳೆಯರು ತಮ್ಮ ಸ್ತನದ ಬಗ್ಗೆ ಆಗಾಗ್ಗೆ ಗಮನ ಹರಿಸುವುದು ಒಳ್ಳೆಯದು. ಅದರಲ್ಲು 45 ಮೇಲ್ಪಟ್ಟ ಮಹಿಳೆಯರು 6 ತಿಂಗಳಿಗೊಮ್ಮೆ ಸ್ತನಕ್ಯಾನ್ಸರ್ ಪರೀಕ್ಷೆ ಮಾಡಿಸಿಕೊಳ್ಳಿ. ಒಂದು ವೇಳೆ ನಿಮ್ಮ ಸ್ತನದಲ್ಲಿ ಮೊಡವೆಯ ರೀತಿ ಇದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ಕೂಡಲೇ ವೈಧ್ಯರನ್ನು ಭೇಟಿ ಮಾಡಿ ತಪಾಸಣೆಗೆ ಒಳಗಾಗಿ. ಪ್ರಾರಂಭದಲ್ಲಿಯೇ ಈ ಕ್ಯಾನ್ಸರ್‌ನನ್ನು ಪತ್ತೆ ಹಚ್ಚುವುದರಿಂದ ಚಿಕಿತ್ಸೆ ಮೂಲಕ ಗುಣಪಡಿಸಬಹುದು.
ಸ್ತನಕ್ಯಾನ್ಸರ್‌ಗೆ ಕಾರಣವೇನು? : ಸ್ತನ ಕ್ಯಾನ್ಸರ್‌ಗೆ ನಿಖರ ಕಾರಣವಿಲ್ಲ. ಆದರೆ ಅನಾರೋಗ್ಯಕರ ಜೀವನ ಶೈಲಿ ಹೊಂದಿದ್ದರೆ, ಮಧ್ಯಪಾನ ಸೇವನೆ, ಬೊಜ್ಜು, ಒಬೆಸೀಟಿ, ವ್ಯಾಯಮ ಮಾಡದೇ ಇರುವುದು ಸೇರಿದಂತೆ ಇತರೆ ಅಂಶಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು ಎನ್ನಲಾಗಿದೆ.
ಪುರುಷರಲ್ಲೂ ಸ್ತನ ಕ್ಯಾನ್ಸರ್!: ಸ್ತನ ಕ್ಯಾನ್ಸರ್ ಕೇವಲ ಮಹಿಳೆಯರಿಗೆ ಮಾತ್ರ ಬರಬಹುದು ಎಂಬ ನಿಮ್ಮಊಹೆ ತಪ್ಪು.ಪುರುಷರಲ್ಲೂ ಈ ಕ್ಯಾನ್ಸರ್ ಕಾಣಿಸಿಕೊಂಡಿರುವ ಉದಾಹರಣೆಗಳಿವೆ. ಪುರುಷರಲ್ಲಿ ಸ್ತನ ಕ್ಯಾನ್ಸರ್ ಬರಲು ಪ್ರಮುಖ ಕಾರಣ ಅನುವಂಶಿಯವಾಗಿರುತ್ತದೆ. ಕುಟುಂಬದಲ್ಲಿ ಈಗಾಗಲೇ ಈ ಕ್ಯಾನ್ಸರ್ಗೆ ಒಳಗಾಗಿದ್ದರೆ ಬರಬಹುದು. ಅದೂ ಅತ್ಯಂತ ವಿರಳ ಎನ್ನಲಾಗಿದೆ. ೧೦೦ ಸ್ತನಕ್ಯಾನ್ಸರ್‌ನ ಪೈಕಿ ಒಬ್ಬ ಪುರುಷ ಇರಲಿದ್ದಾನೆ ಎನ್ನಲಾಗಿದೆ.
ಭಯ ಬೇಡ, ಜಾಗೃತಿ ಇರಲಿ: ಇತ್ತೀಚಿನ ದಿನಗಳಲ್ಲಿ ಸ್ತನಕ್ಯಾನ್ಸರ್ ಬಗ್ಗೆ ಹೆಚ್ಚು ಜಾಗೃತಿ ಉಂಟಾಗಿದೆ. ಮೊದಲೆ ಮಹಿಳೆಯರು ಸ್ತನ ಕ್ಯಾನ್ಸರ್ ಎರಡು ಅಥವಾ ಮೂರನೇ ಹಂತ ತಲುಪಿದ ಮೇಲೆ ಚಿಕಿತ್ಸೆಗೆ ಬರುತ್ತಿದ್ದರು. ಆದರೀಗ, ಪ್ರಾರಂಭದಲ್ಲಿಯೇ ಸ್ತನ ಕ್ಯಾನ್ಸರ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಆದರೆ,
ಗ್ರಾಮೀಣ ಭಾಗದ ಮಹಿಳೆಯರಿಗೆ ಈ ಬಗ್ಗೆ ಜಾಗೃತಿ ಅಗತ್ಯ. ಕೆಲವರು ಎದೆ ಮೇಲಿನ ಮೊಡವೆಯನ್ನು ನಿರ್ಲಕ್ಷಿಸಿ ಈ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕ್ಯಾಂಪ್ ನಡೆಸುವ ಮೂಲಕ ಜಾಗೃತಿ ಮೂಡಿಸಬಹುದು.