Wednesday, 11th December 2024

ದೇಶದ ನಾಗರಿಕರಿಗೆ ಸಮಾನತೆ ದೊರೆಯಲು ಒತ್ತಾಯ

ದೇವದುರ್ಗ: ದೇಶದಲ್ಲಿ ಎರಡು ಸಾವಿರ ವರ್ಷಗಳ ಕಾಲ ಜಾರಿಯಲ್ಲಿದ್ದ ಮನಸ್ಪತಿ ಎಂಬ ಸಂವಿಧಾನವನ್ನು ಭಾರತದ ಬಹುಪಾಲು ಅರಸರು. ಪರಿಪಾಲಿಸಿದ ಪರಿಣಾಮವಾಗಿ, ಬಹುಸಂಖ್ಯಾತ ಭಾರತೀಯರು ಅಸ್ಪೃಶ್ಯತೆ ಮತ್ತು ಜಾತೀಯತೆಯ ಅವಮಾನಕ್ಕೆ ತುತ್ತಾಗಿದೆಂದು ಬಿಎಸ್ಪಿ ಪಕ್ಷದ ತಾಲೂಕಧ್ಯಕ್ಷ ಪ್ರಭು ದಳಪತಿ ಹೇಳಿದರು.

ಬುಧವಾರ ಪಟ್ಟಣದ ಕರೆದಿದ್ದ ಗೋಷ್ಠಿಯಲ್ಲಿ ಮಾತನಾಡಿ, ದೇಶವು ಸ್ವಾತಂತ್ರ್ಯಗೊಂಡು 75 ವರ್ಷ ಪೂರ್ಣ ಗೊಳಿಸಿದೆ. ಡಾ ಸಂವಿಧಾನವು ಜಾರಿಯಾಗಿ 12 ವರ್ಷ ಗತ್ತಿಸಿದರು ಈ ದೇಶವನ್ನು ಆಳಿರುವ ಆಳುತ್ತಿರುವ ರಾಜಕೀಯ ಪಕ್ಷಗಳು ಸಂವಿಧಾನವನ್ನು ಸಂಪೂರ್ಣ ಜಾರಿ ಮಾಡುವುದರಲ್ಲಿ ವಿಫಲಗೊಂಡಿವೆ.

ಈ ದೇಶದ ಬಹು ಸಂಖ್ಯಾತರ ಜನರ ಬದುಕು ಚಿಂತಾಜನಕವಾಗಿದೆ. ಈ ದೇಶದಲ್ಲಿ ಎಸ್.ಸಿ. ಮತ್ತು ಎಸ್.ಟಿ ಓ.ಬಿ.ಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ರಿಗೆ ಸಂವಿಧಾನದಲ್ಲಿ ಮೀಸಲಾತಿ ಇದ್ದರು ಕೂಡ ಅದನ್ನು ಸಂಪೂರ್ಣ ಜಾರಿ ಮಾಡದೇ ಶತಮಾನಗಳ ಕಾಲ ವಿಧ್ಯ ಮತ್ತು ಗೌರವಾನ್ವಿತ ಬದುಕಿನಿಂದ ವಂಚಿತರಾಗಿದ್ದ ಈ ವರ್ಗಗಳಿಗೆ ಸಂವಿ ಧಾನದ ಮೂಲಭೂತ ಹಕ್ಕುಗಳಾಗಿ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡಲಾಗಿದೆ. ಎಸ್‌ಸಿ, ಎಸ್ಟಿಗಳಿಗೆ ರಾಜಕೀಯದಲ್ಲೂ ಮೀಸಲಾತಿ ನೀಡಲಾಗಿದೆ.

ಜನರ ಬಡತವನ್ನು ಶಾಶ್ವತವಾಗಿ ಪರಿಹರಿಸಲು ರಾಜ್ಯನೀತಿ ನಿರ್ದೇಶಕತತ್ವಗಳನ್ನು ಅಡಕಗೊಳಿಸಲಾಯಿತು, ಇವುಗಳ ಪ್ರಕಾರ ಈ ನಾಡಿನ ಭೂಮಿ, ಬಂಡವಾಳ, ಮತ್ತು ಆದಾಯ ಸೃಷ್ಟಿಸುವ ಎಲ್ಲಾ ಉದ್ದಿಮೆಗಳ ಒಡೆತನದಲ್ಲಿ ಎಲ್ಲರಿಗೂ ನ್ಯಾಯಯುತವಾದ ಸಮಾನ ಪಾಲು ದೊರೆಯಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಶಿವಪ್ಪ ಬಲ್ಲಿದವ್,BSP ತಾಲೂಕು ಅಧ್ಯಕ್ಷರು ಪ್ರಭು ದಳಪತಿ ,ಯೇಸು’ ಬಸವರಾಜ್ ಇದ್ದರು.